Home ಇದೀಗ ಬಂದ ಸುದ್ದಿ ಇಂಡಿ ಮೈತ್ರಿಕೂಟಕ್ಕೆ ನಿತೀಶ್ ಕುಮಾರ್ ಕೊನೇ ಮೊಳೆ ಹೊಡೆದಿದ್ದಾರೆ

ಇಂಡಿ ಮೈತ್ರಿಕೂಟಕ್ಕೆ ನಿತೀಶ್ ಕುಮಾರ್ ಕೊನೇ ಮೊಳೆ ಹೊಡೆದಿದ್ದಾರೆ

0
ಇಂಡಿ ಮೈತ್ರಿಕೂಟಕ್ಕೆ ನಿತೀಶ್ ಕುಮಾರ್ ಕೊನೇ ಮೊಳೆ ಹೊಡೆದಿದ್ದಾರೆ

ನವದೆಹಲಿ,ಜ.29- ಐಎನ್‍ಡಿಐಎ ಮೈತ್ರಿಕೂಟಕ್ಕೆ ನಿತೀಶ್‍ಕುಮಾರ್ ಅಂತ್ಯಸಂಸ್ಕಾರ ಮಾಡಿದರು ಎಂದು ಕಾಂಗ್ರೆಸ್ ನಾಯಕ ಆಚಾರ್ಯ ಪ್ರಮೋದ್ ಕೃಷ್ಣ ಹೇಳಿದ್ದಾರೆ. ಇಂಡಿ ಮೈತ್ರಿಕೂಟವು ಆರಂಭದಿಂದಲೂ ಗಂಭಿರ ಖಾಯಿಲೆಗಳಿಗೆ ತುತ್ತಾಗಿತ್ತು.

ನಂತರ ಅದು ಐಸಿಯುಗೆ ಹೋಯಿತು. ಆಮೇಲೆ ಅದನ್ನು ವೆಂಟಿಲೇಟರ್‍ನಲ್ಲಿ ಇರಿಸಲಾಯಿತು. ನಿನ್ನೆ ನಿತೀಶ್‍ಕುಮಾರ್‍ರವರು ಅಂತ್ಯಸಂಸ್ಕಾರ ಮಾಡಿದರು. ಈಗ ಮೈತ್ರಿಕೂಟಕ್ಕೆ ಏನಾಗುತ್ತಿದೆ ಎಂದು ಪ್ರಶ್ನಿಸಿದ್ದಾರೆ.