Friday, November 22, 2024
Homeರಾಷ್ಟ್ರೀಯ | Nationalಛತ್ತೀಸ್‍ಗಢದ ಇಬ್ಬರು ಮಾಜಿ ಶಾಸಕರನ್ನು ಉಚ್ಛಾಟಿಸಿದ ಕಾಂಗ್ರೆಸ್

ಛತ್ತೀಸ್‍ಗಢದ ಇಬ್ಬರು ಮಾಜಿ ಶಾಸಕರನ್ನು ಉಚ್ಛಾಟಿಸಿದ ಕಾಂಗ್ರೆಸ್

ರಾಯ್‍ಪುರ,ಡಿ.15- ಛತ್ತೀಸ್‍ಗಢ ವಿಧಾನಸಭೆ ಚುನಾವಣೆಯಲ್ಲಿ ಸೋತ ಕೆಲವೇ ದಿನಗಳ ನಂತರ ಕಾಂಗ್ರೆಸ್ ತನ್ನ ಇಬ್ಬರು ಮಾಜಿ ಶಾಸಕರನ್ನು ಪಕ್ಷದಿಂದ ಉಚ್ಚಾಟಿಸಿದ್ದು, ಮಾಜಿ ಸಚಿವರೊಬ್ಬರಿಗೆ ಶೋಕಾಸ್ ನೋಟಿಸ್ ಜಾರಿ ಮಾಡಿದೆ.

ನವೆಂಬರ್ 7 ಮತ್ತು 17 ರಂದು ನಡೆದ ವಿಧಾನಸಭೆ ಚುನಾವಣೆಯಲ್ಲಿ 90 ಸದಸ್ಯ ಬಲದ ಸದನದಲ್ಲಿ ಬಿಜೆಪಿ 54 ಸ್ಥಾನಗಳನ್ನು ಗೆಲ್ಲುವ ಮೂಲಕ ಮತ್ತೆ ಅಧಿಕಾರಕ್ಕೆ ಬಂದಿತು, ಆದರೆ ಕಾಂಗ್ರೆಸ್ 2018 ರ ಆವೃತ್ತಿಯಲ್ಲಿ ಗೆದ್ದ 68 ಸ್ಥಾನಗಳಿಂದ 35 ಸ್ಥಾನಗಳಿಗೆ ಕುಸಿದಿತ್ತು.
ಕಾಂಗ್ರೆಸ್ ಶಾಸಕರಾದ ಬೃಹಸ್ಪತ್ ಸಿಂಗ್ ಮತ್ತು ಡಾ ವಿನಯ್ ಜೈಸ್ವಾಲ್ ಅವರನ್ನು ಪಕ್ಷ ವಿರೋ ಚಟುವಟಿಕೆಗಳ ಆರೋಪದ ಮೇಲೆ ಆರು ವರ್ಷಗಳ ಅವಗೆ ಉಚ್ಚಾಟಿಸಲಾಗಿದೆ ಎಂದು ಕಾಂಗ್ರೆಸ್ ನಾಯಕರೊಬ್ಬರು ತಿಳಿಸಿದ್ದಾರೆ.

2023 ರ ಅಸೆಂಬ್ಲಿ ಚುನಾವಣೆಯಲ್ಲಿ ಸಿಂಗ್ ಮತ್ತು ಜೈಸ್ವಾಲ್ ಅವರಿಗೆ ಟಿಕೆಟ್ ನೀಡಿರಲಿಲ್ಲ ಮತ್ತು ಚುನಾವಣಾ ಸೋಲಿನ ನಂತರ ಇಬ್ಬರು ಪಕ್ಷದ ಹಿರಿಯ ನಾಯಕರ ಅವರ ವಿರುದ್ಧ ಹಲವಾರು ಗುರುತರ ಆರೋಪಗಳನ್ನು ಹೊರಿಸಿದ್ದರು.

ಅಮೆರಿಕದಲ್ಲಿದ್ದಾರೆ 2 ಲಕ್ಷ ಅಕ್ರಮ ಭಾರತೀಯ ವಲಸೆಗಾರರು

ರಾಮಾನುಜ್‍ಗಂಜ್ (ಎಸ್‍ಟಿ) ಕ್ಷೇತ್ರದ ಮಾಜಿ ಶಾಸಕ ಸಿಂಗ್ ಅವರು ಎಐಸಿಸಿ ಪ್ರಧಾನ ಕಾರ್ಯದರ್ಶಿ ಮತ್ತು ಛತ್ತೀಸ್‍ಗಢದ ಪಕ್ಷದ ಉಸ್ತುವಾರಿ ಕುಮಾರಿ ಶೆಜ್ಲಾ ಮತ್ತು ಮಾಜಿ ಉಪಮುಖ್ಯಮಂತ್ರಿ ಟಿ ಎಸ್ ಸಿಂಗ್‍ದೇವ್ ಅವರ ಚುನಾವಣೆಯ ಸೋಲಿಗೆ ಕಾರಣರಾಗಿದ್ದಾರೆ.

2018 ರಲ್ಲಿ ಮನೇಂದ್ರಗಢದಿಂದ ಮೊದಲ ಬಾರಿಗೆ ಶಾಸಕರಾಗಿ ಆಯ್ಕೆಯಾದ ಜೈಸ್ವಾಲï, ಕಾಂಗ್ರೆಸ್ ಚುನಾವಣೆಯಲ್ಲಿ ಸೋತ ನಂತರ, ಎಐಸಿಸಿ ರಾಷ್ಟ್ರೀಯ ಕಾರ್ಯದರ್ಶಿ ಮತ್ತು ರಾಜ್ಯ ಉಸ್ತುವಾರಿ ಚಂದನ್ ಯಾದವ್ ಅವರಿಗೆ ಹಣ ನೀಡಿದ್ದೇನೆ ಎಂದು ಹೇಳಿಕೊಂಡಿದ್ದರು.

RELATED ARTICLES

Latest News