ಅರೆ ಬೆತ್ತಲೆ ಮಹಿಳೆಯಿಂದ ವಿಮಾನ ಸಿಬ್ಬಂದಿಗೆ ಕಪಾಳಮೋಕ್ಷ

ಮುಂಬೈ,ಜ.31- ವಿಮಾನದಲ್ಲಿ ಅರೆಬೆತ್ತಲೆಯಾಗಿ ಓಡಾಡಿದ್ದಲ್ಲದೆ ಸಿಬ್ಬಂದಿ ಮೇಲೆ ಹಲ್ಲೆ ನಡೆಸಿದ 45 ವರ್ಷದ ಇಟಾಲಿಯನ್ ಮಹಿಳೆಯನ್ನು ಸೋಮವಾರ ಬಂಧಿಸಲಾಗಿದೆ. ವಿಸ್ತಾರಾ ಅಬುಧಾಬಿ-ಮುಂಬೈ ವಿಮಾನದ ಎಕಾನಮಿ ಕ್ಲಾಸ್ ಟಿಕೆಟ್ ಹೊಂದಿದ್ದ ಅರೆ ಬೆತ್ತಲಾಗಿದ್ದ ಪಾವೊಲಾ ಪೆರುಸಿಯೋ ಎಂಬ ಇಟಾಲಿಯನ್ ಮಹಿಳೆ ಬ್ಯುಸಿನೆಸ್ ಕ್ಲಾಸ್ ಕುಳಿತುಕೊಳ್ಳಲು ಒತ್ತಾಯಿಸಿದರು. ಇದನ್ನು ಪ್ರಶ್ನಿಸಲು ಹೋದ ವಿಮಾನ ಸಿಬ್ಬಂದಿಯೊಬ್ಬರಿಗೆ ಗುದ್ದಿದಲ್ಲದೆ ಮತ್ತೊಬ್ಬ ಸಿಬ್ಬಂದಿ ಮೇಲೆ ಉಗುಳಿ ಅನುಚಿತವಾಗಿ ವರ್ತಿಸಿದ್ದಾರೆ. ಈ ಕುರಿತಂತೆ ವಿಮಾನ ಸಿಬ್ಬಂದಿಗಳು ನೀಡಿದ ದೂರಿನ ಆಧಾರದ ಮೇಲೆ ಮುಂಬೈ ಪೊಲೀಸರು ಆಕೆಯನ್ನು […]

ಶಾರ್ಜಾದಿಂದ ಬರುತ್ತಿದ್ದ ಏರ್ ಇಂಡಿಯಾ ವಿಮಾನ ತುರ್ತು ಭೂಸ್ಪರ್ಶ

ಕೊಚ್ಚಿ.ಜ.30-ಶಾರ್ಜಾದಿಂದ ಬರುತ್ತಿದ್ದ ಏರ್ ಇಂಡಿಯಾ ವಿಮಾನದಲ್ಲಿ ಹೈಡ್ರಾಲಿಕ್ ವೈಫಲ್ಯದಿಂದ ತಾಂತ್ರಿಕ ಸಮಸ್ಯೆ ಕಂಡು ಬಂದ ಹಿನ್ನೆಲೆಯಲ್ಲಿ ಕೊಚ್ಚಿ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಕಳೆದ ರಾತ್ರಿ ತುರ್ತು ಪರಿಸ್ಥಿತಿ ಘೋಷಿಸಲಾಗಿತ್ತು. ಆತಂಕದ ನಡುವೆ ವಿಮಾನವು ರಾತ್ರಿ 8:26ಕ್ಕೆ ಸುರಕ್ಷಿತವಾಗಿ ಇಳಿದಿದೆ ಶಾರ್ಜಾದಿಂದ ಕೊಚ್ಚಿಗೆ ಬರುತ್ತಿದ್ದ ಏರ್ ಇಂಡಿಯ-412 ವಿಮಾನದ ಪೈಲಟ್ ಚಕ್ರದ ಹೈಡ್ರಾಲಿಕ್ ವೈಫಲ್ಯಕಂಡುಬಂದ ಹಿನ್ನಲೆಯಲ್ಲಿ ವಿಮಾನ ನಿಲ್ದಾಣ ನಿಯಂತ್ರಣ (ಎಟಿಸಿ ) ಗಮನಕ್ಕೆ ತಂದರು. ಕೂಡಲೆ ರಾತ್ರಿ 8:04ಕ್ಕೆ ಕೊಚ್ಚಿ ವಿಮಾನ ನಿಲ್ದಾಣದಲ್ಲಿ ಸಂಪೂರ್ಣ ತುರ್ತುಸ್ಥಿತಿ ಘೋಷಿಸಲಾಯಿತು. […]

