Tuesday, July 8, 2025
Homeಬೆಂಗಳೂರುಜ್ಯೂವೆಲರಿ ಮಾಲೀಕರಿಗೆ ವಂಚಿಸಿದ್ದ ಆರೋಪಿ ಸೆರೆ, 2.5 ಕೋಟಿ ರೂ.ಮೌಲ್ಯದ ಚಿನ್ನದ ಗಟ್ಟಿ ಜಪ್ತಿ

ಜ್ಯೂವೆಲರಿ ಮಾಲೀಕರಿಗೆ ವಂಚಿಸಿದ್ದ ಆರೋಪಿ ಸೆರೆ, 2.5 ಕೋಟಿ ರೂ.ಮೌಲ್ಯದ ಚಿನ್ನದ ಗಟ್ಟಿ ಜಪ್ತಿ

Accused who cheated jewellery owner arrested, gold bars worth Rs 2.5 crore seized

ಬೆಂಗಳೂರು, ಜು.8– ಚಿನ್ನಾ ಭರಣದ ಅಂಗಡಿಯಿಂದ ಚಿನ್ನದ ಗಟ್ಟಿಯನ್ನು ಪಡೆದುಕೊಂಡು ಆಭರಣ ತಯಾರಿಸಿಕೊಡದೇ ವಂಚಿಸಿ ಮಾರಾಟ ಮಾಡಿದ್ದ ರಾಜಸ್ಥಾನದ ಆರೋಪಿಯನ್ನು ಜಯನಗರ ಠಾಣೆ ಪೊಲೀಸರು ಬಂಧಿಸಿ 2.5ಕೋಟಿ ರೂ. ಮೌಲ್ಯದ 3 ಕೆಜಿ 166 ಗ್ರಾಂ ಚಿನ್ನದ ಗಟ್ಟಿ ಹಾಗೂ 8.53 ಲಕ್ಷ ರೂ. ನಗದನ್ನು ವಶಪಡಿಸಿ ಕೊಂಡಿದ್ದಾರೆ.

ರಾಜಸ್ಥಾನ ಮೂಲದ ಮನೀಶ್‌ಕುಮಾರ್‌ ಸೋನಿ ಬಂಧಿತ ಆರೋಪಿ. ಈತ ನಗರದ ಸಿದ್ದಾಪುರದಲ್ಲಿ ವಾಸವಾಗಿದ್ದಾನೆ.ಜಯನಗರದ 3ನೇ ಬ್ಲಾಕ್‌ನಲ್ಲಿ ಜ್ಯೂವೆಲರಿ ಅಂಗಡಿಯೊಂದನ್ನು ಇಟ್ಟುಕೊಂಡಿರುವ ಮಾಲೀಕರೊಬ್ಬರು, ಜಯನಗರ 1ನೇ ಬ್ಲಾಕ್‌ನಲ್ಲಿ ಚಿನ್ನಾಭರಣಗಳನ್ನು ಕರಗಿಸುವ ಮತ್ತು ಆಭರಣಗಳನ್ನು ತಯಾರಿಸುವ ಮನೀಶ್‌ಕುಮಾರ್‌ ಸೋನಿ ಅಂಗಡಿಗೆ ಸುಮಾರು 4 ವಷರ್ಗಳಿಂದ ಚಿನ್ನದ ಗಟ್ಟಿಯನ್ನು ಕೊಡುತ್ತಾರೆ.

ಜ್ಯೂವೆಲರಿ ಮಾಲೀಕರು ಹೇಳಿದ ವಿವಿಧ ಶೈಲಿಯ ಒಡವೆಗಳನ್ನು ಮಾಡಿಕೊಡಲಾಗುತ್ತಿತ್ತು. ಅದೇ ರೀತಿ ಆಭರಣ ತಯಾರಿಸಲು ಒಟ್ಟು 8 ಕೆ.ಜಿ 351 ಗ್ರಾಂ ಗಟ್ಟಿ ಚಿನ್ನವನ್ನು ಮಾಲೀಕರು ನೀಡಿದ್ದು, ಚಿನ್ನದ ಗಟ್ಟಿಯನ್ನು ಸ್ವೀಕರಿಸಿದ್ದ ವ್ಯಕ್ತಿಯು ಚಿನ್ನಾಭರಣಗಳನ್ನು ತಯಾರಿಸದೆ, ಗಟ್ಟಿಯನ್ನು ವಾಪಸ್‌‍ ನೀಡದೆ, ಮೋಸ ಮಾಡಿ ತಲೆಮರೆಸಿಕೊಂಡಿದ್ದಾನೆ.

