ಮುಂಬೈ,ಫೆ.20- ಜನವರಿಯಲ್ಲಿ ಕೋಮು ಘರ್ಷಣೆ ನಡೆದ ಮೀರಾ ರೋಡ್‍ಗೆ ಭೇಟಿ ನೀಡಿದ್ದ ಮಾಜಿ ಶಾಸಕ ಮತ್ತು ಎಐಎಂಐಎಂ ನಾಯಕ ವಾರಿಸ್ ಪಠಾಣ್ ಅವರನ್ನು ಮುಂಬೈ ಪೊಲೀಸರು ಸೋಮವಾರ ಬಂಧಿಸಿದ್ದಾರೆ. ವಾರಿಸ್ ಪಠಾಣ್ ಅವರು ಮೀರಾ ರೋಡ್‍ಗೆ ತೆರಳುತ್ತಿದ್ದಾಗ ದಹಿಸರ್ ಚೆಕ್‍ಪಾಯಿಂಟ್‍ನಲ್ಲಿ ಪೊಲೀಸರು ಬಂಧಿಸಿದ್ದಾರೆ.
ಫೆ.19ರಂದು ಮೀರಾ ರಸ್ತೆಗೆ ಹೋಗುವುದಾಗಿ ಪೊಲೀಸರಿಗೆ ತಿಳಿಸಿದ್ದರೂ ಅನುಮತಿ ನೀಡಿಲ್ಲ, ಅಲ್ಲಿಗೆ ಹೋಗಲು ಬಿಡುತ್ತಿಲ್ಲ ಎಂದು ಆರೋಪಿಸಿ ಎಐಎಂಐಎಂ ಕಾರ್ಯಕರ್ತರ ಘೋಷಣೆಗಳನ್ನು ಕೂಗಿದರು ಅವರನ್ನು ಬಂಧಿಸಲಾಗಿದೆ. ದ್ವೇಷದ ಭಾಷಣಗಳನ್ನು ನೀಡುವ ಜನರ ವಿರುದ್ಧ ಪೊಲೀಸ್ ಆಯುಕ್ತರಿಗೆ ಜ್ಞಾಪಕ ಪತ್ರವನ್ನು ಸಲ್ಲಿಸಲು ತೆರಳುತ್ತಿದ್ದಾಗ ಮುಂಬೈ ಪೊಲೀಸರು ಅವರನ್ನು ಬಂಧಿಸಿದ್ದಾರೆ ಎಂದು ವಾರಿಸ್ ಪಠಾಣ್ ಎಕ್ಸ್ ಪೋಸ್ಟ್‍ನಲ್ಲಿ ಹೇಳಿದ್ದಾರೆ.
49 ಹೊಸ ತಾಲ್ಲೂಕುಗಳಿಗೆ 2-3 ವರ್ಷಗಳಲ್ಲಿ ಆಡಳಿತ ಕಚೇರಿ ನಿರ್ಮಾಣ
ಇನ್ನೊಂದು ಪೋಸ್ಟ್‍ನಲ್ಲಿ ಅವರು ಹೀಗೆ ಬರೆದಿದ್ದಾರೆ: ದ್ವೇಷದ ಭಾಷಣಗಳನ್ನು ನೀಡುವ ಮತ್ತು ಕೋಮುಗಲಭೆಗಳನ್ನು ಸೃಷ್ಟಿಸುವ ಜನರ ವಿರುದ್ಧ ಜ್ಞಾಪಕ ಪತ್ರವನ್ನು ಸಲ್ಲಿಸಲು ನಾನು ಪೊಲೀಸ್ ಆಯುಕ್ತರನ್ನು ಭೇಟಿಯಾಗಬೇಕಾಗಿತ್ತು. ಆದರೆ ನನ್ನನ್ನು ಬಂಧಿಸಲಾಗಿದೆ. ಮುಂಬೈ ಪೊಲೀಸರ ವಿರುದ್ಧ ವಾಗ್ದಾಳಿ ನಡೆಸಿದ ಎಐಎಂಐಎಂ ನಾಯಕ, ತನ್ನ ಮೂಲಭೂತ ಹಕ್ಕುಗಳನ್ನು ಉಲ್ಲಂಘಿಸಲಾಗಿದೆ ಎಂದು ಆರೋಪಿಸಿದ್ದಾರೆ. ನನ್ನನ್ನು ಎಲ್ಲಿಗೆ ಕರೆದೊಯ್ಯಲಾಗುತ್ತಿದೆ ಎಂದು ನನಗೆ ತಿಳಿದಿರಲಿಲ್ಲ ಎಂದು ಅವರು ಹೇಳಿದರು.