ಇನ್ಮುಂದೆ ವಿಮಾನದಲ್ಲಿ ಕೇಳಿದಷ್ಟು ಮದ್ಯ ಸಿಗಲ್ಲ

ನವದೆಹಲಿ,ಜ.25- ಇನ್ಮುಂದೆ ವಿಮಾನದಲ್ಲಿ ಪ್ರಯಾಣಿಕರು ಕೇಳಿದಷ್ಟು ಎಣ್ಣೆ ನೀಡುವುದಿಲ್ವಂತೆ!ಯಾಕೆ ಅಂತೀರಾ.. ಇತ್ತಿಚೆಗೆ ವಿಮಾನಗಳಲ್ಲಿ ಕುಡಿದು ಸಹ ಪ್ರಯಾಣಿಕರ ಮೇಲೆ ಮೂತ್ರ ವಿಸರ್ಜಿಸುವುದು ಇತರರೊಂದಿಗೆ ಅಸಭ್ಯವಾಗಿ ವರ್ತಿಸುತ್ತಿರುವ ಪ್ರಕರಣಗಳು ಹೆಚ್ಚಾಗುತ್ತಿರುವ ಹಿನ್ನಲೆಯಲ್ಲಿ ಏರ್ ಇಂಡಿಯಾ ಈ ನಿರ್ಧಾರ ಕೈಗೊಂಡಿದೆಯಂತೆ. ವಿಮಾನ ಪ್ರಯಾಣಿಕರು ಕೇಳಿದಷ್ಟು ಎಣ್ಣೆ ನೀಡುವುದನ್ನು ಸೌಮ್ಯವಾಗಿಯೇ ನಿರಾಕರಿಸಿ ಅವರಿಗೆ ತಿಳಿ ಹೇಳುವಂತೆ ಏರ್ ಇಂಡಿಯಾ ತನ್ನ ಸಿಬ್ಬಂದಿಗಳಿಗೆ ಸೂಚನೆ ನೀಡಿದೆ. ಕೆಲ ದುರ್ಘಟನೆಗಳಿಗಾಗಿ ಟಾಟಾ ಸಮೂಹ ಒಡೆತನದ ವಿಮಾನಯಾನ ಸಂಸ್ಥೆಗೆ ದಂಡ ವಿಧಿಸಿರುವುದರಿಂದ ಏರ್ ಇಂಡಿಯಾ ಇಂತಹ […]

ಮಾಸ್ಕೋದಿಂದ ಗೋವಾಕ್ಕೆ ಹೊರಟಿದ್ದ ವಿಮಾನಕ್ಕೆ ಬಾಂಬ್ ಬೆದರಿಕೆ

ಪಣಜಿ,ಜ.21- ರಷ್ಯಾದ ರಾಜಧಾನಿ ಮಾಸ್ಕೋದಿಂದ ಗೋವಾಕ್ಕೆ ಹೊರಟಿದ್ದ ಚಾರ್ಟರ್ಡ್ ವಿಮಾನ ಬಾಂಬ್ ಬೆದರಿಕೆಯ ಹಿನ್ನೆಲೆಯಲ್ಲಿ ಇಂದು ಮುಂಜಾನೆ ಮಾರ್ಗ ಬದಲಾವಣೆ ಮಾಡಿ ಉಜ್ಬೇಕಿಸ್ತಾನದತ್ತ ಪ್ರಯಾಣಿಸಿದೆ. ದಕ್ಷಿಣ ಗೋವಾದ ದಬೋಲಿಮ್ ವಿಮಾನ ನಿಲ್ದಾಣದಲ್ಲಿ ಬೆಳಗ್ಗೆ 4.15ಕ್ಕೆ ವಿಮಾನ ಲ್ಯಾಂಡ್ ಆಗಬೇಕಿತ್ತು. ಅಜುರ್ ಏರ್ ಸಂಸ್ಥೆಯ ಈ ವಿಮಾನ ಭಾರತೀಯ ವಾಯುಪ್ರದೇಶವನ್ನು ಪ್ರವೇಶಿಸುವ ಮೊದಲು ಮಾರ್ಗ ಬದಲಾವಣೆ ಮಾಡಲಾಯಿತು ಎಂದು ಅಧಿಕಾರಿಗಳು ತಿಳಿಸಿದ್ದಾರೆ. ವಿಮಾನದಲ್ಲಿ ಬಾಂಬ್ ಇಡಲಾಗಿದೆ ಎಂಬ ಬೆದರಿಕೆ ಬಂದಿರುವ ಕುರಿತು, ಡಾಬೋಲಿಮ್ ವಿಮಾನ ನಿಲ್ದಾಣದ ನಿರ್ದೇಶಕರಿಂದ 12.30 […]

