ಫೇಸ್‍ಬುಕ್‍ನಲ್ಲಿ ಮತ್ತೆ ಪ್ರತ್ಯಕ್ಷವಾದ ನಟಿ ರಮ್ಯ..!

Spread the love

ಬೆಂಗಳೂರು,ಜೂ.4-ಕಳೆದ ಲೋಕಸಭೆ ಚುನಾವಣೆ ಬಳಿಕ ನಾಪತ್ತೆಯಾಗಿದ್ದ ಮಾಜಿ ಸಂಸದೆ ಮತ್ತು ನಟಿ ರಮ್ಯಾ ಮತ್ತೆ ಪ್ರತ್ಯಕ್ಷರಾಗಿದ್ದಾರೆ.  ಲೋಕಸಭೆ ಹಾಗೂ ವಿಧಾನಸಭೆ ಚುನಾವಣೆ ಸೇರಿದಂತೆ ಹಲವಾರು ಚುನಾವಣೆಗಳಲ್ಲಿ ಕಾಂಗ್ರೆಸ್‍ನಲ್ಲಿ ಸಕ್ರೀಯವಾಗಿ ಕಾರ್ಯ ನಿರ್ವಹಿಸಿದ್ದರು.ಎಐಸಿಸಿಯ ಸಾಮಾಜಿಕ ಜಾಲತಾಣದ ಮುಖ್ಯಸ್ಥೆ ಯಾಗಿಯೂ ಕೆಲಸ ನಿರ್ವಹಿಸಿದ್ದರು.

ಲೋಕಸಭೆ ಚುನಾವಣೆ ಬಳಿಕ 2019ರ ಜೂ.1ರಂದು ಟ್ವಿಟರ್‍ನಲ್ಲಿ ನಾಯಿ ಕಳೆದು ಹೋಗಿರುವ ಪೋಸ್ಟ ಮಾಡಿದ ಬಳಿಕ ಹಾಗೂ ಫೇಸ್‍ಬುಕ್‍ನಿಂದ 2019ರ ಮೇ 19ರಿಂದಲೇ ನಾಪತ್ತೆಯಾಗಿದ್ದರು. ಈಗ ಇದ್ದಕ್ಕಿದ್ದಂತೆ ಫೇಸ್‍ಬುಕ್‍ನಲ್ಲಿ ಕಾಣಿಸಿ ಕೊಂಡಿದ್ದಾರೆ.

ಕೇರಳದ ಮನ್ನಾರ್‍ಕಾಡ್ ಅರಣ್ಯ ಪ್ರದೇಶದಲ್ಲಿ ಗರ್ಭಿಣಿ ಆನೆಗೆ ಅನಾನಸ್‍ನಲ್ಲಿ ಸ್ಪೋಟಕ ತಿನಿಸಿ ಸಾವಿಗೆ ಕಾರಣರಾದವರ ವಿರುದ್ದ ಕ್ರಿಮಿನಲ್ ಮೊಕದ್ದಮೆ ದಾಖಲಿಸಬೇಕು ಎಂಬchange.org ವೆಬ್‍ಸೈಟ್ ಆನ್‍ಲೈನ್ ಅಭಿ ಯಾನ ಶುರು ಮಾಡಿದ್ದು, ಸುಮಾರು 5 ಲಕ್ಷ ಮಂದಿ ಆನ್‍ಲೈನ್ ಸಹಿ ಸಂಗ್ರಹ ಗುರಿ ಹೊಂದಿದೆ.

ಈ ಅಭಿಯಾನಕ್ಕೆ ಈಗಾಗಲೇ 3.32 ಲಕ್ಷ ಮಂದಿ ಸಹಿ ಮಾಡಿದ್ದು, ಈ ಅಭಿಯಾನದ ಲಿಂಕ್‍ನ್ನು ರಮ್ಯಾ ಸಾರ್ವಜನಿಕವಾಗಿ ಪೋಸ್ಟ್ ಮಾಡಿದ್ದು, ಎಲ್ಲರು ಚೆನ್ನಾಗಿದ್ದೀರ ಎಂದು ಭಾವಿಸಿದ್ದೇನೆ. ಸುರಕ್ಷಿತವಾಗಿರಿ. ಅಭಿಯಾನದಲ್ಲಿ ಭಾಗಿಯಾಗಲು ಒಂದು ನಿಮಿಷ ಖರ್ಚು ಮಾಡಿ ಎಂದು ಇಂಗ್ಲಿಷ್‍ನಲ್ಲಿ ಪೋಸ್ಟ್ ಹಾಕುವ ಮೂಲಕ ನೇಪಥ್ಯದಿಂದ ಹೊರಬಂದಿದ್ದಾರೆ.

ರಮ್ಯಾ ಅವರ ಈ ಎಂಟ್ರಿ ಒಂದಿಷ್ಟು ಮಂದಿಯ ವ್ಯಾಖ್ಯಾನಗಳಿಗೂ ಕಾರಣವಾಗಿದೆ. ಫೇಸ್‍ಬುಕ್‍ನಲ್ಲಿ ಅವರ ಅಭಿಮಾನಿಗಳು ಇಷ್ಟು ದಿನ ಎಲ್ಲಿದ್ರೀ, ಏನು ಮಾಡುತ್ತಿದ್ದೀರಿ ಎಂಬಂತಹ ವಿಚಾರಗಳನ್ನು ಕಮೆಂಟ್ ಮಾಡುತ್ತಿದ್ದಾರೆ. ಸ್ಯಾಂಡಲ್‍ವುಡ್‍ನ ಪದ್ಮಾವತಿ ರೀ ಎಂಟ್ರಿ ಬಗ್ಗೆ ಕಾಂಗ್ರೆಸ್‍ನಲ್ಲಿ ಯಾವುದೇ ಚಟುವಟಿಕೆಗಳು ಕಾಣುತ್ತಿಲ್ಲ.

Facebook Comments