ಈ ಬಗ್ಗೆ ಜ್ಯೂವೆಲರಿ ಮಾಲೀಕರು ಪೊಲೀಸರಿಗೆ ದೂರು ನೀಡಿದ್ದರು. ಪ್ರಕರಣದ ತನಿಖೆಯನ್ನು ಕೈಗೊಂಡ ಪೊಲೀಸರು, ವಿವಿಧ ಆಯಾಮಗಳಲ್ಲಿ ಮಾಹಿತಿಯನ್ನು ಕಲೆಹಾಕಿದಾಗ ಆರೋಪಿ ಗೋವಾದಲ್ಲಿರುವ ಬಗ್ಗೆ ಖಚಿತ ಮಾಹಿತಿ ಲಭಿಸಿದೆ.ತಕ್ಷಣ ಒಂದು ತಂಡ ಅಲ್ಲಿಗೆ ತೆರಳಿ ಗೋವಾದಲ್ಲಿ ಚಿನ್ನದ ಗಟ್ಟಿಯನ್ನು ಸ್ವೀಕರಿಸಿ ವಂಚಿಸಿದ್ದ ಆರೋಪಿಯನ್ನು ವಶಕ್ಕೆ ಪಡೆದು ವಿಚಾರಣೆಗೊಳಪಡಿಸಿದಾಗ ಚಿನ್ನದ ಗಟ್ಟಿಯನ್ನು ಪಡೆದುಕೊಂಡು ವಾಪಸ್‌‍ ನೀಡದೆ ವಂಚಿಸಿರುವುದಾಗಿ ಹೇಳಿದ್ದಾನೆ.

ನಂತರ ಆತನನ್ನು ಪೊಲೀಸರು ನಗರಕ್ಕೆ ಕರೆತಂದು ವಿಚಾರಣೆ ನಡೆಸಿ ಆತ ವಾಸವಿರುವ ಹನುಮಂತನಗರದ ಮನೆಯಿಂದ 3 ಕೆ.ಜಿ 36 ಗ್ರಾಂ ಚಿನ್ನಾಭರಣಗಳನ್ನು ವಶಪಡಿಸಿಕೊಂಡಿದ್ದಾರೆ.ಆರೋಪಿಯನ್ನು ಸುದೀರ್ಘವಾಗಿ ವಿಚಾರಣೆಗೊಳಪಡಿಸಿದ್ದಾಗ ಜ್ಯೂವೆಲರಿ ಮಾಲೀಕರಿಂದ ಸ್ವೀಕರಿಸಿದ್ದ ಚಿನ್ನದ ಗಟ್ಟಿಗಳ ಪೈಕಿ ಸ್ವಲ್ಪ ಚಿನ್ನದ ಗಟ್ಟಿಯನ್ನು ಮಾರಾಟ ಮಾಡಿರುವುದಾಗಿ ತಿಳಿಸಿರುತ್ತಾನೆ.

ತನಿಖೆಯನ್ನು ಮುಂದುವರೆಸಿ ಪೊಲೀಸರು, ಸ್ನೇಹಿತನಿಗೆ ನೀಡಿದ್ದ 8.53 ಲಕ್ಷ ರೂ. ನಗದನ್ನು ಜಯನಗರದಲ್ಲಿ ವಾಸವಿರುವ ಸ್ನೇಹಿತನ ಮನೆಯಿಂದ ವಶಪಡಿಸಿಕೊಂಡಿದ್ದಾರೆ. ಅಲ್ಲದೇ ಅಡಮಾನವಿಟ್ಟಿದ್ದ ಅಂಗಡಿಯಿಂದ 130 ಗ್ರಾಂ ಚಿನ್ನಾಭರಣವನ್ನು ವಶಪಡಿಸಿಕೊಳ್ಳಲಾಗಿದೆ. ಒಟ್ಟಾರೆ 3 ಕೆ.ಜಿ 166 ಗ್ರಾಂ ಚಿನ್ನಾಭರಣ ಹಾಗೂ 8.53ಲಕ್ಷ ರೂ.ನಗದನ್ನು ಇನ್ಸ್ ಪೆಕ್ಟರ್‌ ದೀಪಕ್‌ ಹಾಗೂ ಸಿಬ್ಬಂದಿಗಳ ತಂಡ ಪ್ರಕರಣವನ್ನು ಪತ್ತೆಮಾಡುವಲ್ಲಿ ಯಶಸ್ವಿಯಾಗಿರುತ್ತಾರೆ.


