Monday, March 31, 2025
Homeರಾಷ್ಟ್ರೀಯ | Nationalಏರ್ ಇಂಡಿಯಾ ವಿಮಾನಕ್ಕೆ ಬಾಂಬ್ ಬೆದರಿಕೆ, ತುರ್ತು ಲ್ಯಾಂಡಿಂಗ್

ಏರ್ ಇಂಡಿಯಾ ವಿಮಾನಕ್ಕೆ ಬಾಂಬ್ ಬೆದರಿಕೆ, ತುರ್ತು ಲ್ಯಾಂಡಿಂಗ್

Air India flight diverted to Delhi after a bomb threat

ನವದೆಹಲಿ,ಅ.14- ಮುಂಬೈನಿಂದ ಅಮೆರಿಕ ನ್ಯೂಯಾರ್ಕ್ಗೆ ತೆರಳುತ್ತಿದ್ದ ಏರ್ ಇಂಡಿಯಾ ವಿಮಾನಕ್ಕೆ ಬಾಂಬ್ ಬೆದರಿಕೆಹಿನ್ನೆಲೆಯಲ್ಲಿ ದೆಹಲಿ ವಿಮಾನ ನಿಲ್ದಾಣಕ್ಕೆ ಇಳಿಸಿದ ಘಟನೆ ಇಂದು ಬೆಳಿಗ್ಗೆ ನಡೆದಿದೆ.

ವಿಮಾನವು ಪ್ರಸ್ತುತ ಇಂದಿರಾಗಾಂಧಿ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ನಿಲ್ಲಿಸಿ ವಿಮಾನದಲ್ಲಿರುವ ಪ್ರಯಾಣಿಕರು ಮತ್ತು ಸಿಬ್ಬಂದಿಯ ಸುರಕ್ಷತೆಯನ್ನು ಖಾತರಿಪಡಿಸಲು ಎಲ್ಲಾ ಸುರಕ್ಷತಾ ಕ್ರಮಗಳನ್ನು ಅನುಸರಿಸಲಾಗುತ್ತಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ನ್ಯೂಯಾರ್ಕ್ನ ಜೆಎಸ್ ಕೆ ವಿಮಾನ ನಿಲ್ದಾಣಕ್ಕೆ ಮುಂಜಾನೆ 2 ಗಂಟೆಗೆ ವಿಮಾನವು ಮುಂಬೈನಿಂದ ಹೊರಟಿತು. ಫೈಲೇಟ್ ಟ್ರ್ಯಾಕ್ ಕಿಂಗ್ ರೆಡಾರ್‌ನಲ್ಲಿ ಎಚ್ಚರಿಕೆ ಸಂದೇಶ ಬಂದ ನಂತರ ಪೈಲಟ್‌ಗಳು 4:10 ಕ್ಕೆ ದೆಹಲಿಯಲ್ಲಿ ವಿಮಾನವನ್ನು ಇಳಿಸಿದ್ದಾರೆ.

ಮುಂಬೈನಿಂದ ಯಾನ ಆರಂಭಿಸಿದ ಏರ್ ಇಂಡಿಯಾ 119 ವಿಮಾನಕ್ಕೆ ನಿರ್ದಿಷ್ಟ ಭದ್ರತಾ ಎಚ್ಚರಿಕೆಯನ್ನು ಸ್ವೀಕರಿಸಿದ ನಂತರ ಸರ್ಕಾರದ ಭದ್ರತಾ ನಿಯಂತ್ರಣ ಸಮಿತಿಯ ಸೂಚನೆಗಳ ಮೇರೆಗೆ ದೆಹಲಿಯಲ್ಲಿ ಇಳಿಸಲಾಗಿದೆ. ಎಲ್ಲಾ ಪ್ರಯಾಣಿಕರು ವಿಮಾನದಿಂದ ಇಳಿದು ಟರ್ಮಿನಲ್‌ನಲ್ಲಿದ್ದಾರೆ ಎಂದು ಏರ್ ಇಂಡಿಯಾ ವಕ್ತಾರರು ಹೇಳಿದ್ದಾರೆ.

ಈ ಅನಿರೀಕ್ಷಿತ ಅಡಚಣೆಯಿಂದ ನಮ್ಮ ಅತಿಥಿಗಳಿಗೆ ಆಗುವ ಅನಾನುಕೂಲತೆಯನ್ನು ಕಡಿಮೆ ಮಾಡಲು ನಮ್ಮ ಸಹೋದ್ಯೋಗಿಗಳು ಮುಂದಾಗಿದ್ದಾರೆ. ಪ್ರಯಾಣಿಕರು ಮತ್ತು ಸಿಬ್ಬಂದಿಯ ಸುರಕ್ಷತೆಗೆ ಹೆಚ್ಚಿನ ಆದ್ಯತೆ ನೀಡಲಾಗಿದೆ ಎಂದು ತಿಳಿಸಿದರು.

RELATED ARTICLES

Latest News