Monday, November 25, 2024
Homeಮನರಂಜನೆಖ್ಯಾತ ನಟ, ರಾಜಕಾರಣಿ ವಿಜಯಕಾಂತ್ ನಿಧನ

ಖ್ಯಾತ ನಟ, ರಾಜಕಾರಣಿ ವಿಜಯಕಾಂತ್ ನಿಧನ

ಚೆನ್ನೈ,ಡಿ.28- ತಮಿಳು ಚಿತ್ರರಂಗದ ಖ್ಯಾತ ನಟ ಹಾಗೂ ರಾಜಕಾರಣಿ ವಿಜಯಕಾಂತ್ ಇಂದು ನಿಧನ ಹೊಂದಿದ್ದಾರೆ. ಅವರಿಗೆ 71 ವರ್ಷ ವಯಸ್ಸಾಗಿತ್ತು. ನಟ ರಾಜಕಾರಣಿಯಾಗಿರುವ ಡಿಎಂಡಿಕೆ ಮುಖ್ಯಸ್ಥ ವಿಜಯಕಾಂತ್ ಅವರಿಗೆ ಕೋವಿಡ್ ತಪಾಸಣೆಯಲ್ಲಿ ಪಾಸಿಟಿವ್ ವರದಿ ಬಂದಿತ್ತು. ಅವರು ಅನಾರೋಗ್ಯದಿಂದ ಬಳಲುತ್ತಿದ್ದರು ಎನ್ನಲಾಗಿದೆ. ಸಾವಿಗೂ ಮುನ್ನ ಅವರಿಗೆ ವೆಂಟಿಲೇಟರ್‍ನಲ್ಲಿಟ್ಟು ಚಿಕಿತ್ಸೆ ನೀಡಲಾಗುತ್ತಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೇ ಅವರು ಕೊನೆಯುಸಿರೆಳಿದಿದ್ದಾರೆ.

150ಕ್ಕೂ ಹೆಚ್ಚು ಸಿನಿಮಾಗಳಲ್ಲಿ ನಟಿಸಿದ್ದ ವಿಜಯಕಾಂತ್ ನಿಧನಕ್ಕೆ ತಮಿಳು ಚಿತ್ರರಂಗದ ಗಣ್ಯರು, ರಾಜಕೀಯ ನಾಯಕರು, ಅಭಿಮಾನಿಗಳು ಶೋಕ ವ್ಯಕ್ತಪಡಿಸಿದ್ದಾರೆ. ಕಳೆದ ಕೆಲ ವರ್ಷಗಳಿಂದಲೂ ಒಂದರ ಹಿಂದೊಂದು ಆರೋಗ್ಯ ಸಮಸ್ಯೆಗೆ ವಿಜಯಕಾಂತ್ ಗುರಿಯಾಗುತ್ತಲೇ ಇದ್ದರು. ಕೆಮ್ಮು ಹಾಗೂ ಜ್ವರದಿಂದ ಬಳಲುತ್ತಿದ್ದ ಅವರನ್ನು ಚೆನ್ನೈನ ಖಾಸಗಿ ಆಸ್ಪತ್ರೆಯೊಂದಕ್ಕೆ ದಾಖಲಿಸಲಾಗಿತ್ತು. ಆಸ್ಪತ್ರೆಗೆ ದಾಖಲಿಸಿದಾಗಿನಿಂದಲೂ ಅವರ ಆರೋಗ್ಯದಲ್ಲಿ ಚೇತರಿಕೆ ಕಂಡಿರಲಿಲ್ಲ. ಜೊತೆಗೆ ಮಧುಮೇಹದಿಂದಲೂ ಬಳಲುತ್ತಿದ್ದರು. ಮಧುಮೇಹ ವಿಪರೀತವಾಗಿದ್ದರಿಂದ ಹಿಂದಿನ ವರ್ಷ ಅವರ ಮೂರು ಬೆರಳುಗಳನ್ನು ಕತ್ತರಿಸಲಾಗಿತ್ತು.