ಅಪಾರ್ಟ್‌ಮೆಂಟ್‌ನಲ್ಲಿ ಕಳ್ಳತನ -ಆರೋಪಿ ಸೆರೆ : 60 ಲಕ್ಷ ಮೌಲ್ಯದ ಆಭರಣಗಳ ವಶ
ಬೆಂಗಳೂರು, ಜು.8-ವಿದೇಶಕ್ಕೆ ತೆರಳಿದ್ದ ಅಪಾರ್ಟ್‌ಮೆಂಟ್‌ನ ನಿವಾಸಿಯೊಬ್ಬರ ಮನೆಗೆ ಕನ್ನ ಹಾಕಿ ವಜ್ರ, ಪ್ಲಾಟಿನಂ ಹಾಗೂ ಚಿನ್ನಾಭರಣಗಳನ್ನು ದೋಚಿದ್ದ ಪಕ್ಕದ ಫ್ಲಾಟ್‌ನ ಆರೋಪಿಯನ್ನು ಹೆಬ್ಬಗೋಡಿ ಠಾಣೆ ಪೊಲೀಸರು ಬಂಧಿಸಿ 60.46 ಲಕ್ಷ ರೂ. ಮೌಲ್ಯದ ಆಭರಣಗಳನ್ನು ವಶಪಡಿಸಿಕೊಂಡಿದ್ದಾರೆ.

ಪಶ್ಚಿಮ ಬಂಗಾಳ ಮೂಲದ ನಿತೀಶ್‌ಸುಬ್ಬು (26) ಬಂಧಿತ ಆರೋಪಿ.ಸಾಫ್‌್ಟವೇರ್‌ ಎಂಜಿನಿಯರ್‌ ಆಗಿರುವ ಅಕ್ಕನ ಜೊತೆ ನಿತೀಶ್‌ ನೆಲೆಸಿದ್ದು, ರಿಯಲ್‌ ಎಸ್ಟೇಟ್‌ ಉದ್ಯಮ ನಡೆಸುತ್ತಿದ್ದ. ಇತ್ತೀಚೆಗೆ ಆರೋಪಿ ಈ ಉದ್ಯಮ ಕೈಬಿಟ್ಟಿದ್ದಾನೆ. ಆನೇಕಲ್‌ ತಾಲ್ಲೂಕಿನ ತಿರುಪಾಳ್ಯದಲ್ಲಿರುವ ಅಪಾರ್ಟ್‌ಮೆಂಟ್‌ವೊಂದರಲ್ಲಿ ವಾಸವಾಗಿರುವ ವ್ಯಕ್ತಿಯೊಬ್ಬರು ಕೆಲಸದ ನಿಮಿತ್ತ ಡೆಹರಾಡೂನ್‌ಗೆ ತೆರಳಿದ್ದರು.

ಈ ವಿಷಯ ತಿಳಿದಿದ್ದ ಪಕ್ಕದ ಬ್ಲಾಕ್‌ನ ಅಪಾರ್ಟ್‌ಮೆಂಟ್‌ನಲ್ಲಿ ವಾಸವಾಗಿದ್ದ ಆರೋಪಿ ನಿತೀಶ್‌ ಅವರ ಮನೆ ಬಳಿ ತೆರಳಿ ಮುಂಬಾಗಿಲನ್ನು ಮುರಿದು ಒಳ ನುಗ್ಗಿ ಬೀರುವಿನಲ್ಲಿದ್ದ ಪ್ಲಾಟಿನಂ,ವಜ್ರ, ಚಿನ್ನಾಭರಣಗಳು, ಬೆಳ್ಳಿ ವಸ್ತುಗಳು ಹಾಗೂ ಹಣವನ್ನು ಕಳ್ಳತನ ಮಾಡಿ ಪರಾರಿಯಾಗಿದ್ದಾನೆ. ಕೆಲ ಸಮಯದ ಬಳಿಕ ಪಕ್ಕದ ಮನೆಯವರು ಗಮನಿಸಿ ಮನೆ ಮಾಲೀಕರಿಗೆ ಕರೆಮಾಡಿ, ಮನೆಯ ಮುಂಬಾಗಿಲನ್ನು ಯಾರೋ ಅಪರಿಚಿತರು ಮುರಿದಿರುವುದಾಗಿ ತಿಳಿಸಿರುತ್ತಾರೆ.

