ಹರಾರೆ, ಜು.8 (ಪಿಟಿಐ)- ಜಿಂಬಾಬ್ವೆ ವಿರುದ್ಧದ ತನ್ನ ಮೊದಲ ಟಿ20 ಪಂದ್ಯದಲ್ಲಿ ರನ್ ಗಳಿಸದೆ ಔಟಾಗಿದ್ದಕ್ಕೆ ನನ್ನ ಮೆಂಟರ್ ಯುವರಾಜ್ ಸಿಂಗ್ ಅವರು ಇದು ಒಳ್ಳೆಯ ಬೆಳವಣಿಗೆ ಎಂದು ಸಂತೋಷಪಟ್ಟಿದ್ದರು ಎಂದು ಭಾರತದ ಆರಂಭಿಕ ಆಟಗಾರ ಅಭಿಷೇಕ್ ಶರ್ಮಾ ಬಹಿರಂಗಪಡಿಸಿದ್ದಾರೆ.
ತಮ ಪಾದಾರ್ಪಣೆ ಪಂದ್ಯದಲ್ಲಿ ಆತಿಥೇಯ ಜಿಂಬಾಬ್ವೆ ವಿರುದ್ಧದ ಪಂದ್ಯದಲ್ಲಿ ಶರ್ಮ ರನ್ ಗಳಿಸಲು ವಿಫಲರಾಗಿದ್ದರು ನಂತರ ನಡೆದ ಎರಡನೆ ಪಂದ್ಯದಲ್ಲಿ 47 ಎಸೆತಗಳಲ್ಲಿ 100ರನ್‌ಗಳಿಸಿ ಮಿಂಚಿದ್ದರು.
ನಾನು ಮೊದಲ ಪಂದ್ಯದಲ್ಲಿ ಶೂನ್ಯದಲ್ಲಿ ಔಟಾದಾಗ ಅವರು ತುಂಬಾ ಸಂತೋಷಪಟ್ಟರು ಏಕೆ ಎಂದು ಕೇಳಿದ್ದಕ್ಕೆ ಮೊದಲ ಪಂದ್ಯದಲ್ಲಿ ಶೂನ್ಯಕ್ಕೆ ಔಟಾದರೆ ಭವಿಷ್ಯದಲ್ಲಿ ಅಂತವರಿಗೆ ಉತ್ತಮ ಅವಕಾಶ ಸಿಗಲಿದೆ ಎಂದು ಸಿಂಗ್ ಹೇಳಿದ್ದರು ಎಂದು ಶರ್ಮ ತಿಳಿಸಿದ್ದಾರೆ.
ಅವರು ಕ್ರಿಕೆಟ್ ಮೈದಾನದಲ್ಲಿ ಕೌಶಲ್ಯಗಳನ್ನು ಅಭಿವದ್ಧಿಪಡಿಸಲು ಸಹಾಯ ಮಾಡಿದ್ದಕ್ಕಾಗಿ ಮಾತ್ರವಲ್ಲದೆ ಮೈದಾನದಿಂದ ದೂರವಿರುವ ಅವರ ಜೀವನದಲ್ಲಿ ಅವರನ್ನು ಬೆಂಬಲಿಸಿದ್ದಕ್ಕಾಗಿ ಭಾರತದ 2011 ರ ವಿಶ್ವಕಪ್ ವಿಜಯದಲ್ಲಿ ಪ್ರಮುಖ ಪಾತ್ರ ನಿರ್ವಹಿಸಿದ್ದ ಯುವರಾಜ್ ಸಿಂಗ್ ಅವರಿಗೆ ಧನ್ಯವಾದ ಅರ್ಪಿಸಿದ್ದಾರೆ.
ಇದೆಲ್ಲವೂ ಅವರಿಂದಾಗಿ, ಅವರು ನನ್ನನ್ನು ರೂಪಿಸಿದ ರೀತಿ, ಕಠಿಣ ಪರಿಶ್ರಮ ನಿಜಕ್ಕೂ ಶ್ಲಾಘನೀಯ ಎಂದು ಅವರು ಹೇಳಿದ್ದಾರೆ.ನಿನ್ನೆ ಪಂದ್ಯದಲ್ಲಿ ಶತಕ ಭಾರಿಸಿದ ನಂತರ ಯುವಿಗೆ ದೂರವಾಣಿ ಮಾಡಿದ್ದೇ ಅವರು ಒಳ್ಳೆಯದು ನೀವು ಅದಕ್ಕೆ ಅರ್ಹರು. ಇನ್ನೂ ಅನೇಕ (ಇಂತಹ ಇನ್ನಿಂಗ್ಸ್ ) ಬರಲು ಇದು ಪ್ರಾರಂಭವಾಗಿದೆ ಎಂದು ತಿಳಿಸಿದರು ಎಂದು ಅವರು ಮಾಹಿತಿ ನೀಡಿದ್ದಾರೆ.
ಮೊದಲ ಎರಡು ಪಂದ್ಯಗಳ ನಡುವೆ ಯಾವುದೇ ವಿಶ್ರಾಂತಿ ದಿನ ಇಲ್ಲದ ಕಾರಣ, ಆರಂಭಿಕ ಸೋಲಿನ ಬಗ್ಗೆ ಯೋಚಿಸಲು ಪ್ರವಾಸಿಗರಿಗೆ ಸಾಕಷ್ಟು ಸಮಯ ಸಿಗಲಿಲ್ಲ ಮತ್ತು ಐದು ಪಂದ್ಯಗಳ ಸರಣಿಯನ್ನು 1-1 ರಿಂದ ಸಮಬಲಗೊಳಿಸಿದ್ದರಿಂದ ಅದು ಭಾರತದ ಪರವಾಗಿ ಕೆಲಸ ಮಾಡಿತು.