Monday, March 4, 2024
Homeರಾಜ್ಯಜ.17 ರಿಂದ ಬೆಂಗಳೂರಿನಿಂದ ಅಯೋಧ್ಯೆಗೆ ವಿಮಾನ ಸೇವೆ

ಜ.17 ರಿಂದ ಬೆಂಗಳೂರಿನಿಂದ ಅಯೋಧ್ಯೆಗೆ ವಿಮಾನ ಸೇವೆ

ಬೆಂಗಳೂರು,ಡಿ.30- ಮುಂದಿನ ಜನವರಿ 17 ರಿಂದ ಏರ್‍ಇಂಡಿಯಾ ಎಕ್ಸ್‍ಪ್ರೆಸ್ ಬೆಂಗಳೂರು ಮತ್ತು ಕೋಲ್ಕತ್ತಾದಿಂದ ಅಯ್ಯೋಧ್ಯೆಗೆ ನೇರ ವಿಮಾನ ಸೇವೆ ನೀಡಲಿದೆ. ಜನವರಿ 17ರಂದು ಬೆಂಗಳೂರು-ಅಯೋಧ್ಯೆ ಮಾರ್ಗದ ಮೊದಲ ವಿಮಾನಯಾನ ಆರಂಭವಾಗಲಿದೆ. ಈ ವಿಮಾನವು ಜನವರಿ 17ರ ಬೆಳಗ್ಗೆ 8.05 ಕ್ಕೆ ಬೆಂಗಳೂರು ವಿಮಾನ ನಿಲ್ದಾಣದಿಂದ ಹೊರಟು 10.35 ಕ್ಕೆ ಅಯೋಧ್ಯೆ ತಲುಪಲಿದೆ. ಬಳಿಕ ಅಯೋಧ್ಯೆಯಿಂದ 3.40 ಕ್ಕೆ ಹೊರಟು ಸಂಜೆ 6.10 ಕ್ಕೆ ಬೆಂಗಳೂರು ತಲುಪಲಿದೆ.

ಅಯೋಧ್ಯೆ ಶ್ರೀ ರಾಮಮಂದಿರ ಉದ್ಘಾಟನೆಯ ಸಮಯದಲ್ಲಿ ಹಾಗೂ ಉದ್ಘಾಟನೆಯ ಬಳಿಕ ಅಯೋಧ್ಯೆಯತ್ತ ತೆರಳುವವರ ಸಂಖ್ಯೆ ಹೆಚ್ಚಾಗಿರುತ್ತದೆ. ಹೀಗಾಗಿ ಪ್ರಯಾಣಿಕರ ಹಿತದೃಷ್ಟಿಯಿಂದ ಏರ್ ಇಂಡಿಯಾ ಜನವರಿ 17ರಿಂದ ಪ್ರತಿದಿನ ಬೆಂಗಳೂರಿನಿಂದ ಅಯೋಧ್ಯೆಗೆ ನೇರ ವಿಮಾನಯಾನ ಆರಂಭಿಸಲಿದೆ.

ಬೆಂಗಳೂರಿನಿಂದ ಅಯೋಧ್ಯೆಗೆ ನೇರ ವಿಮಾನಯಾನದ ಬಗ್ಗೆ ಏರ್‍ಇಂಡಿಯಾ ವೆಬ್‍ಸೈಟ್ ಮತ್ತು ಆಪ್‍ಗಳಲ್ಲಿ ಮಾಹಿತಿ ನೀಡಲಾಗಿದ್ದು, ವಿಮಾನಯಾನದ ವೇಳಾಪಟ್ಟಿ ಮತ್ತು ಟಿಕೆಟ್ ಬುಕಿಂಗ್ ವ್ಯವಸ್ಥೆ ಕೂಡ ಇದೆ. ಈ ಬಗ್ಗೆ ಏರ್ ಇಂಡಿಯಾ ಎಕ್ಸ್‍ಪ್ರೆಸ್ ಮುಖ್ಯ ವಾಣಿಜ್ಯ ಅಧಿಕಾರಿ ಅಂಕುರ್ ಗಾರ್ಗ್ ಮಾತನಾಡಿ, ಭಾರತದಾದ್ಯಂತ ಸಂಪರ್ಕಿಸುವ ವಾಯು ಮಾರ್ಗ ಕಾರ್ಯಾಚರಣೆಗಳನ್ನು ವಿಸ್ತರಿಸುವ ನಿಟ್ಟಿನಲ್ಲಿ ನಮ್ಮ ಬದ್ಧತೆಯು ಅಚಲವಾಗಿದೆ. ಅಯೋಧ್ಯೆಯನ್ನು ನವದೆಹಲಿ, ಬೆಂಗಳೂರು, ಕೋಲ್ಕತ್ತಾ ಜೊತೆಗೆ ಜೋಡಿಸುವ ಕೆಲಸವು ಈ ಬದ್ಧತೆಯನ್ನು ದೃಢಪಡಿಸುತ್ತದೆ.

ಹೊಸ ವರ್ಷದಲ್ಲೂ ಮುಂದುವರೆಯಲಿದೆಯಂತೆ ಇಸ್ರೇಲ್-ಹಮಾಸ್ ಯುದ್ಧ

ಇನ್ನು ಉತ್ತರ ಪ್ರದೇಶದ ಅಯೋಧ್ಯೆಯಲ್ಲಿ ನೂತನವಾಗಿ ನಿರ್ಮಾಣವಾಗಿರುವ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವನ್ನು ಇಂದು ಪ್ರಧಾನಮಂತ್ರಿ ನರೇಂದ್ರ ಮೋದಿ ಉದ್ಘಾಟನೆ ಮಾಡಲಿದ್ದಾರೆ. ಪ್ರಧಾನಿ ಆಗಮನದ ಹಿನ್ನೆಲೆಯಲ್ಲಿ ಅಯೋಧ್ಯೆ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಸುತ್ತಲೂ ಪೊಲೀಸ್ ಬಿಗಿ ಬಂದೋಬಸ್ತ್ ಮಾಡಲಾಗಿದೆ. ಇನ್ನು ಉದ್ಘಾಟನೆಗೆ ಸಕಲ ಸಿದ್ಧತೆಗಳು ಅಂತಿಮಗೊಂಡಿದ್ದು, ಗೋಡೆಗಳ ಮೇಲೆ ವರ್ಣ ಚಿತ್ರಗಳ ಜೊತೆ ಹೂವಿನ ಅಲಂಕಾರ ಪ್ರಯಾಣಿಕರನ್ನು ಅಯೋಧ್ಯೆ ವಿಮಾನ ನಿಲ್ದಾಣದತ್ತ ಸೆಳೆಯುತ್ತಿದೆ.

RELATED ARTICLES

Latest News