ಕಂಬಕ್ಕೆ ಕಾರು ಅಪ್ಪಳಿಸಿ ನಾಲ್ವರು ಯುವಕರ ಸಾವು

ಶ್ವಾಸಕೋಶ ದುರ್ಬಲವಾಗಿತ್ತು ಎಂದು ವೈದ್ಯ ಮೂಲಗಳು ತಿಳಿಸಿವೆ. ಅವರನ್ನು ಚೆನ್ನೈನ ಆಸ್ಪತ್ರೆಯಲ್ಲಿ ತೀವ್ರ ನಿಗಾ ಘಟಕದಲ್ಲಿಡಲಾಗಿತ್ತು. ವಿಜಯಕಾಂತ್ ಅವರು ಆರೋಗ್ಯ ಹದಗೆಡುತ್ತಿದೆ ಎಂಬ ಸುದ್ದಿಯ ಮಧ್ಯೆ ಡಿಸೆಂಬರ್ 15 ರಂದು ವಿಜಯಕಾಂತ್ ಅವರ ಪತ್ನಿ ಪ್ರೇಮಲತಾ ವಿಜಯಕಾಂತ್ ಅವರು ಡಿಎಂಡಿಕೆ ಪ್ರಧಾನ ಕಾರ್ಯದರ್ಶಿಯಾಗಿ ಜವಾಬ್ದಾರಿ ವಹಿಸಿಕೊಂಡರು. ಪ್ರಧಾನ ಕಾರ್ಯದರ್ಶಿಯಾಗಿ ತಮ್ಮ ಉದ್ಘಾಟನಾ ಭಾಷಣದಲ್ಲಿ ಪ್ರೇಮಲತಾ ವಿಜಯಕಾಂತ್ ಅವರು ಪಕ್ಷ ಮತ್ತು ಅದರ ಸದಸ್ಯರ ಬಗೆಗಿನ ತಮ್ಮ ಬದ್ಧತೆ ಕುರಿತು ಮಾತನಾಡಿದ್ದರು. ನನಗೆ ವಿಜಯಕಾಂತ್ ಅವರು ಪ್ರಧಾನ ಕಾರ್ಯದರ್ಶಿ ಹುದ್ದೆ ನೀಡಿದ್ದಾರೆ. ಡಿಎಂಡಿಕೆ ಪಕ್ಷವು ಜನರ ಕಲ್ಯಾಣಕ್ಕಾಗಿ ಸ್ಥಾಪಿತವಾದದ್ದು. ನಾನು ನಿಮ್ಮೆಲ್ಲರ ಜತೆ ನಿಕಟವಾಗಿ ಪಕ್ಷಕ್ಕಾಗಿ, ಅಭಿವೃದ್ಧಿಗಾಗಿ ಶ್ರಮಿಸುತ್ತೇನೆ ಎಂದು ತಿಳಿಸಿದ್ದರು.

ಚಿತ್ರರಂಗದ ಹಿನ್ನಲೆ :
1952ರಲ್ಲಿ ಆಗಸ್ಟ್ 25 ರಂದು ಜನಿಸಿದ ವಿಜಯಕಾಂತ್ ಮೂಲ ಹೆಸರು ನಾರಾಯಣ ವಿಜಯರಾಜ ಅಲಗರಸ್ವಾಮಿ, ಮುಂದೆ ವಿಜಯಕಾಂತ್ ಹೆಸರಿನಿಂದಲೇ ಫೇಮಸ್ ಆಗಿದ್ದರು. 2011ರಿಂದ 2016ರವರೆಗೆ ತಮಿಳುನಾಡು ವಿಧಾನಸಭೆಯಲ್ಲಿ ವಿರೋಧ ಪಕ್ಷದ ನಾಯಕರಾಗಿಯೂ ಕಾರ್ಯ ನಿರ್ವಹಿಸಿದ್ದರು. ಬರೀ ನಟನೆ ಮಾತ್ರವಲ್ಲದೇ ಸಿನಿಮಾ ನಿರ್ಮಾಣ, ನಿರ್ದೇಶನದಲ್ಲೂ ಕೆಲಸ ಮಾಡಿದ್ದರು. 1979ರಲ್ಲಿ ತೆರೆಕಂಡ ಇನಿಕ್ಕುಂ ಇಳಮೈ ಸಿನಿಮಾದಲ್ಲಿ ಖಳನಾಯಕನ ಪಾತ್ರ ಮಾಡುವ ಮೂಲಕ ತಮಿಳು ಸಿನಿಮಾರಂಗಕ್ಕೆ ಕಾಲಿರಿಸಿದರು.

ಮೋದಿ ನೇತೃತ್ವದಲ್ಲಿ ಬದಲಾಗುತ್ತಿದೆ ಭಾರತ : ಓಂ ಬಿರ್ಲಾ

2005ರಲ್ಲಿ ದೇಸಿಯ ಮುರಪೊಕ್ಕು ದ್ರಾವಿಡ ಕಳಗಂ ಹೆಸರಿನ ತಮ್ಮದೇ ರಾಜಕೀಯ ಪಕ್ಷವನ್ನೂ ಸಹ ಸ್ಥಾಪಿಸಿ, ರಾಜಕೀಯಕ್ಕೆ ಧುಮುಕಿದ ವಿಜಯಕಾಂತ್ 2011ರಿಂದ 2016 ರ ವರೆಗೆ ತಮಿಳುನಾಡು ವಿಧಾನಸಭೆ ವಿರೋಧ ಪಕ್ಷ ನಾಯಕನಾಗಿಯೂ ಕೆಲಸ ಮಾಡಿದ್ದಾರೆ.

RELATED ARTICLES

Latest News