Thursday, December 5, 2024
Homeಬೆಂಗಳೂರುಬೆಂಗಳೂರಲ್ಲಿ ಆಫ್ರಿಕಾ ದೇಶದ ಪ್ರಜೆ ಬಂಧನ, 1.50 ಕೋಟಿ ವೌಲ್ಯದ ಡ್ರಗ್ಸ್ ವಶ

ಬೆಂಗಳೂರಲ್ಲಿ ಆಫ್ರಿಕಾ ದೇಶದ ಪ್ರಜೆ ಬಂಧನ, 1.50 ಕೋಟಿ ವೌಲ್ಯದ ಡ್ರಗ್ಸ್ ವಶ

African Citizen arrested in Bangalore, drugs worth 1.50 crore seized

ಬೆಂಗಳೂರು, ಅ.25- ದ್ವಿಚಕ್ರ ವಾಹನದಲ್ಲಿ ಮಾದಕವಸ್ತುಗಳನ್ನಿಟ್ಟುಕೊಂಡು ಗಿರಾಕಿಗಳಿಗೆ ಮಾರಾಟ ಮಾಡುತ್ತಿದ್ದ ಆಫ್ರಿಕಾ ದೇಶದ ಪ್ರಜೆಯನ್ನು ಸಿಸಿಬಿ ಪೊಲೀಸರು ಬಂಧಿಸಿ 1 ಕೋಟಿ 50 ಲಕ್ಷ ಮೌಲ್ಯದ ಎಂಡಿಎಂಎ ಕ್ರಿಸ್ಟೆಲ್‌ಗಳನ್ನು ವಶಪಡಿಸಿಕೊಂಡಿದ್ದಾರೆ.

ನ್ಯೂ ಮೈಕೋ ರೋಡ್‌ ಲಕ್ಕಸಂದ್ರದ ಬಳಿ ವಿದೇಶಿ ಪ್ರಜೆಯೊಬ್ಬ ನಿಷೇಧಿತ ಮಾದಕ ವಸ್ತು ಎಂಡಿಎಂಎ ಕ್ರಿಸ್ಟೆಲ್‌ನ್ನು ದ್ವಿಚಕ್ರ ವಾಹನದಲ್ಲಿರಿಸಿಕೊಂಡು ಮಾರಾಟ ಮಾಡುತ್ತಿದ್ದಾನೆಂಬ ಮಾಹಿತಿ ಸಿಸಿಬಿ ಪೊಲೀಸರಿಗೆ ಲಭಿಸಿದೆ.

ಸಿಸಿಬಿ ಮಾದಕ ದ್ರವ್ಯ ನಿಗ್ರಹದಳದಲ್ಲಿ ್ರಕರಣ ದಾಖಲಿಸಿ ಕಾರ್ಯಾಚರಣೆ ಕೈಗೊಂಡು ಆಫ್ರಿಕಾ ದೇಶದ ಪ್ರಜೆಯನ್ನು ಬಂಧಿಸಿ 1 ಕೆಜಿ 3 ಗ್ರಾಂ ಮಾದಕ ವಸ್ತು ಎಂಡಿಎಂಎ ಕ್ರಿಸ್ಟೆಲ್‌, ತೂಕದ ಯಂತ್ರ, ಮೊಬೈಲ್‌ ಹಾಗೂ ದ್ವಿಚಕ್ರ ವಾಹನವನ್ನು ವಶಪಡಿಸಿಕೊಳ್ಳಲಾಗಿದೆ.

ಆರೋಪಿ ಆಫ್ರಿಕಾ ಪ್ರಜೆ ವಿರುದ್ಧ 2018ರಲ್ಲಿ ಮುಂಬೈನಲ್ಲಿ ಪ್ರಕರಣ ದಾಖಲಾಗಿದೆ. ಆರೋಪಿ ಈಗ ನ್ಯಾಯಾಂಗ ಬಂಧನದಲ್ಲಿ ದ್ದಾನೆ.

RELATED ARTICLES

Latest News