Friday, May 10, 2024
Homeರಾಜಕೀಯಅಲ್ಪಸಂಖ್ಯಾತರ ತುಷ್ಠೀಕರಣಕ್ಕೆ 1,000 ಕೋಟಿ : ಅಶೋಕ್ ವಾಗ್ದಾಳಿ

ಅಲ್ಪಸಂಖ್ಯಾತರ ತುಷ್ಠೀಕರಣಕ್ಕೆ 1,000 ಕೋಟಿ : ಅಶೋಕ್ ವಾಗ್ದಾಳಿ

ಬೆಂಗಳೂರು,ಡಿ.30- ರಾಜ್ಯದಲ್ಲಿ ಭೀಕರ ಬರಗಾಲ ತಾಂಡವವಾಡುತ್ತಿದ್ದು ಅನ್ನದಾತನಿಗೆ ನಯಾಪೈಸಾ ಪರಿಹಾರ ನೀಡದ ಸರ್ಕಾರ ಅಲ್ಪಸಂಖ್ಯಾತರನ್ನು ಓಲೈಸಿಕೊಳ್ಳಲು ಮುಂದಾಗಿದೆ ಎಂದು ವಿಧಾನಸಭೆಯ ಪ್ರತಿಪಕ್ಷದ ನಾಯಕ ಆರ್.ಅಶೋಕ್ ವಾಗ್ದಾಳಿ ನಡೆಸಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬರಗಾಲದಲ್ಲಿ ರೈತರು ಸಂಕಷ್ಟದಲ್ಲಿದ್ದರೂ ಅವರಿಗೆ ಒಂದೇ ಒಂದು ರೂಪಾಯಿ ಪರಿಹಾರ ಕೊಟ್ಟಿಲ್ಲ. 500ಕ್ಕೂ ಹೆಚ್ಚು ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ರಾಜ್ಯದಲ್ಲಿರುವುದು ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರವಲ್ಲ. ಬದಲಿಗೆ ಅಲ್ಪಸಂಖ್ಯಾತರಿಗೆ ಕಾಣಿಕೆ ಮೇಲೆ ಕಾಣಿಕೆ ಕೊಡುತ್ತಿದೆ ಎಂದು ಹರಿಹಾಯ್ದರು.

ರಾಜ್ಯದಲ್ಲಿ ಇಷ್ಟೆಲ್ಲ ಸಮಸ್ಯೆಗಳಿದ್ದರೂ ಸಿದ್ದರಾಮಯ್ಯ ಅವರು ಕಣ್ಣು ಕಾಣದ ರೀತಿ ಬಂಪರ್ ಮೇಲೆ ಬಂಪರ್ ನೀಡುತ್ತಿದ್ದಾರೆ. ನಮ್ಮ ರಾಜ್ಯದಲ್ಲಿ ಅಭಿವೃದ್ಧಿಗೆ ಸಿಗೋದೇ 5000 ಕೋಟಿ. ಅದರಲ್ಲಿ ಅಲ್ಪಸಂಖ್ಯಾತರ ಕಾಲೋನಿಗೆ 1 ಸಾವಿರ ಕೋಟಿ ಅಭಿವೃದ್ಧಿಗೆ ಕೊಟ್ಟಿದ್ದಾರೆ ಎಂದು ಟೀಕಾ ಪ್ರಹಾರ ನಡೆಸಿದರು.

ಅಲ್ಪಸಂಖ್ಯಾತರಿಗೆ ಕೊಡುವುದಾದರೆ ಹಿಂದೂಗಳು, ದಲಿತರೇನು ಮಾಡಬೇಕು? ಲೋಕಸಭೆ ಚುನಾವಣೆ ಹಿನ್ನಲೆಯಲ್ಲಿ ಓಲೈಕೆ ಮಾಡುತ್ತಿದ್ದಾರೆ. ಟಿಪ್ಪು ಸಂಸ್ಕೃತಿ ಹೇರುವ ಕೆಲಸ ಸಿದ್ದರಾಮಯ್ಯ ಮಾಡುತ್ತಿದ್ದಾರೆ ಎಂದು ಕಿಡಿಕಾರಿದರು.

