Friday, October 11, 2024
Homeಮನರಂಜನೆಮಿಸ್‌‍ಫೈರ್‌ ಆಗಿ ಗುಂಡು ತಗುಲಿ ಆಸ್ಪತ್ರೆ ಸೇರಿದ ಬಾಲಿವುಡ್‌ ನಟ ಗೋವಿಂದ

ಮಿಸ್‌‍ಫೈರ್‌ ಆಗಿ ಗುಂಡು ತಗುಲಿ ಆಸ್ಪತ್ರೆ ಸೇರಿದ ಬಾಲಿವುಡ್‌ ನಟ ಗೋವಿಂದ

Actor Govinda rushed to hospital after being Shot Accidently

ಮುಂಬೈ,ಅ.1- ಬಾಲಿವುಡ್‌ ನಟ ಗೋವಿಂದ ಅವರು ಇಂದು ಬೆಳಗ್ಗೆ ತಮ ಮನೆಯಲ್ಲಿ ಕಾಲಿಗೆ ಗುಂಡು ತಗುಲಿ ಆಸ್ಪತ್ರೆಗೆ ದಾಖಲಾಗಿದ್ದಾರೆ.ಬೆಳಗ್ಗೆ 4:45ರ ಸುಮಾರಿಗೆ ಅವರ ಪರವಾನಗಿ ಪಡೆದ ರಿವಾಲ್ವರ್‌ನಿಂದ ಮಿಸ್‌‍ಫೈರ್‌ ಆಗಿ ಗಾಯವಾಗಿದೆ. ನಟ ಅಪಾಯದಿಂದ ಪಾರಾಗಿದ್ದಾರೆ ಎಂದು ತಿಳಿದುಬಂದಿದೆ.

ಘಟನೆ ವೇಳೆ ಮನೆಯಲ್ಲಿ ಗೋವಿಂದ ಒಬ್ಬರೇ ಇದ್ದರು. ಶಿವಸೇನೆ ನಾಯಕರಾಗಿರುವ ಗೋವಿಂದ ಅವರು ಇಂದು ಬೆಳಗ್ಗೆ ಕೋಲ್ಕತ್ತಾಗೆ ತೆರಳುವಾಗ ಈ ಘಟನೆ ನಡೆದಿದೆ.ಮಾಧ್ಯಮಗಳಿಗೆ ಗೋವಿಂದ ಅವರ ಮ್ಯಾನೇಜರ್‌ ಶಶಿ ಸಿನ್ಹಾ ಪ್ರತಿಕ್ರಿಯಿಸಿದ್ದು, ಪರವಾನಗಿ ಪಡೆದ ರಿವಾಲ್ವರ್‌ನ್ನು ಕೇಸ್‌‍ನಲ್ಲಿ ಇಟ್ಟುಕೊಂಡಿದ್ದರು.

ಇಂದು ಕೇಸ್‌‍ನಿಂದ ತೆಗೆಯುವಾಗ ರಿವಾಲ್ವರ್‌ ಕೆಳಗೆ ಬಿದ್ದು ಫೈರ್‌ ಆಗಿ ಬುಲೆಟ್‌ ಕಾಲಿಗೆ ತಗುಲಿದೆ. ವೈದ್ಯರು ಬುಲೆಟ್‌ ಅನ್ನು ಹೊರತೆಗೆದಿದ್ದು ಆಸ್ಪತ್ರೆಯಲ್ಲಿದ್ದಾರೆ ಎಂದು ತಿಳಿಸಿದ್ದಾರೆ.

RELATED ARTICLES

Latest News