ರಷ್ಯಾದಿಂದ ಗೋವಾಕ್ಕೆ ಹೊರಟಿದ್ದ ವಿಮಾನಕ್ಕೆ ಬಾಂಬ್ ಬೆದರಿಕೆ

ಪಣಜಿ,ಜ.10-ರಷ್ಯಾದ ಮಾಸ್ಕೋದಿಂದ ಭಾರತ ಗೋವಾಕ್ಕೆ ಹೊರಟಿದ್ದ ವಿಮಾನದಲ್ಲಿ ಬಾಂಬ್ ಇಡಲಾಗಿದೆ ಎಂಬ ದೂರವಾಣಿ ಕರೆ ಹಿನ್ನಲೆಯಲ್ಲಿ ಕೆಲ ಕಾಲ ಅಧಿಕಾರಿಗಳು ಆತಂಕಗೊಂಡ ಘಟನೆ ಕಳೆದ ರಾತ್ರಿ ನಡೆದಿದೆ. ಗೋವಾ ಎಟಿಸಿಗೆ ದೂರವಾಣಿ ಕರೆ ಮಾಡಿ ದುಷ್ಕರ್ಮಿ ಬಾಂಬ್ ಬೆದರಿಕೆ ಹಾಕಿದ್ದ ನಂತರ ವಿಮಾನದ ಮಾರ್ಗ ಬದಲಾವಣೆ ಮಾಡಿ ಜಾಮ್‍ನಗರದಲ್ಲಿ ಎಮರ್ಜೆನ್ಸಿ ಲ್ಯಾಂಡಿಂಗ್ ಮಾಡಲಾಗಿದೆ. ಲ್ಯಾಂಡಿಂಗ್ ನಂತರ, ಎಲ್ಲಾ 236 ಪ್ರಯಾಣಿಕರು ಮತ್ತು ಸಿಬ್ಬಂದಿಯನ್ನು ಸುರಕ್ಷಿತವಾಗಿ ಇಳಿಸಿದ ಪೊಲೀಸರು, ಬಿಡಿಡಿಎಸ್ ಮತ್ತು ಸ್ಥಳೀಯ ಅಕಾರಿಗಳು ಇಡೀ ವಿಮಾನವನ್ನು ಶೋಧಿಸುತ್ತಿದ್ದಾರೆ […]

ಬಾಂಗ್ಲಾ ವಿಮಾನದಲ್ಲಿ ಬಟ್ಟೆ ಬಿಚ್ಚಿ ಬಡಿದಾಡಿಕೊಂಡ ಪ್ರಯಾಣಿಕರು

ಡಾಕಾ,ಜ.10-ವಿಮಾನದಲ್ಲಿ ಪ್ರಯಾಣಿಕರು ತೋರುವ ಅಶಿಸ್ತಿನ ಪ್ರಕರಣಗಳು ಪ್ರತಿನಿತ್ಯ ಸುದ್ದಿ ಮಾಡುತ್ತಿರುವ ಸಂದರ್ಭದಲ್ಲೇ ಬಾಂಗ್ಲಾ ವಿಮಾನದಲ್ಲಿ ಇಬ್ಬರು ಪ್ರಯಾಣಿಕರು ಬಟ್ಟೆ ಬಿಚ್ಚಿ ಬಡಿದಾಡಿಕೊಂಡಿರುವ ಘಟನೆ ಬೆಳಕಿಗೆ ಬಂದಿದೆ. ಬಾಂಗ್ಲಾ ಸರ್ಕಾರಿ ಒಡೆತನದ ವಿಮಾನದಲ್ಲಿ ನಡೆದಿರುವ ಈ ಘಟನೆಯನ್ನು ಬಿಟಾಂಕೊ ಬಿಸ್ವಾಸ್ ಎನ್ನುವವರು ಟ್ವಿಟರ್‍ನಲ್ಲಿ ಹಂಚಿಕೊಂಡಿದ್ದಾರೆ. ಆದರೆ, ಈ ಘಟನೆ ನಡೆದಿದ್ದು ಯಾವಾಗ ಎನ್ನುವ ಮಾಹಿತಿ ಮಾತ್ರ ಹೊರಬಿದ್ದಿಲ್ಲ. ವಿಮಾನದ ಮುಂಭಾಗದಲ್ಲಿ ಕುಳಿತಿದ್ದ ಪ್ರಯಾಣಿಕನೊಬ್ಬ ಇನ್ನೊಬ್ಬ ಪ್ರಯಾಣಿಕನೊಂದಿಗೆ ಮೊದಲ ವಾಗ್ವಾದ ನಡೆಸುತ್ತಿರುವುದು ಕಂಡು ಬರುತ್ತದೆ. ನಂತರ ಇಬ್ಬರು ಪ್ರಯಾಣಿಕರು ಪರಸ್ಪರ […]