ಡೆಹರಡೂನ್‌ನಿಂದ ವಾಪಸ್‌‍ ಬಂದ ಮಾಲೀಕರು, ಮನೆಯ ಕೊಠಡಿಯ ಬೀರುವಿನಲ್ಲಿಟ್ಟಿದ್ದ ಚಿನ್ನಾಭರಣ, ವಜ್ರದ ಆಭರಣಗಳು, ಪ್ಲಾಟಿನಂ ಆಭರಣಗಳು, ಬೆಳ್ಳಿಯ ವಸ್ತುಗಳು ಹಾಗೂ ಹಣ ಕಳ್ಳತನವಾಗಿರುವುದು ಕಂಡು ಪೊಲೀಸರಿಗೆ ದೂರು ನೀಡಿದ್ದಾರೆ.ಪ್ರಕರಣ ದಾಖಲಿಸಿಕೊಂಡ ಪೊಲೀಸರು ವಿವಿಧ ಆಯಾಮಗಳಲ್ಲಿ ತನಿಖೆಯನ್ನು ಕೈಗೊಂಡು, ಖಚಿತ ಮಾಹಿತಿಯನ್ನು ಕಲೆಹಾಕಿ, ಪಕ್ಕದ ಬ್ಲಾಕ್‌ನ ಹತ್ತಿರ ಅನುಮಾನಾಸ್ಪದವಾಗಿ ತಿರುಗಾಡುತ್ತಿದ್ದ ವ್ಯಕ್ತಿಯನ್ನು ವಶಕ್ಕೆಪಡೆದು ವಿಚಾರಣೆಗೊಳಪಡಿಸಿದಾಗ ಕಳ್ಳತನ ಮಾಡಿರುವುದಾಗಿ ಹೇಳಿದ್ದಾನೆ.

ಕಳವು ಮಾಡಿದ ಚಿನ್ನಾಭರಣ, ವಜ್ರದ ಆಭರಣಗಳು, ಪ್ಲಾಟಿನಂ ಆಭರಣಗಳು, ಬೆಳ್ಳಿಯ ವಸ್ತುಗಳು ಹಾಗೂ ಹಣವನ್ನು ಆತನು ವಾಸವಿರುವ ಅಪಾರ್ಟ್‌ಮೆಂಟ್‌ನಲ್ಲಿಟ್ಟಿರುವುದಾಗಿ ತಿಳಿಸಿದ ಮೇರೆಗೆ ಪೊಲೀಸರು ಆತನ ಅಪಾರ್ಟ್‌ಮೆಂಟ್‌ನ್ನು ಶೋಧ ಮಾಡಿ 621.08 ಗ್ರಾಂ ಚಿನ್ನಾಭರಣಗಳು, 15.79 ಗ್ರಾಂ ವಜ್ರದ ಆಭರಣಗಳು, 4.3 ಗ್ರಾಂ ಪ್ಲಾಟಿನಂ ಆಭರಣ, 56.2 ಗ್ರಾಂ ಬೆಳ್ಳಿಯ ವಸ್ತುಗಳು ಹಾಗೂ 28 ಸಾವಿರ ಹಣವನ್ನು ವಶಪಡಿಸಿಕೊಂಡಿದ್ದಾರೆ. ಆರೋಪಿಯ ಬಂಧನದಿಂದ ಹೆಬ್ಬಗೋಡಿ ಪೊಲೀಸ್‌‍ ಠಾಣೆಯ 3 ಮನೆ ಕನ್ನ ಕಳವು ಪ್ರಕರಣಗಳನ್ನು ಪತ್ತೆ ಹಚ್ಚುವಲ್ಲಿ ಇನ್‌್ಸಪೆಕ್ಟರ್‌ ಸೋಮಶೇಖರ್‌ ಹಾಗೂ ಸಿಬ್ಬಂದಿ ತಂಡ ಯಶಸ್ವಿಯಾಗಿದೆ.


