Saturday, June 22, 2024
HomeUncategorizedದೇವೇಗೌಡರಿಗೆ ಹುಟ್ಟುಹಬ್ಬದ ಶುಭಾಶಯ ಕೋರಿದ ಪ್ರಧಾನಿ ಮೋದಿ

ದೇವೇಗೌಡರಿಗೆ ಹುಟ್ಟುಹಬ್ಬದ ಶುಭಾಶಯ ಕೋರಿದ ಪ್ರಧಾನಿ ಮೋದಿ

ಬೆಂಗಳೂರು,ಮೇ.18- ತೊಂಬತ್ತೇರಡನೆ ವಸಂತಕ್ಕೆ ಕಾಲಿರಿಸಿರುವ ಮಾಜಿ ಪ್ರಧಾನಿ ಹೆಚ್‌ ಡಿ ದೇವೇಗೌಡರಿಗೆ ಪ್ರಧಾನಿ ನರೇಂದ್ರ ಮೋದಿ ಅವರು ಶುಭ ಹಾರೈಸಿದ್ದಾರೆ. ಬಿಜೆಪಿ ರಾಷ್ಟ್ರೀಯ ನಾಯಕತ್ವವು ಗೌಡರ ಕುಟುಂಬದಿಂದ ಅಂತರ ಕಾಯ್ದುಕೊಳ್ಳುತ್ತಿದೆ ಎಂಬ ವದಂತಿ ಹರಡಿದ್ದರಿಂದ ಈ ಬೆಳವಣಿಗೆ ಮಹತ್ವ ಪಡೆದುಕೊಂಡಿದೆ.

ಪ್ರಧಾನಿ ಮೋದಿ ತಮ ಎಕ್ಸ್ ಹ್ಯಾಂಡಲ್‌ನಲ್ಲಿ ದೇವೇಗೌಡ ಜಿ ಅವರಿಗೆ ಅವರ ಜನದಿನದ ಶುಭಾಶಯಗಳು. ಅವರು ರಾಷ್ಟ್ರಕ್ಕೆ ಮಾಡಿದ ಸೇವೆಗಾಗಿ ರಾಜಕೀಯ ವಲಯದಾದ್ಯಂತ ಗೌರವಾನ್ವಿತರಾಗಿದ್ದಾರೆ.

ಕಷಿ ಮತ್ತು ಗ್ರಾಮೀಣ ಅಭಿವದ್ಧಿಯ ಮೇಲಿನ ಅವರ ಉತ್ಸಾಹವು ಗಮನಾರ್ಹವಾಗಿದೆ. ದೇವರು ಅವರ ದೀರ್ಘ ಆರೋಗ್ಯಕ್ಕೆ ಆಶಿರ್ವದಿಸಲಿ ಎಂದು ಹರಸಿದ್ದಾರೆ. ರೈತ ಪರ ನಿಲುವು ಹೊಂದಿರುವ ನಿಮ ಸೇವೆ ಕರ್ನಾಟಕದ ಜನರಿಗೆ ಮತ್ತಷ್ಟು ದೊರೆಯಲಿ ಎಂದು ಮೋದಿ ಗುಣಗಾನ ಮಾಡಿದ್ದಾರೆ.

RELATED ARTICLES

Latest News