Thursday, December 12, 2024
Homeರಾಷ್ಟ್ರೀಯ | Nationalಕಂಬಕ್ಕೆ ಕಾರು ಅಪ್ಪಳಿಸಿ ನಾಲ್ವರು ಯುವಕರ ಸಾವು

ಕಂಬಕ್ಕೆ ಕಾರು ಅಪ್ಪಳಿಸಿ ನಾಲ್ವರು ಯುವಕರ ಸಾವು

ರಾಂಚಿ, ಡಿಸೆಂಬರ್ (ಪಿಟಿಐ) ಕಾರು ವಿದ್ಯುತ್ ಕಂಬಕ್ಕೆ ಢಿಕ್ಕಿ ಹೊಡೆದ ಪರಿಣಾಮ ನಾಲ್ವರು ಯುವಕರು ಸಾವನ್ನಪ್ಪಿರುವ ಘಟನೆ ಜಾರ್ಖಾಂಡ್‍ನಲ್ಲಿ ನಡೆದಿದೆ. ರಾಂಚಿಯ ಸದರ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಬೆಳಿಗ್ಗೆ 1.30 ರ ಸುಮಾರಿಗೆ ಬೂಟಿ ಚೌಕ್ ಮತ್ತು ದುಮರ್ದಗಾ ನಡುವೆ ಈ ಘಟನೆ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ವಿಕಸಿತ ಭಾರತ ಸಂಕಲ್ಪ ಯಾತ್ರೆ ಯಶಸ್ವಿಗೆ ವಿಜಯೇಂದ್ರ ಕರೆ

ಬಹುಶಃ ಅತಿವೇಗದಲ್ಲಿ ಚಲಿಸುತ್ತಿದ್ದ ಕಾರು ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದು ನಂತರ ಪಲ್ಟಿಯಾಗಿದೆ ಇದರ ಪರಿಣಾಮ ಕಂಬ ಮೂರು ತುಂಡಾಗಿದೆ ಎಂದು ಅವರು ಹೇಳಿದರು. ಸುಮಾರು 30 ವರ್ಷ ವಯಸ್ಸಿನ ಯುವಕರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಅವರನ್ನು ರಾಜೇಂದ್ರ ಇನ್‍ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸ್ ಆಸ್ಪತ್ರೆಗೆ ಕರೆತರಲಾಯಿತು, ಅಲ್ಲಿ ವೈದ್ಯರು ಎಲ್ಲರೂ ಮೃತಪಟ್ಟಿದ್ದಾರೆ ಎಂದು ಘೋಷಿಸಿದರು. ಮೃತಪಟ್ಟವರೆಲ್ಲರೂ ರಾಂಚಿಯ ಬರಿಯಾತು ಬಸ್ತಿ ನಿವಾಸಿಗಳು ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

RELATED ARTICLES

Latest News