Sunday, November 24, 2024
Homeರಾಷ್ಟ್ರೀಯ | Nationalರನ್‌ವೇನಲ್ಲಿ ಲಗೇಜ್‌ ಟ್ರ್ಯಾಕ್ಟರ್‌ಗೆ ಏರ್‌ ಇಂಡಿಯಾ ವಿಮಾನ ಡಿಕ್ಕಿ, ತಪ್ಪಿದ ಅನಾಹುತ

ರನ್‌ವೇನಲ್ಲಿ ಲಗೇಜ್‌ ಟ್ರ್ಯಾಕ್ಟರ್‌ಗೆ ಏರ್‌ ಇಂಡಿಯಾ ವಿಮಾನ ಡಿಕ್ಕಿ, ತಪ್ಪಿದ ಅನಾಹುತ

ಪುಣೆ, ಮೇ17- ದೆಹಲಿಯಿಂದ ಹೊರಟಿದ್ದ ಏರ್‌ ಇಂಡಿಯಾ ವಿಮಾನವು ರನ್‌ವೇ ಕಡೆಗೆ ಟ್ಯಾಕ್ಸಿ ಮಾಡುವಾಗ ಲಗೇಜ್‌ ಟ್ರ್ಯಾಕ್ಟರ್‌ಗೆ ಡಿಕ್ಕಿ ಹೊಡೆದಿದ್ದು ಕೂದಲೆಳೆ ಅಂತರದಲ್ಲಿ ಸಂಭಾವ್ಯ ಅನಾಹುತ ತಪ್ಪಿದೆ.

ಏರ್‌ ಇಂಡಿಯಾ ಎಐ-858 ವಿಮಾನವು ಪುಣೆಯಿಂದ ಸಂಜೆ 4 ಗಂಟೆಗೆ ಹೊರಡಲು ಸಿದ್ಧತೆ ನಡೆಸುತ್ತಿದ್ದಾಗ, ಪುಣೆ ಏರ್‌ಪೋರ್ಟ್‌ ರನ್‌ವೇಯಲ್ಲಿ 180 ಪ್ರಯಾಣಿಕರೊಂದಿಗೆ ದೆಹಲಿಗೆ ಹೊರಟಿದ್ದಾಹ ಟ್ರಾಕ್ಟರ್‌ಗೆ ಡಿಕ್ಕಿ ಹೊಡೆದಿದೆ.

ಡಿಕ್ಕಿಯಿಂದ ವಿಮಾನಕ್ಕೆ ಹಾನಿಯಾದರೂ ಪ್ರಯಾಣಿಕರಿಗೆ ಯಾವುದೇ ಗಾಯವಾಗಿಲ್ಲ. ಸುಮಾರು 180 ಪ್ರಯಾಣಿಕರನ್ನು ಹೊತ್ತೊಯ್ಯುತ್ತಿದ್ದ ವಿಮಾನವು ಲ್ಯಾಂಡಿಂಗ್‌ ಗೇರ್‌ ಬಳಿಯ ಮುಂಭಾಗದಲ್ಲಿ ಮತ್ತು ಟೈರ್‌ಗೆ ಹಾನಿಯಾಗಿದೆ.

ಘರ್ಷಣೆಯ ಹೊರತಾಗಿಯೂ, ವಿಮಾನದಲ್ಲಿದ್ದ ಎಲ್ಲಾ ಪ್ರಯಾಣಿಕರು ಮತ್ತು ಸಿಬ್ಬಂದಿ ಸುರಕ್ಷಿತವಾಗಿದ್ದಾರೆ. ಅಪಘಾತದ ನಂತರ ಪ್ರಯಾಣಿಕರನ್ನು ವಿಮಾನದಿಂದ ಇಳಿಸಲಾಯಿತು. ಪ್ರಯಾಣಿಕರು ವಿಮಾನ ನಿಲ್ದಾಣದಲ್ಲಿಯೇ ಉಳಿದುಕೊಂಡಿದ್ದರಿಂದ ಅವರಿಗೆ ಪರ್ಯಾಯ ವ್ಯವಸ್ಥೆ ಮಾಡಲಾಗಿದೆ ಎಂದು ವಿಮಾನ ನಿಲ್ದಾಣದ ಅಧಿಕಾರಿಗಳು ತಿಳಿಸಿದ್ದಾರೆ.

ನೆಲದ ಮೇಲೆ ವಿಮಾನವನ್ನು ನಡೆಸಲು ಬಳಸಲಾದ ಟಗ್‌ ಟ್ರಕ್‌‍, ಟ್ಯಾಕ್ಸಿ ಪ್ರಕ್ರಿಯೆಯಲ್ಲಿ ವಿಮಾನಕ್ಕೆ ಅಪ್ಪಳಿಸಿತು ಎಂದು ಪ್ರಾಥಮಿಕ ವರದಿಗಳು ಸೂಚಿಸುತ್ತವೆ. ಘಟನೆಗೆ ಕಾರಣ ಏನೆಂಬದನ್ನು ತಿಳಿಯಲು ನಾಗರಿಕ ವಿಮಾನಯಾನ ಮಹಾನಿರ್ದೇಶನಾಲಯ (ಡಿಜಿಸಿಎ) ತನಿಖೆ ಆರಂಭಿಸಿದೆ ಎಂದು ಹೇಳಿದ್ದಾರೆ.

ವಿಮಾನ ನಿಲ್ದಾಣದ ಕಾರ್ಯಾಚರಣೆಗಳು ಗಮನಾರ್ಹ ಅಡೆತಡೆಗಳಿಲ್ಲದೆ ಮುಂದುವರೆಯಿತು, ಆದರೂ ಪೀಡಿತ ವಿಮಾನವನ್ನು ವಿವರವಾದ ತಪಾಸಣೆ ಮತ್ತು ದುರಸ್ತಿಗಾಗಿ ಸ್ವಲ್ಪ ಸಮಯದವರೆಗೆ ಸೇವೆಯಿಂದ ತೆಗೆದು ಹಾಕಲಾಯಿತು ಮತ್ತು ಈಗ ಕಾರ್ಯಾಚರಣೆಗೆ ಸಿದ್ಧವಾಗಿದೆ ಎಂದು ಅವರು ತಿಳಿಸಿದ್ದಾರೆ.

ಕಳೆದ ಶುಕ್ರವಾರ ಪುಣೆಯಲ್ಲಿ ಚುನಾವಣಾ ಪ್ರಚಾರದ ವೇಳೆ ಇಂಡಿಗೋಗೆ ಸೇರಿದ ಏಣಿಯು ರಾಜಸ್ಥಾನ ಮುಖ್ಯಮಂತ್ರಿ ಭಜನ್‌ಲಾಲ್‌‍ ಶರ್ಮಾ ಪ್ರಯಾಣಿಸುತ್ತಿದ್ದ ಚಾರ್ಟರ್ಡ್‌ ವಿಮಾನಕ್ಕೆ ಡಿಕ್ಕಿ ಹೊಡೆದು ಇದೇ ರೀತಿಯ ಘಟನೆ ಸಂಭವಿಸಿತ್ತು.

RELATED ARTICLES

Latest News