Thursday, September 19, 2024
Homeಮನರಂಜನೆಗೌರವ ಡಾಕ್ಟರೇಟ್ ಬೇಡ ಎಂದ ನಟ ಕಿಚ್ಚ ಸುದೀಪ್

ಗೌರವ ಡಾಕ್ಟರೇಟ್ ಬೇಡ ಎಂದ ನಟ ಕಿಚ್ಚ ಸುದೀಪ್

ತುಮಕೂರು,ಆ.6– ನಟ ಕಿಚ್ಚ ಸುದೀಪ್‌ ಗೌರವ ಡಾಕ್ಟರೇಟ್‌ ಪದವಿಯನ್ನು ತಿರಸ್ಕರಿಸಿ ಸುದ್ದಿಯಲ್ಲಿದ್ದಾರೆ. ಕಿಚ್ಚನ ಈ ನಡೆಗೆ ಎಲ್ಲರಿಂದ ಮೆಚ್ಚುಗೆ ವ್ಯಕ್ತವಾಗಿದೆ.ಕಿಚ್ಚ ಸುದೀಪ್‌ ಅವರು ಹೀರೋ ಆಗಿ ಗಮನ ಸೆಳೆದಿದ್ದಾರೆ.

ಅವರು ಚಿತ್ರರಂಗಕ್ಕೆ ನೀಡಿದ ಕೊಡುಗೆ ತುಂಬಾನೇ ದೊಡ್ಡದು. ಇದರ ಜೊತೆಗೆ ಅವರು ಸಾಕಷ್ಟು ಸಮಾಜಮುಖಿ ಕೆಲಸವನ್ನು ಕೂಡ ಮಾಡುತ್ತಿದ್ದಾರೆ. ಸುದೀಪ್‌ ಅವರ ಒಳ್ಳೆಯ ಕೆಲಸವನ್ನು ಗಮನಿಸಿ ತುಮಕೂರು ವಿಶ್ವ ವಿದ್ಯಾಲಯ ಗೌರವ ಡಾಕ್ಟರೇಟ್‌ ನೀಡಲು ಮುಂದಾಗಿತ್ತು. ಆದರೆ, ಇದನ್ನು ಕಿಚ್ಚ ಸುದೀಪ್‌ ನಿರಾಕರಿಸಿದ್ದಾರೆ.

ಕಿಚ್ಚ ಸುದೀಪ್‌ ಮಾದರಿ ನಡೆಗೆ ಎಲ್ಲರಿಂದ ಮೆಚ್ಚುಗೆ ವ್ಯಕ್ತವಾಗಿದೆ. ಕಿಚ್ಚ ಸುದೀಪ್‌ಗೆ ಗೌರವ ಡಾಕ್ಟರೇಟ್‌ ನೀಡಲು ತುಮಕೂರು ವಿವಿ ನಿರ್ಧರಿಸಿತ್ತು. ವಿವಿ ಸಿಂಡಿಕೇಟ್‌ ಸಭೆಯಲ್ಲಿ ಚರ್ಚೆ ನಡೆಸಿ ಸುದೀಪ್‌ ಗಮನಕ್ಕೆ ತರಲಾಗಿತ್ತು.

ವಿವಿ ನಿರ್ಧಾರಕ್ಕೆ ಹೃದಯಪೂರ್ವಕ ಧನ್ಯವಾದ ತಿಳಿಸಿರುವ ಸುದೀಪ್‌ ಅವರು, ಇದನ್ನು ವಿನಮ್ರವಾಗಿ ನಿರಾಕರಿಸಿದ್ದಾರೆ. ಸಮಾಜದಲ್ಲಿ ಸೇವೆ ಮಾಡಿದ ನನಗಿಂತ ಹಿರಿಯರು ಇದ್ದಾರೆ. ಅವರಿಗೆ ಡಾಕ್ಟರೇಟ್‌ ನೀಡಿ ಎಂದು ಸುದೀಪ್‌ ಕೋರಿದ್ದಾರೆ.

RELATED ARTICLES

Latest News