Saturday, October 12, 2024
Homeಅಂತಾರಾಷ್ಟ್ರೀಯ | Internationalಅಮೆರಿಕದಲ್ಲಿದ್ದಾರೆ 2 ಲಕ್ಷ ಅಕ್ರಮ ಭಾರತೀಯ ವಲಸೆಗಾರರು

ಅಮೆರಿಕದಲ್ಲಿದ್ದಾರೆ 2 ಲಕ್ಷ ಅಕ್ರಮ ಭಾರತೀಯ ವಲಸೆಗಾರರು

ನವದೆಹಲಿ,ಡಿ.15- ಅಮೆರಿಕದ ಅಧಿಕಾರಿಗಳು ಕಳೆದ ಐದು ವರ್ಷಗಳಲ್ಲಿ 2 ಲಕ್ಷಕ್ಕೂ ಹೆಚ್ಚು ಅಕ್ರಮ ಭಾರತೀಯ ವಲಸಿಗರನ್ನು ಪತ್ತೆ ಹಚ್ಚಿದ್ದಾರೆ ಮತ್ತು 2022-23ರಲ್ಲಿ ಅತಿ ಹೆಚ್ಚು ಅಂದರೆ 96,917 ಅಕ್ರಮ ವಲಸೆ ಪ್ರಕರಣಗಳು ವರದಿಯಾಗಿವೆ ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯ ಮಾಹಿತಿಗಳನ್ನು ಉಲ್ಲೇಖಿಸಲಾಗಿದೆ.

ಅಮೇರಿಕನ್ ಹೋಮ್ಲ್ಯಾಂಡ್ ಸೆಕ್ಯುರಿಟಿಯಿಂದ ಪಡೆದ ಮಾಹಿತಿಯಿಂದ 2018-19ರಲ್ಲಿ 8027, 2019-20ರಲ್ಲಿ 1227 ಮತ್ತು 2020-21ರಲ್ಲಿ 30,662 ಅಕ್ರಮ ಭಾರತೀಯ ವಲಸಿಗರನ್ನು ಅಮೆರಿಕ ಅಧಿಕಾರಿಗಳು ಪತ್ತೆ ಮಾಡಿದ್ದಾರೆ ಎಂದು ವಿದೇಶಾಂಗ ವ್ಯವಹಾರಗಳ ರಾಜ್ಯ ಸಚಿವ ವಿ ಮುರಳೀಧರನ್ ಹೇಳಿದ್ದಾರೆ. 2021-22ರಲ್ಲಿ ಈ ಸಂಖ್ಯೆ 63,927 ಆಗಿದ್ದರೆ, 2022-23ರಲ್ಲಿ 96,917 ಪ್ರಕರಣಗಳು ವರದಿಯಾಗಿವೆ. ಒಟ್ಟಾರೆ ಅಮೆರಿಕದ ಅಧಿಕಾರಿಗಳ ಮಾಹಿತಿ ಪ್ರಕಾರ ಒಟ್ಟು ಅಕ್ರಮ ಭಾರತೀಯ ವಲಸಿಗರ ಸಂಖ್ಯೆ 200,760 ಎಂದು ಅವರು ವಿವರಿಸಿದ್ದಾರೆ.

ಸಾಕ್ಷ್ಯ ನಾಶ ಮಾಡಿದ ಸಂಸತ್ತಿನಲ್ಲಿ ಸ್ಮೋಕ್ ದಾಳಿಯ ಮಾಸ್ಟರ್ ಮೈಂಡ್ ಲಲಿತ್ ಝಾ

ಅಮೇರಿಕಾ ಅಧಿಕಾರಿಗಳು ಎದುರಿಸುತ್ತಿರುವ ಅಕ್ರಮ ಭಾರತೀಯ ವಲಸಿಗರ ಸಂಖ್ಯೆಗೆ ಸಂಬಂಸಿದ ದತ್ತಾಂಶವು ಯುಎಸ್ ಕಸ್ಟಮ್ಸ್ ಮತ್ತು ಬಾರ್ಡರ್ ಪ್ರೊಟೆಕ್ಷನ್‍ನ ವೆಬ್‍ಸೈಟ್‍ನಲ್ಲಿ ಪ್ರಕಟವಾದ ವಲಸೆ ಅಂಕಿಅಂಶಗಳನ್ನು ಆಧರಿಸಿದೆ ಎಂದು ಮುರಳೀಧರನ್ ಹೇಳಿದರು.
ಈ ಅಂಕಿಅಂಶಗಳು ಯುಎಸ್ ಹಣಕಾಸು ವರ್ಷದ ಪ್ರಕಾರವಾಗಿದ್ದು, ಅಮೆರಿಕದ ಗಡಿ ದಾಟುವಾಗ ಪ್ರಾಣ ಕಳೆದುಕೊಂಡ ಭಾರತೀಯರ ಸಂಖ್ಯೆಗೆ ಸಂಬಂಸಿದ ವಿವರಗಳು ಲಭ್ಯವಿಲ್ಲ ಎಂದು ಸಚಿವರು ಹೇಳಿದರು.

ವಿದೇಶದಲ್ಲಿರುವ ಭಾರತೀಯ ಪ್ರಜೆಗಳ ಸುರಕ್ಷತೆ, ಭದ್ರತೆ ಮತ್ತು ಯೋಗಕ್ಷೇಮಕ್ಕೆ ಸರ್ಕಾರವು ಹೆಚ್ಚಿನ ಆದ್ಯತೆಯನ್ನು ನೀಡುತ್ತದೆ ಎಂದು ಅವರು ಹೇಳಿದರು, ವಿದೇಶಿ ಉದ್ಯೋಗಕ್ಕಾಗಿ ಭಾರತೀಯ ಪ್ರಜೆಗಳ ನೇಮಕಾತಿಯನ್ನು ಎಮಿಗ್ರೇಷನ್ ಆಕ್ಟï 1983 ರ ಅಡಿಯಲ್ಲಿ ನಿಯಂತ್ರಿಸಲಾಗುತ್ತದೆ. ಕಾನೂನು ವಲಸೆಯನ್ನು ಉತ್ತೇಜಿಸಲು ಹಲವಾರು ಉಪಕ್ರಮಗಳನ್ನು ತೆಗೆದುಕೊಳ್ಳಲಾಗಿದೆ ಎಂದು ಅವರು ಸಂಸತ್‍ಗೆ ಮಾಹಿತಿ ನೀಡಿದ್ದಾರೆ.

RELATED ARTICLES

Latest News