Sunday, October 13, 2024
Homeಇದೀಗ ಬಂದ ಸುದ್ದಿಶ್ರೀಮಂತರು, ಪ್ರಭಾವಿಗಳ ಪ್ರಕರಣದಲ್ಲಿ ನ್ಯಾಯ ಮೇಲುಗೈ ಸಾಧಿಸದಿದ್ದರೆ ಸಮಾಜಕ್ಕೆ ಕೆಟ್ಟ ಸಂದೇಶ ರವಾನೆ : ರಮ್ಯಾ

ಶ್ರೀಮಂತರು, ಪ್ರಭಾವಿಗಳ ಪ್ರಕರಣದಲ್ಲಿ ನ್ಯಾಯ ಮೇಲುಗೈ ಸಾಧಿಸದಿದ್ದರೆ ಸಮಾಜಕ್ಕೆ ಕೆಟ್ಟ ಸಂದೇಶ ರವಾನೆ : ರಮ್ಯಾ

ಬೆಂಗಳೂರು,ಜೂ.22- ಪ್ರಜ್ವಲ್‌ ರೇವಣ್ಣ, ಸೂರಜ್‌ ರೇವಣ್ಣ. ದರ್ಶನ್‌, ಯಡಿಯೂರಪ್ಪ ಅವರ ಪ್ರಕರಣಗಳಲ್ಲಿ ನ್ಯಾಯ ಮೇಲುಗೈ ಸಾಧಿಸದೇ ಇದ್ದರೆ ಸಮಾಜಕ್ಕೆ ಕೆಟ್ಟ ಸಂದೇಶ ರವಾನೆಯಾಗುತ್ತದೆ ಎಂದು ನಟಿ ಹಾಗೂ ಮಾಜಿ ಸಂಸದೆ ರಮ್ಯಾ ಹೇಳಿದ್ದಾರೆ.

ಇಂದು ಬೆಳಿಗ್ಗೆ ಟ್ವೀಟ್‌ ಮಾಡಿ ಇತ್ತೀಚೆಗೆ ಸಾರ್ವಜನಿಕರ ಗಮನ ಸೆಳೆದ ಅಪರಾಧ ಪ್ರಕರಣಗಳನ್ನು ಹೊರಗೆಳೆದಿರುವ ಪೊಲೀಸರು ಹಾಗೂ ಮಾಧ್ಯಮಗಳಿಗೆ ಧನ್ಯವಾದ ಹೇಳಿದ್ದು, ನ್ಯಾಯ ಮೇಲುಗೈ ಸಾಧಿಸಬೇಕು ಎಂದು ಆಶಿಸಿದ್ದಾರೆ.

ಯಾರು ಕಾನೂನನ್ನು ಮುರಿಯುತ್ತಾರೊ ಅವರು ಸುದ್ದಿಯಲ್ಲಿರುತ್ತಾರೆ. ಶ್ರೀಮಂತರು ಮತ್ತು ಪ್ರಭಾವಿಗಳು ಯಾರೇ ಆದರೂ ಬಡವರು, ಮಹಿಳೆಯರು, ಮಕ್ಕಳ ಮೇಲೆ ಹಿಂಸಾತಕ ಕ್ರಮಗಳನ್ನು ಅನುಸರಿಸುವವರು ತಾರ್ಕಿಕ ಅಂತ್ಯ ಕಾಣಲೇಬೇಕು ಎಂದು ಹೇಳಿದ್ದಾರೆ.

ಕರ್ನಾಟಕದ ಸಾಮಾನ್ಯ ಜನ, ಪೊಲೀಸರು ಮತ್ತು ಮಾಧ್ಯಮಗಳಿಗೆ ಧನ್ಯವಾದಗಳು. ಇಂತಹ ಅಪರಾಧಗಳನ್ನು ಬೆಳಕಿಗೆ ತರಲಾಗಿದೆ. ವಿಚಾರಣೆ ವೇಳೆ ಸಂತ್ರಸ್ತರಿಗೆ ನ್ಯಾಯ ಸಿಗಬೇಕು. ಪ್ರಕರಣಗಳು ತಾರ್ಕಿಕ ಅಂತ್ಯ ಕಾಣಬೇಕು. ಆಗ ಮಾತ್ರ ನ್ಯಾಯ ಮೇಲುಗೈ ಸಾಧಿಸುತ್ತದೆ. ಇಲ್ಲವಾದರೆ ಕೆಟ್ಟ ಸಂದೇಶ ರವಾನೆಯಾಗುತ್ತದೆ ಎಂದು ಅಭಿಪ್ರಾಯಪಟ್ಟಿದ್ದಾರೆ.

RELATED ARTICLES

Latest News