ಹೊಸ ವರ್ಷದಲ್ಲೂ ಮುಂದುವರೆಯಲಿದೆಯಂತೆ ಇಸ್ರೇಲ್-ಹಮಾಸ್ ಯುದ್ಧ

ಕಾಂಗ್ರೆಸ್ ಶಾಸಕರಾದ ಬಿ.ಆರ್.ಪಾಟೀಲ್ ಹೇಳುತ್ತಿದ್ದಾರೆ ಒಂದೇ ಒಂದು ಅಭಿವೃದ್ಧಿ ಕಲ್ಲು ಹಾಕಿಲ್ಲವೆಂದು. ಹಿಂದೂಗಳು ವಾಸ ಮಾಡುವ ಜಾಗದಲ್ಲಿ ಅಭಿವೃದ್ಧಿ ಯಾಕಿಲ್ಲ? ಎಂದು ಪ್ರಶ್ನಿಸಿದರು.CBI ಮೇಲಿನ ಕೇಸ್ ವಾಪಸ್‍ಪಡೆದರು, ಕೆ.ಜಿಹಳ್ಳಿ, ಡಿಜೆಹಳ್ಳಿ ಘಟನೆ ಕೇಸ್ ವಾಪಸ್ ಪಡೆಯುವಂತೆ ಮೈಸೂರು ಶಾಸಕ ಪತ್ರ ಬರೆದು ವಾಪಸ್ ಪಡೆಯಲು ಶಿಫಾರಸ್ಸು ಮಾಡುತ್ತಾರೆ, ಕುಕ್ಕರ್ ಬಾಂಬ್ ಬ್ಲಾಸ್ಟ್ ಮಾಡಿದವರನ್ನು ನಮ್ಮ ಬ್ರದರ್ಸ್ ಎಂದು ಡಿಸಿಎಂ ಡಿಕೆಶಿ ಹೇಳುತ್ತಾರೆ.

ಸಿದ್ದರಾಮಯ್ಯ ಪ್ರಮಾಣವಚನ ಪಡೆಯುವಾಗ ಎಲ್ಲಾ ಧರ್ಮ ಸಮಾನ ಕಾಣುತ್ತೇನೆ ಎಂದಿದ್ದರು. ಈಗೇಕೆ ಎಲ್ಲ ಧರ್ಮಗಳನ್ನು ಸಮಾನಾಗಿ ನೋಡುತ್ತಿಲ್ಲ. ನಿಮಗೆ ಅದೊಂದೆ ಸಮುದಾಯ ಕಾಣುತ್ತದೆಯೇ ಎಂದು ವಾಗ್ದಾಳಿ ಮಾಡಿದರು. ರೈತರಿಗೆ ಬರ ಪರಿಹಾರ ನೀಡದ ವಿಚಾರ ಕುರಿತು ಪ್ರತಿಕ್ರಿಯಿಸಿದ ಅವರು, ಒಬ್ಬ ರೈತರಿಗೆ 35 ಸಾವಿರ ಕೊಡಬೇಕು. ಬೆಳಗಾವಿ ಅಧಿವೇಶನದಲ್ಲಿ ಎರಡು ಸಾವಿರ ಘೋಷಣೆ ಮಾಡಿದರು. ಒಂದು ವಾರದಲ್ಲಿ ಎರಡು ಸಾವಿರ ಕೊಡುತ್ತೇನೆ ಎಂದಿದ್ದರು. ಅಧಿವೇಶನ ಮುಗಿದು ಇಷ್ಟು ದಿನ ಆಯ್ತು ಇನ್ನೂ ಕೊಟ್ಟಿಲ್ಲ. ಆದರೆ ಅಲ್ಪಸಂಖ್ಯಾತರಿಗೆ 1 ಸಾವಿರ ಕೋಟಿ ಕೊಟ್ಟಿದ್ದಾರೆ.

ಹಿಂದೆ ಟಿಪ್ಪು ಸುಲ್ತಾನ್ ಹಿಂದೂ, ಮುಸ್ಲಿಮರನ್ನು ಹೇಗೆ ಪ್ರತ್ಯೇಕ ಮಾಡಿದನೋ, ಅದೇ ರೀತಿ ಮಾಡಲಾಗುತ್ತಿದೆ. ಹಿಂದೂ ಕಾಲೋನಿ, ಮುಸ್ಲಿಂ ಕಾಲೋನಿ ಎಂಬ ಬೇದ ಮಾಡುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.ಶಿಕ್ಷಣ ಸಚಿವ ಮಧು ಬಂಗಾರಪ್ಪ ವಿರುದ್ಧ ಚೆಕ್ ಬೌನ್ಸ್ ಕೇಸ್ ವಿಚಾರವಾಗಿ, ಎಜುಕೇಶನ್ ಮಿನಿಸ್ಟರ್ ಪಾಡೇ ಹೀಗಾದರೆ ಹೇಗೆ? ಕೋರ್ಟ್ ಆದೇಶವಾಗಿದ್ದರೂ ಸಿಎಂ ಅವರ ರಾಜೀನಾಮೆ ಪಡೆದಿಲ್ಲ. ಈ ಸರ್ಕಾರ ಲೂಟಿ ಹೊಡೆಯಲು ಒಂಟಿ ಕಾಲಲ್ಲಿ ನಿಂತಿದೆ. ಚೆಕ್ ಬೌನ್ಸ್ ಅಂದರೆ ಮೋಸ ಮಾಡಿದ್ದಾರೆ ಎಂದರ್ಥ. ಕೂಡಲೇ ಸಚಿವರ ರಾಜೀನಾಮೆ ಪಡೆಯಬೇಕು ಎಂದು ಆಗ್ರಹಿಸಿದರು.

RELATED ARTICLES

Latest News