Saturday, July 20, 2024
Homeರಾಷ್ಟ್ರೀಯಕಾಂಗ್ರೆಸ್‌‍ ಅಭ್ಯರ್ಥಿ ಕನ್ಹಯ್ಯಾ ಕುಮಾರ್‌ ಕೆನ್ನೆಗೆ ಹಿಗ್ಗಾಮುಗ್ಗಾ ಬಾರಿಸಿದ ಗುಂಪು, ವಿಡಿಯೋ ವೈರಲ್

ಕಾಂಗ್ರೆಸ್‌‍ ಅಭ್ಯರ್ಥಿ ಕನ್ಹಯ್ಯಾ ಕುಮಾರ್‌ ಕೆನ್ನೆಗೆ ಹಿಗ್ಗಾಮುಗ್ಗಾ ಬಾರಿಸಿದ ಗುಂಪು, ವಿಡಿಯೋ ವೈರಲ್

ನವದೆಹಲಿ,ಮೇ18- ಲೋಕಸಭಾ ಚುನಾವಣೆ ಪ್ರಚಾರ ನಡೆಸುತ್ತಿದ್ದ ಈಶಾನ್ಯ ದೆಹಲಿಯ ಕಾಂಗ್ರೆಸ್‌‍ ಅಭ್ಯರ್ಥಿ ಕನ್ಹಯ್ಯಾಕುಮಾರ್‌ ಅವರ ಮೇಲೆ ಏಳರಿಂದ ಎಂಟು ಜನರು ಹಲ್ಲೆ ನಡೆಸಿ, ಅವರ ಮೇಲೆ ಕಪ್ಪು ಇಂಕ್‌ ಎರಚಿ ಅಮಾನವೀಯವಾಗಿ ವರ್ತಿಸಿರುವ ಘಟನೆ ನಡೆದಿದೆ.

ಪೂರ್ವ ದೆಹಲಿಯು ನ್ಯೂ ಉಸಾನ್‌‍ಪುರ ಪ್ರದೇಶದಲ್ಲಿ ಈ ಹಲ್ಲೆ ನಡೆದಿದ್ದು, ದಾಳಿಕೋರರ ಪೈಕಿ ಇಬ್ಬರು ವಿಡಿಯೋಗಳನ್ನು ಬಿಡುಗಡೆ ಮಾಡಿದ್ದಾರೆ. ಇದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆಗಿದೆ. ಕನ್ಹಯ್ಯಕುಮಾರ್‌ ಅವರು ದೇಶವನ್ನು ವಿಭಜಿಸುವ ಘೋಷಣೆಗಳನ್ನು ಕೂಗಿದ್ದು, ಭಾರತೀಯ ಸೇನೆಯ ವಿರುದ್ಧ ಮಾತನಾಡಿದ್ದಕ್ಕಾಗಿ ಈ ದಾಳಿ ನಡೆಸಿರುವುದಾಗಿ ಹೇಳಿಕೊಂಡಿದ್ದಾರೆ.

ಘಟನೆಯ ಬಗ್ಗೆ ಬ್ರಹಪುರಿಯ ಎಎಪಿ ಕೌನ್ಸಿಲರ್‌ ಛಾಯಾ ಗೌರವ್‌ ಶರ್ಮಾ ಅವರು ದೂರು ನೀಡಿದ್ದು, ಕರ್ತಾರ್‌ ನಗರದಲ್ಲಿನ ಪಕ್ಷದ ಕಚೇರಿಯಿಂದ ತಾವು ಮತ್ತು ಕನ್ಹಯ್ಯಾಕುಮಾರ್‌ ಅವರು ಹೊರಗೆ ಹೋಗುತ್ತಿದ್ದಾಗ ಏಳರಿಂದ ಎಂಟು ಮಂದಿ ಬಂದು ಕನ್ಹಯ್ಯಾ ಅವರಿಗೆ ಹೂವಿನ ಹಾರ ಹಾಕಿದ್ದರು. ಬಳಿಕ ಅವರ ಮೇಲೆ ಕಪ್ಪು ಮಸಿ ಎರಚಿ, ಹಲ್ಲೆ ನಡೆಸಿದರು ಎಂದು ಉಲ್ಲೇಖಿಸಿದ್ದಾರೆ.

ದಾಳಿ ವೇಳೆ ಮೂರರಿಂದ ನಾಲ್ಕು ಮಂದಿ ಮಹಿಳೆಯರಿಗೆ ಗಾಯಗಳಾಗಿವೆ. ಒಬ್ಬ ಮಹಿಳಾ ಪತ್ರಕರ್ತರು ಈ ಗಲಾಟೆಯಲ್ಲಿ ಚರಂಡಿಗೆ ಬಿದ್ದಿದ್ದಾರೆ. ದುಷ್ಕರ್ಮಿಗಳು ತಮ್ಮ ಸ್ಟೋಲ್‌ ಮೂಲಕವೇ ತಮನ್ನು ಒಂದು ಬದಿಗೆ ಎಳೆದುಕೊಂಡು ಹೋದರು. ತಮನ್ನು ಹಾಗೂ ತಮ ಪತಿಯನ್ನು ಕೊಲ್ಲುವುದಾಗಿ ಬೆದರಿಕೆ ಹಾಕಿದರು ಎಂದು ಆರೋಪಿಸಿದ್ದಾರೆ.ಛಾಯಾ ಶರ್ಮಾ ಅವರ ದೂರನ್ನು ಸ್ವೀಕರಿಸಿರುವುದಾಗಿ ದೆಹಲಿ ಪೊಲೀಸರು ತಿಳಿಸಿದ್ದು, ಈ ವಿಡಿಯೋಗಳನ್ನು ಪರಿಶೀಲಿಸುತ್ತಿದ್ದು, ತನಿಖೆ ಆರಂಭಿಸಿರುವುದಾಗಿ ಮಾಹಿತಿ ನೀಡಿದ್ದಾರೆ.