ಸಿಕ್ಕಿಬಿದ್ದ ಕುಖ್ಯಾತ ಸರ ಅಪಹರಣಕಾರ, 53 ಲಕ್ಷ ಮೌಲ್ಯದ ಚಿನ್ನಾಭರಣ ಜಪ್ತಿ
ಬೆಂಗಳೂರು,ಜು.8- ಸರ ಅಪಹರಣ ಮಾಡುವುದನ್ನೇ ವೃತ್ತಿಯಾಗಿಸಿಕೊಂಡು ದ್ವಿಚಕ್ರ ವಾಹನದಲ್ಲಿ ಸುತ್ತಾಡುತ್ತಾ 180 ಕ್ಕೂ ಹೆಚ್ಚು ಸರಗಳನ್ನು ಎಗರಿಸಿದ್ದ ಆರೋಪಿಯೊಬ್ಬನನ್ನು ಗಿರಿನಗರ ಠಾಣೆ ಪೊಲೀಸರು ಬಂಧಿಸಿ 52.89 ಲಕ್ಷ ರೂ. ಮೌಲ್ಯದ ಚಿನ್ನಾಭರಣವನ್ನು ವಶಪಡಿಸಿಕೊಂಡಿದ್ದಾರೆ.

ಹಾವೇರಿಯ ಕೋಳಿವಾಡದ ನಿವಾಸಿ ಅಚ್ಚುತ್‌ ಅಲಿಯಾಸ್‌‍ ವಿಶ್ವನಾಥ್‌ ಅಲಿಯಾಸ್‌‍ ಘಣಿ (37) ಬಂಧಿತ ಸರಗಳ್ಳ. ಸುಂಕದಕಟ್ಟೆಯಲ್ಲಿ ವಾಸವಿರುವ ಈತನ ವಿರುದ್ಧ 180ಕ್ಕೂ ಹೆಚ್ಚು ಸರ ಅಪಹರಣ ಪ್ರಕರಣಗಳು ನಗರ ಸೇರಿದಂತೆ ವಿವಿಧ ಪೊಲೀಸ್‌‍ ಠಾಣೆಗಳಲ್ಲಿ ದಾಖಲಾಗಿವೆ. ಗಿರಿನಗರದ 2ನೇ ಹಂತ, 8ನೇ ಎ ಕ್ರಾಸ್‌‍ನ ನಿವಾಸಿಯೊಬ್ಬರು ಜೂ.16 ರಂದು ರಾತ್ರಿ 8.20 ರ ಸಮಯದಲ್ಲಿ ಮನೆಯ ಎದುರುಗಡೆ ಇರುವ ಗಿಡದಿಂದ ಪಾರಿಜಾತ ಹೂವನ್ನು ಕಿತ್ತುಕೊಂಡು ಮನೆಯ ಕಡೆಗೆ ಹೋಗುತ್ತಿದ್ದಾಗ ವಿಳಾಸ ಕೇಳುವ ನೆಪದಲ್ಲಿ ದ್ವಿಚಕ್ರ ವಾಹನದಲ್ಲಿ ಬಂದ ವ್ಯಕ್ತಿ ಗಮನ ಸೆಳೆದು ಮಹಿಳೆಯ ಕುತ್ತಿಗೆಯಲ್ಲಿದ್ದ 50 ಗ್ರಾಂ ಚಿನ್ನದ ಸರವನ್ನು ಕಿತ್ತುಕೊಂಡು ಪರಾರಿಯಾಗಿದ್ದನು.

ಸರ ಕಿತ್ತುಕೊಳ್ಳುವ ರಭಸಕ್ಕೆ ಮಹಿಳೆ ರಸ್ತೆಯ ಮೇಲೆ ಬಿದ್ದು, ತಲೆಗೆ ಪೆಟ್ಟಾಗಿದೆ. ಈ ಬಗ್ಗೆ ಅವರು ಪೊಲೀಸರಿಗೆ ದೂರು ನೀಡಿದ್ದಾರೆ.ಪ್ರಕರಣದ ತನಿಖೆಯನ್ನು ಕೈಗೊಂಡ ಪೊಲೀಸರು ಹೊಸಕೆರೆ ಹಳ್ಳಿ ಡಿಸೋಜಾ ನಗರದಲ್ಲಿ ಆರೋಪಿಯನ್ನು ಕೃತ್ಯಕ್ಕೆ ಬಳಸಿದ ಬೈಕ್‌ ಸಮೇತ ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಸರ ಅಪಹರಣ ಮಾಡಿರುವುದಾಗಿ ಹೇಳಿದ್ದಾನೆ.

