Friday, April 4, 2025
Homeರಾಷ್ಟ್ರೀಯ | Nationalರಾಜ್ಯಪಾಲರಿದಂದ ಮಹಿಳೆಗೆ ಕಿರುಕುಳ ಆರೋಪ, ಮೂವರು ಅಧಿಕಾರಿಗಳ ವಿರುದ್ಧ ಪ್ರಕರಣ ದಾಖಲು

ರಾಜ್ಯಪಾಲರಿದಂದ ಮಹಿಳೆಗೆ ಕಿರುಕುಳ ಆರೋಪ, ಮೂವರು ಅಧಿಕಾರಿಗಳ ವಿರುದ್ಧ ಪ್ರಕರಣ ದಾಖಲು

ಕೋಲ್ಕತ್ತಾ, ಮೇ 18 (ಪಿಟಿಐ) ರಾಜ್ಯಪಾಲ ಸಿವಿ ಆನಂದ ಬೋಸ್‌‍ ಅವರು ಕಿರುಕುಳ ನೀಡಿದ್ದಾರೆ ಎಂದು ಆರೋಪಿಸಿದ ಮಹಿಳೆಯನ್ನು ಅಕ್ರಮವಾಗಿ ತಡೆದ ಆರೋಪದ ಮೇಲೆ ಇಲ್ಲಿನ ರಾಜಭವನದ ಮೂವರು ಅಧಿಕಾರಿಗಳ ವಿರುದ್ಧ ಪ್ರಕರಣ ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ರಾಜಭವನದ ಗುತ್ತಿಗೆ ಉದ್ಯೋಗಿ ಮಹಿಳೆ ಕಿರುಕುಳ ಪ್ರಕರಣದಲ್ಲಿ ವ್ಯಾಜಿಸ್ಟ್ರೇಟ್‌ ಮುಂದೆ ಹೇಳಿಕೆ ದಾಖಲಿಸಿದ ನಂತರ ಮೂವರು ಅಧಿಕಾರಿಗಳ ವಿರುದ್ಧ ಹರೇ ಸ್ಟ್ರೀಟ್‌ ಪೊಲೀಸ್‌‍ ಠಾಣೆಯಲ್ಲಿ ಎಫ್‌ಐಆರ್‌ ದಾಖಲಿಸಲಾಗಿದೆ.

ದೂರುದಾರ ಮಹಿಳೆಯನ್ನು ರಾಜಭವನದಿಂದ ಹೊರಹೋಗದಂತೆ ತಡೆದಿದ್ದಕ್ಕಾಗಿ ಮೂವರು ಅಧಿಕಾರಿಗಳನ್ನು ಎಫ್‌ಐಆರ್‌ನಲ್ಲಿ ಸೇರಿಸಲಾಗಿದೆ. ಈ ಬೆಳವಣಿಗೆಯಲ್ಲಿ ಅವರ ಪಾತ್ರಗಳನ್ನು ನಾವು ತನಿಖೆ ಮಾಡುತ್ತೇವೆ ಎಂದು ಅಧಿಕಾರಿ ಹೇಳಿದರು.

ಮೇ 2 ರಂದು ಮಹಿಳೆ ಬೋಸ್‌‍ ನಿಂದ ಕಿರುಕುಳ ಆರೋಪ ಮಾಡಿದ್ದರು. ನಂತರ ಕೋಲ್ಕತ್ತಾ ಪೊಲೀಸರು ತನಿಖೆಯನ್ನು ಪ್ರಾರಂಭಿಸಿದರು.ಸಂವಿಧಾನದ 361 ನೇ ವಿಧಿಯ ಅಡಿಯಲ್ಲಿ, ಅವರ ಅಧಿಕಾರಾವಧಿಯಲ್ಲಿ ರಾಜ್ಯಪಾಲರ ವಿರುದ್ಧ ಯಾವುದೇ ಕ್ರಿಮಿನಲ್‌ ಮೊಕದ್ದಮೆಗಳನ್ನು ಸ್ಥಾಪಿಸಲಾಗುವುದಿಲ್ಲ.

RELATED ARTICLES

Latest News