ವಿಮಾನದಲ್ಲಿ ಮಹಿಳೆ ಮೇಲೆ ಮೂತ್ರ ವಿಸರ್ಜನೆ ಮಾಡಿದ್ದ ಕುಡುಕ ಅರೆಸ್ಟ್

ನವದೆಹಲಿ,ಜ.7- ಏರ್ ಇಂಡಿಯಾ ವಿಮಾನದಲ್ಲಿ ಕುಡಿದ ಮತ್ತಿನಲ್ಲಿ ಮಹಿಳೆಯೊಬ್ಬರ ಮೇಲೆ ಮೂತ್ರ ವಿಸರ್ಜನೆ ಮಾಡಿದ್ದ ಮುಂಬೈ ಮೂಲದ ವ್ಯಕ್ತಿ ಶಂಕರ್ ಮಿಶ್ರಾನನ್ನು ತಡರಾತ್ರಿ ದೆಹಲಿ ಪೊಲೀಸರು ಬೆಂಗಳೂರಿನಲ್ಲಿ ಬಂಧಿಸಿದ್ದಾರೆ. ಪ್ರಕರಣ ಬೆಳಕಿಗೆ ಬರುತ್ತಿದ್ದಂತೆ ನಾಪತ್ತೆಯಾಗಿದ್ದ ಮಿಶ್ರಾನನ್ನು ಬಂಧಿಸಲು ರಚಿಸಲಾಗಿದ್ದ ವಿಶೇಷ ಪೊಲೀಸ್ ತಂಡ ಆತ ಬೆಂಗಳೂರಿನಲ್ಲಿ ಇರುವ ಬಗ್ಗೆ ಬಂದ ಖಚಿತ ಮಾಹಿತಿಯನ್ನಾಧರಿಸಿ ತಡರಾತ್ರಿ ಆತನನ್ನು ಬಂಧಿಸಿ ದೆಹಲಿಗೆ ಕರೆದೊಯ್ದಿದೆ ಎಂದು ಮೂಲಗಳು ತಿಳಿಸಿವೆ. ಮಿಶ್ರಾ ಮೊಬೈಲ್ ಫೋನ್ ಸ್ವಿಚ್‍ಆಪ್ ಮಾಡಿದ್ದರೂ ಆತ ತನ್ನ ಸ್ನೇಹಿತರೊಂದಿಗೆ ಸಂವಹನ […]