ನಂತರ ಆರೋಪಿಯನ್ನು ಸುದೀರ್ಘವಾಗಿ ವಿಚಾರಣೆಗೊಳಪಡಿಸಿ ಹೈದರಾಬಾದ್‌ ಹಾಗೂ ಕೇರಳ ರಾಜ್ಯದ ಪಾಲಕ್ಕಾಡ್‌ ಜ್ಯೂವೆಲರಿ ಅಂಗಡಿಯ ಮಾಲೀಕರುಗಳಿಂದ 541 ಗ್ರಾಂ ಚಿನ್ನಾಭರಣಗಳನ್ನು ವಶಪಡಿಸಿಕೊಂಡಿದ್ದಾರೆ.ಆರೋಪಿಯ ಬಂಧನದಿಂದ ಒಟ್ಟಾರೆ 541 ಗ್ರಾಂ ಚಿನ್ನಾಭರಣ ಹಾಗೂ ಕೃತ್ಯಕ್ಕೆ ಬಳಸಿದ ದ್ವಿಚಕ್ರ ವಾಹನವನ್ನು ವಶಪಡಿಸಿಕೊಂಡಿದ್ದು ಇದರ ಮೌಲ್ಯ 52.89 ಲಕ್ಷ ರೂ.ಗಳೆಂದು ಅಂದಾಜಿಸಲಾಗಿದೆ.


ಆಂಧ್ರದ ಸ್ಮಗ್ಲರ್‌ ರವಿ ಬಂಧನ, 40 ದ್ವಿಚಕ್ರ ವಾಹನಗಳ ವಶ
ಬೆಂಗಳೂರು,ಜು.8- ಪಾರ್ಕಿಂಗ್‌ ಸ್ಥಳಗಳಲ್ಲಿ ಹಾಗೂ ಮನೆಗಳ ಮುಂದೆ ನಿಲ್ಲಿಸಿದಂತಹ ದ್ವಿಚಕ್ರ ವಾಹನಗಳನ್ನು ಕಳವು ಮಾಡುತ್ತಿದ್ದ ಹೊರ ರಾಜ್ಯದ ಆರೋಪಿಯನ್ನು ಯಲಹಂಕ ಠಾಣೆ ಪೊಲೀಸರು ಬಂಧಿಸಿ 30 ಲಕ್ಷ ರೂ. ಮೌಲ್ಯದ 40 ದ್ವಿಚಕ್ರ ವಾಹನಗಳನ್ನು ವಶಪಡಿಸಿಕೊಂಡಿದ್ದಾರೆ.

ಆಂಧ್ರಪದೇಶದ ರವಿ ನಾಯಕ್‌ ಅಲಿಯಾಸ್‌‍ ಸಗ್ಲರ್‌ ರವಿ (45) ಬಂಧಿತ ಆರೋಪಿ. ಈತ ಈ ಹಿಂದೆ ಆಂಧ್ರಪ್ರದೇಶ, ಚಿತ್ತೂರು ಸೇರಿದಂತೆ ವಿವಿಧ ಕಡೆಗಳಲ್ಲಿ ಶ್ರೀಗಂಧ ಕಳ್ಳತನ ಮಾಡುತ್ತಿದ್ದರಿಂದ ಆರೋಪಿ ಸಗ್ಲರ್‌ ರವಿಯೆಂದೇ ಚಿರಪರಿಚಿತ. ಯಲಹಂಕ ನಿವಾಸಿಯೊಬ್ಬರು ಹಾಡ ಹಗಲು ಮನೆಯ ಪಕ್ಕದಲ್ಲಿ ದ್ವಿಚಕ್ರ ವಾಹನವನ್ನು ನಿಲ್ಲಿಸಿದ್ದಾಗ ಕೆಲವೇ ನಿಮಿಷಗಳಲ್ಲಿ ವಾಹನ ಕಳ್ಳತನವಾಗಿತ್ತು. ಈ ಬಗ್ಗೆ ಅವರು ಪೊಲೀಸರಿಗೆ ದೂರು ನೀಡಿದ್ದಾರೆ.

