Thursday, June 20, 2024
Homeಮನರಂಜನೆದರ್ಶನ್‌ರಿಂದ ರೇಣುಕಾಸ್ವಾಮಿ ಕೊಲೆ : ಸಂತ್ರಸ್ತರಿಗೆ ನ್ಯಾಯ ಸಿಗಬೇಕು ಎಂದ ನಟಿ ರಮ್ಯಾ

ದರ್ಶನ್‌ರಿಂದ ರೇಣುಕಾಸ್ವಾಮಿ ಕೊಲೆ : ಸಂತ್ರಸ್ತರಿಗೆ ನ್ಯಾಯ ಸಿಗಬೇಕು ಎಂದ ನಟಿ ರಮ್ಯಾ

ಬೆಂಗಳೂರು,ಜೂ.11- ಚಾಲೆಂಜಿಂಗ್‌ ಸ್ಟಾರ್‌ ದರ್ಶನ್‌ರಿಂದ ಕೊಲೆಯಾಗಿದ್ದಾರೆ ಎಂದು ಹೇಳಲಾದ ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಸಂತ್ರಸ್ತರಿಗೆ ನ್ಯಾಯ ಸಿಗಬೇಕು ಎಂಬ ಅಭಿಪ್ರಾಯಕ್ಕೆ ಸ್ಯಾಂಡಲ್‌ವುಡ್‌ನ ನಟಿ ರಮ್ಯಾ ಧ್ವನಿಗೂಡಿಸಿದ್ದಾರೆ. ಸ್ಯಾಂಡಲ್‌ವುಡ್‌ನ ಸುದ್ದಿಗಳನ್ನು ಬಿತ್ತರಿಸುವ ಕರ್ನಾಟಕ ಬಾಕ್ಸ್ ಆಫೀಸ್‌‍ನ ಸಾಮಾಜಿಕ ಜಾಲತಾಣದಲ್ಲಿ ಐಪಿಸಿ 302 ರ ಸೆಕ್ಷನ್‌ ಅಡಿ ನಟ ದರ್ಶನ್‌ಗೆ ಬಹುತೇಕ ಜೀವಾವಧಿ ಶಿಕ್ಷೆಯಾಗುವ ಸಾಧ್ಯತೆಯಿದೆ.

ಯಾವುದೇ ಬಾಹ್ಯ ಹಾಗೂ ಹಣದ ಪ್ರಭಾವ ಇರದೆ ಇದ್ದರೆ ಬಲಿಪಶುಗೆ ನ್ಯಾಯ ಸಿಗುವ ವಿಶ್ವಾಸವಿದೆ ಎಂದು ಪೋಸ್ಟ್‌ ಮಾಡಲಾಗಿತ್ತು. ಅದನ್ನು ರಿಪೋಸ್ಟ್‌ ಮಾಡಿರುವ ನಟಿ ರಮ್ಯಾ ಬೆಂಬಲ ವ್ಯಕ್ತಪಡಿಸಿದ್ದಾರೆ ಮತ್ತು ದರ್ಶನ್‌ ಬಂಧನಕ್ಕೊಳಗಾಗಿರುವ ಮಾಧ್ಯಮಗಳ ಸುದ್ದಿಯನ್ನು ಹಂಚಿಕೊಂಡಿದ್ದಾರೆ.

ಅಷ್ಟಕ್ಕೇ ಸುಮನಾಗದೇ ಕೊಲೆ ಪ್ರಕರಣ ಜಾಮೀನುರಹಿತ ಅಪರಾಧವಾಗಿದೆ. ಜೀವಾವಧಿ ಶಿಕ್ಷೆ ವಿಧಿಸಬಹುದಾಗಿದೆ ಎಂಬ ಕಾನೂನಿನ ತಿಳುವಳಿಕೆಯನ್ನು ಹಂಚಿಕೊಂಡಿದ್ದಾರೆ.

RELATED ARTICLES

Latest News