ಘಟನೆ ಬಳಿಕ ವಿಡಿಯೋಗಳನ್ನು ಬಿಡುಗಡೆ ಮಾಡಲಾಗಿದೆ. ಅದರಲ್ಲಿ ಒಬ್ಬ ಕಿಡಿಗೇಡಿ, ಕೈಯಲ್ಲಿ ಹೂವಿನ ಹಾರ ಹಿಡಿದಿರುವುದು ಕಾಣಿಸಿದೆ. ತಮ ಕೆಂಪಾದ ಕೈಗಳನ್ನು ತೋರಿಸಿ, ದೇಶವನ್ನು ತುಂಡು ತುಂಡಾಗಿ ವಿಭಜಿಸಲಾಗುತ್ತದೆ ಎಂದು ಘೋಷಣೆ ಕೂಗಿದ ಕಾರಣಕ್ಕೆ ಕನ್ಹಯ್ಯಾಗೆ ಈ ಶಿಕ್ಷೆ ನೀಡಿರುವುದಾಗಿ ಹೇಳಿದ್ದಾರೆ.

ಜವಹರಲಾಲ್‌ ನೆಹರು ವಿಶ್ವವಿದ್ಯಾಲಯದಲ್ಲಿ ಜೆಎನ್‌‍ಯು ಒಕ್ಕೂಟದ ಅಧ್ಯಕ್ಷರಾಗಿದ್ದ ಕನ್ಹಯ್ಯಾ 2016ರಲ್ಲಿ ನೀಡಿದ್ದರು ಎನ್ನಲಾದ ತುಕ್ಡೆ ತುಕ್ಡೆ ಹೇಳಿಕೆಯನ್ನೂ ಉಲ್ಲೇಖಿಸಿದ್ದಾರೆ. ನಾವು ದಾಳಿ ಮೂಲಕ ನಮ ಉತ್ತರ ನೀಡಿದ್ದೇವೆ ಎಂದು ತಿಳಿಸಿದ್ದಾರೆ. ತಮನ್ನು ಅವರು ಸನಾತನಿ ಸಿಂಹಗಳು ಎಂದು ಕರೆದುಕೊಂಡಿದ್ದಾರೆ. ಕನ್ಹಯ್ಯಾಕುಮಾರ್‌ ಅವರು ಭಾರತೀಯ ಸೇನೆಯನ್ನು ಕೂಡ ಅವಮಾನಿಸಿದ್ದಾರೆ. ಅದಕ್ಕೆ ತಕ್ಕ ಟ್ರೀಟ್‌ಮೆಂಟ್‌ ಕೊಟ್ಟಿದ್ದೇವೆ ಎಂದಿದ್ದಾರೆ.

37 ವರ್ಷದ ಕನ್ಹಯ್ಯಾಕುಮಾರ್‌ ಅವರು ಕಾಂಗ್ರೆಸ್‌‍ ಅಭ್ಯರ್ಥಿಯಾಗಿ ಈಶಾನ್ಯ ದೆಹಲಿಯಿಂದ ಬಿಜೆಪಿ ಅಭ್ಯರ್ಥಿ ಮನೋಜ್‌ ತಿವಾರಿ ವಿರುದ್ಧ ಸ್ಪರ್ಧಿಸುತ್ತಿದ್ದಾರೆ.ಮನೋಜ್‌ ತಿವಾರಿ ಅವರು ಕಳೆದ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿಯಿಂದ ಗೆದ್ದ ಎಲ್ಲ ಏಳು ಸಂಸದರಲ್ಲಿ ಮತ್ತೆ ಸ್ಪರ್ಧಿಸಲು ಟಿಕೆಟ್‌ ಪಡೆದಿರುವ ಏಕೈಕ ಬಿಜೆಪಿ ನಾಯಕರಾಗಿದ್ದಾರೆ.

ದೆಹಲಿಯ ಏಳು ಲೋಕಸಭೆ ಕ್ಷೇತ್ರಗಳಲ್ಲಿ ಮೇ25ರಂದು ಆರನೇ ಹಂತದಲ್ಲಿ ಮತದಾನ ನಡೆಯಲಿದೆ. ಆಮ್‌ ಆದಿ ಪಕ್ಷ ಹಾಗೂ ಕಾಂಗ್ರೆಸ್‌‍, ಐಎನ್‌ಡಿಐಎ ಮೈತ್ರಿಕೂಟದ ಒಪ್ಪಂದದ ಭಾಗವಾಗಿ ದೆಹಲಿಯಲ್ಲಿ ಜಂಟಿಯಾಗಿ ಅಭ್ಯರ್ಥಿಗಳನ್ನು ಕಣಕ್ಕಿಳಿಸಿವೆ.

RELATED ARTICLES

Latest News