ಮಹಿಳಾ ಸಹ ಪ್ರಯಾಣಿಕರ ಮೇಲೆ ಮೂತ್ರ ವಿಸರ್ಜನೆ ಮಾಡಿದ ಕುಡುಕ

ನವದೆಹಲಿ,ಜ.4- ಏರ್ ಇಂಡಿಯಾ ವಿಮಾನದ ಬ್ಯುಸಿನೆಸ್ ಕ್ಲಾಸ್ ಪ್ರಯಾಣಿಕರೊಬ್ಬರು ಕುಡಿದ ಮತ್ತಿನಲ್ಲಿ ಮಹಿಳಾ ಪ್ರಯಾಣಿಕರ ಮೇಲೆ ಮೂತ್ರ ವಿಸರ್ಜನೆ ಮಾಡಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ. ಕಳೆದ ನವೆಂಬರ್‍ನಲ್ಲಿ 26 ರಂದು ನ್ಯೂಯಾರ್ಕ್‍ನಿಂದ ದೆಹಲಿಗೆ ಬರುತ್ತಿದ್ದ ವಿಮಾನದ ಬ್ಯುಸಿನೆಸ್ ಕ್ಲಾಸ್‍ನಲ್ಲಿ ಪ್ರಯಾಣಿಸುತ್ತಿದ್ದ 70 ವರ್ಷದ ಪ್ರಯಾಣಿಕರೊಬ್ಬರು ಮಹಿಳೆ ಮೇಲೆ ಮೂತ್ರ ವಿಸರ್ಜಿಸಿದ್ದಾರೆ. ಈ ಕುರಿತಂತೆ ಮಹಿಳೆ ನೀಡಿದ ದೂರಿನ ಮೇರೆಗೆ ಅಸಭ್ಯ ಧೋರಣೆ ತೋರಿದ ಪ್ರಯಾಣಿಕನನ್ನು ನೋ ಫ್ಲೈ ಲಿಸ್ಟ್‍ಗೆ ಸೇರಿಸಬಹುದಾಗಿದೆ ಎಂದು ಏರ್‍ಲೈನ್ಸ್ ತಿಳಿಸಿದೆ. ವಿಮಾನದಲ್ಲಿ […]

ವಿದೇಶದಿಂದ ಬರುವ ವಿಮಾನಗಳ ನಿರ್ಬಂಧಕ್ಕೆ ಒತ್ತಾಯ

ಬೆಂಗಳೂರು,ಡಿ.24- ಚೀನಾದಲ್ಲಿ ಕೋವಿಡ್ ಉಲ್ಬಣಿಸಿ ಹಲವು ಸಾವುನೋವು ಸಂಭವಿಸುತ್ತಿರುವುದರಿಂದ ಕೂಡಲೇ ಕೇಂದ್ರ ಸರ್ಕಾರ ಜಪಾನ್, ಅಮೆರಿಕ, ಇಟಲಿ ಸೇರಿದಂತೆ ಸೋಂಕು ಹೆಚ್ಚುತ್ತಿರುವ ದೇಶಗಳಿಂದ ಬರುವ ಅಂತಾರಾಷ್ಟ್ರೀಯ ವಿಮಾನಗಳನ್ನು ಕೂಡಲೇ ನಿರ್ಬಂಧಿಸಬೇಕೆಂದು ಕರ್ನಾಟಕ ಗಡಿ ಹೋರಾಟ ಸಮಿತಿ ಒತ್ತಾಯಿಸಿದೆ. ಇದೇ ವೇಳೆ ಅಂತಾರಾಷ್ಟ್ರೀಯ ಜಲಸಂಪರ್ಕವನ್ನು ರದ್ದುಪಡಿಸಬೇಕು, ಜನರ ಆರೋಗ್ಯದ ಬಗ್ಗೆ ಹೆಚ್ಚಿನ ನಿಗಾ ವಹಿಸಬೇಕೆಂದು ಸಂಘಟನೆಯ ಅಧ್ಯಕ್ಷ ಪ್ರೊ.ರಾವ್ ಬೈಂದೂರ್, ಪ್ರಧಾನಿ ನರೇಂದ್ರಮೋದಿ ಅವರಲ್ಲಿ ಮನವಿ ಮಾಡಿದ್ದಾರೆ. ಆಕ್ಸಿಜನ್ ದಾಸ್ತಾನು ಖಚಿತ ಪಡಿಸಿಕೊಳ್ಳಲು ಕೇಂದ್ರ ಸರ್ಕಾರ ಸೂಚನೆ ಕರ್ನಾಟಕ […]

ವಿಮಾನದಲ್ಲಿ ಹಾವು ಪ್ರತ್ಯಕ್ಷ, ಬೆಚ್ಚಿಬಿದ್ದ ಪ್ರಯಾಣಿಕರು

ಫ್ಲೋರಿಡಾದ ತಾಂಪಾ ನಗರದಿಂದ ನ್ಯೂಜೆರ್ಸಿಗೆ ತೆರಳುತ್ತಿದ್ದ ವಿಮಾನದಲ್ಲಿ ಹಾವು ಕಾಣಿಸಿಕೊಂಡು ಪ್ರಯಾಣಿಕರು ಆತಂಕಗೊಂಡ ಘಟನೆ ಇಂದು ನಡೆದಿದೆ. ನ್ಯೂಯಾರ್ಕ್ ಲಿಬರ್ಟಿ