ಪ್ರಕರಣದ ತನಿಖೆಯನ್ನು ಮುಂದುವರೆಸಿದ ಪೊಲೀಸರು, ಬಾಗಲೂರು ಕ್ರಾಸ್‌‍ ಬಳಿ ಆರೋಪಿಯೊಬ್ಬನನ್ನು ದ್ವಿಚಕ್ರ ವಾಹನ ಸಮೇತ ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ವಾಹನ ಕಳವು ಮಾಡಿರುವುದಾಗಿ ತಿಳಿಸಿದ್ದು, ಯಲಹಂಕ ರೈಲ್ವೆ ನಿಲ್ದಾಣದ ಬಳಿ ಕಳವು ಮಾಡಿ ನಿಲ್ಲಿಸಿದ್ದ ಮತ್ತೊಂದು ದ್ವಿಚಕ್ರ ವಾಹನವನ್ನು ವಶಪಡಿಸಿಕೊಂಡಿದ್ದಾರೆ.

ಆರೋಪಿಯನ್ನು ಸುದೀರ್ಘವಾಗಿ ವಿಚಾರಣೆಗೊಳಪಡಿಸಲಾಗಿ, ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ ಹಾಗೂ ಚಿಕ್ಕಬಳ್ಳಾಪುರ ಜಿಲ್ಲೆಗಳಲ್ಲಿ ದ್ವಿಚಕ್ರ ವಾಹನಗಳನ್ನು ಕಳವು ಮಾಡಿರುವುದಾಗಿ ತಿಳಿಸಿದ್ದು, ಈ ಪೈಕಿ 11 ದ್ವಿಚಕ್ರ ವಾಹನಗಳನ್ನು ಮಾರಾಟ ಮಾಡಿರುವುದಾಗಿ ಹಾಗೂ ಉಳಿದ 27 ದ್ವಿಚಕ್ರ ವಾಹನಗಳನ್ನು ಮಾರಾಟ ಮಾಡುವ ಸಲುವಾಗಿ ಅಂಧ್ರ ಪ್ರದೇಶದ ಕೆಲವು ಸ್ಥಳಗಳಲ್ಲಿ ನಿಲ್ಲಿಸಿರುವುದಾಗಿ ತಿಳಿಸಿರುತ್ತಾನೆ.

ಆರೋಪಿಯು ನೀಡಿದ ಮಾಹಿತಿ ಮೇರೆಗೆ ಒಟ್ಟು 40 ದ್ವಿಚಕ್ರ ವಾಹನಗಳನ್ನು ವಶಪಡಿಸಿಕೊಳ್ಳಲಾಗಿದೆ. ಆರೋಪಿಯ ಬಂಧನದಿಂದ ಒಟ್ಟು 29 ದ್ವಿಚಕ್ರ ವಾಹನಗಳ ಕಳವು ಪ್ರಕರಣಗಳು ಪತ್ತೆಯಾಗಿದ್ದು, ಉಳಿದ 11 ದ್ವಿ-ಚಕ್ರ ವಾಹನಗಳ ವಾರಸುದಾರರ ಪತ್ತೆಕಾರ್ಯ ಮುಂದುವರೆದಿದೆ. ಈ ಕಾರ್ಯಾಚರಣೆಯನ್ನು ಇನ್‌್ಸಪೆಕ್ಟರ್‌ ಕೃಷ್ಣಮೂರ್ತಿ ಮತ್ತು ಸಿಬ್ಬಂದಿಗಳ ತಂಡ ಕೈಗೊಂಡಿತ್ತು.

ಆರೋಪಿಯ ಬಂಧನದಿಂದ ಹಗಲು ಕನ್ನ ಕಳವು ಪ್ರಕರಣ ಸೇರಿದಂತೆ ಒಟ್ಟು 10 ಸರ ಅಪಹರಣ ಪ್ರಕರಣಗಳು ಮತ್ತು 1 ಹಗಲು ಕನ್ನ ಕಳವು ಪ್ರಕರಣ ಸೇರಿದಂತೆ ಒಟ್ಟು 11 ಪ್ರಕರಣಗಳು ಪತ್ತೆ ಹಚ್ಚುವಲ್ಲಿ  ಇನ್‌್ಸಪೆಕ್ಟರ್‌ ಸತೀಶ್‌ಕುಮಾರ್‌ ಹಾಗೂ ಸಿಬ್ಬಂದಿ ಯಶಸ್ವಿಯಾಗಿದ್ದಾರೆ.
RELATED ARTICLES

Latest News