Monday, November 4, 2024
Homeರಾಷ್ಟ್ರೀಯ | Nationalಭಕ್ತಿ ವಿಡಿಯೋಗಳನ್ನು ಮಾಡುವ 10 ವರ್ಷದ ಬಾಲಕನಿಗೆ ಬಿಷ್ಣೋಯ್‌ ಗ್ಯಾಂಗ್‌ ಬೆದರಿಕೆ

ಭಕ್ತಿ ವಿಡಿಯೋಗಳನ್ನು ಮಾಡುವ 10 ವರ್ಷದ ಬಾಲಕನಿಗೆ ಬಿಷ್ಣೋಯ್‌ ಗ್ಯಾಂಗ್‌ ಬೆದರಿಕೆ

Abhinav Arora Receives Threat Call From Lawrence Bishnoi Gang

ಮಥುರಾ, ಅ.29- ಹತ್ತು ವರ್ಷದ ಆಧ್ಯಾತಿಕ ಗೀತೆ ರಚನೆಕಾರ ಅಭಿನವ್‌ ಅರೋರಾ ಅವರಿಗೆ ಗ್ಯಾಂಗ್‌ಸ್ಟರ್‌ ಲಾರೆನ್ಸ್ ಬಿಷ್ಣೋಯ್‌ ಗ್ಯಾಂಗ್‌ ಜೀವ ಬೆದರಿಕೆ ಹಾಕಿದೆ.

ನನ್ನ ಮಗ ಭಕ್ತಿಯನ್ನು ಹೊರತುಪಡಿಸಿ ಬೇರೆ ಏನು ಮಾಡುತ್ತಿಲ್ಲ ಆದರೂ ಬಿಷ್ಣೋಯ್‌ ಗ್ಯಾಂಗ್‌ ನಮಗೆ ಜೀವ ಬೆದರಿಕೆ ಹಾಕಿದೆ ಎಂದು ಅಭಿನವ್‌ ತಾಯಿ ಜ್ಯೋತಿ ಅರೋರಾ ತಿಳಿಸಿದ್ದಾರೆ.ಲಾರೆನ್ಸ್‌‍ ಬಿಷ್ಣೋಯ್‌ ಗ್ಯಾಂಗ್‌ನಿಂದ ನಮಗೆ ಇಂದು ಬೆದರಿಕೆ ಕರೆ ಸಂದೇಶ ಬಂದಿದೆ.

ಅಲ್ಲಿ ನಮಗೆ ಅಭಿನವ್‌ನನ್ನು ಕೊಲ್ಲಲಾಗುವುದು ಎಂದು ಬೆದರಿಕೆ ಹಾಕಲಾಯಿತು. ನಿನ್ನೆ ರಾತ್ರಿ, ನಾನು ಮಿಸ್‌‍ ಮಾಡಿದ ಕರೆ ನಮಗೆ ಬಂದಿತು. ಇಂದು ಅದೇ ನಂಬರ್‌ನಿಂದ ಅಭಿನವ್‌ನನ್ನು ಕೊಲ್ಲುತ್ತೇವೆ ಎಂದು ನಮಗೆ ಸಂದೇಶ ಬಂದಿದೆ ಎಂದು ಅವರು ಹೇಳಿದರು.

ಗಮನಾರ್ಹವಾಗಿ, ಅಭಿನವ್‌ ಅರೋರಾ ದೆಹಲಿಯ ಆಧ್ಯಾತಿಕ ವಿಷಯ ರಚನೆಕಾರರಾಗಿದ್ದು, ಅವರು ಕೇವಲ ಮೂರು ವರ್ಷದವರಾಗಿದ್ದಾಗ ಅವರ ಆಧ್ಯಾತಿಕ ಪ್ರಯಾಣ ಪ್ರಾರಂಭವಾಯಿತು ಎಂದು ಹೇಳಿಕೊಳ್ಳುತ್ತಾರೆ.

ಸ್ವಾಮಿ ರಾಮಭದ್ರಾಚಾರ್ಯರಿಂದ ಅಭಿನವ್‌ ಅವರನ್ನು ನಿಂದಿಸುತ್ತಿರುವ ವಿಡಿಯೋ ವೈರಲ್‌ ಆಗಿರುವ ಕುರಿತು ಪ್ರತಿಕ್ರಿಯಿಸಿದ ಅವರ ತಾಯಿ, ಹಿರಿಯರ ನಿಂದೆ ಕೂಡ ಆಶೀರ್ವಾದಕ್ಕೆ ಸಮಾನ ಎಂದು ಹೇಳಿದ್ದಾರೆ.

RELATED ARTICLES

Latest News