Thursday, December 5, 2024
Homeರಾಜ್ಯಕೆಎಸ್‌ಆರ್‌ಟಿಸಿಗೆ 2.0 ಮಾದರಿಯ ಐರಾವತ ಬಸ್‌ಗಳು ಸೇರ್ಪಡೆ

ಕೆಎಸ್‌ಆರ್‌ಟಿಸಿಗೆ 2.0 ಮಾದರಿಯ ಐರಾವತ ಬಸ್‌ಗಳು ಸೇರ್ಪಡೆ

Airavat Club Class 2.0: New Volvo bus by KSRTC

ಬೆಂಗಳೂರು, ಅ.8- ಕೆಎಸ್ಆರ್ಟಿಸಿಯ ಐರಾವತ ಕ್ಲಬ್ ಕ್ಲಾಸ್ 2.0 ಮಾದರಿಯ 20 ಬಸ್‌ಗಳನ್ನು ಈ ತಿಂಗಳ ಕೊನೆಯಲ್ಲಿ ಸಮೂಹಕ್ಕೆ ಸೇರ್ಪಡೆಗೊಳಿಸಲಿದೆ.2.0 ಐರಾವತ್ ಕ್ಲಬ್ ಕ್ಲಾಸ್ ಬಸ್ಗಳಲ್ಲಿ ಪ್ರಯಾಣಿಕರ ಸುರಕ್ಷತೆಗೆ ಹೆಚ್ಚಿನ ಒತ್ತು ನೀಡಲಾಗಿದೆ. ಶಕ್ತಿಶಾಲಿ ಹ್ಯಾಲೊಜಿನ್ ಹೆಡ್ಲೈಟ್ಗಳು ಮತ್ತು ಡೇ ರನ್ನಿಂಗ್ ಲೈಟ್ಗಳೊಂದಿಗೆ ಹೊಸ ಪ್ಲಶ್ ಇಂಟೀರಿಯರ್ಸ್ ಮತ್ತು ಬಾಹ್ಯ ಸ್ಕ್ಯಾಂಡಿ ನೇವಿಯನ್ ವಿನ್ಯಾಸ ಹೊಂದಿರುವ ಐಷಾರಾಮಿ ಬಸ್ ಇದಾಗಿದೆ.

ಹೊಸಕೋಟೆ ಬಳಿ ಇರುವ ವೋಲ್ವೋ ಬಸ್ ತಯಾರಕ ಕಾರ್ಖಾನೆಗೆ ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಮತ್ತು ನಿಗಮದ ಅಧ್ಯಕ್ಷ ಎಸ್.ಆರ್.ಶ್ರೀನಿವಾಸ್ (ವಾಸು) ಭೇಟಿ ನೀಡಿ ಅತ್ಯಾಧುನಿಕ ಸೌಲಭ್ಯಗಳನ್ನು ಹೊಂದಿರುವ ಬಸ್ಗಳನ್ನು ಪರಿಶೀಲಿಸಿದರು.

ಈ ವೇಳೆ ಮಾತನಾಡಿದ ಸಚಿವರು, ಈ ತಿಂಗಳ ಅಂತ್ಯದಲ್ಲಿ ಹೊಸ ಮಾದರಿಯ ಪ್ರಯಾಣಿಕ ಸ್ನೇಹಿ ಐರಾವತ ಕ್ಲಬ್ಕ್ಲಾಸ್ ಬಸ್ಗಳು ಸಂಸ್ಥೆಗೆ ಸೇರ್ಪಡೆಗೊಳ್ಳಲಿವೆ. ಒಂದು ಬಸ್ನ ದರ 1.78 ಕೋಟಿ ರೂ. ಆಗಿದ್ದು, ನಿಗಮದಲ್ಲಿ ಒಟ್ಟು 443 ಐಷಾರಾಮಿ ಬಸ್ಗಳಿವೆ. ನೂತನ ವಿನ್ಯಾಸದೊಂದಿಗೆ ಮತ್ತಷ್ಟು ಸುಧಾರಿತ ತಂತ್ರಜ್ಞಾನ ಅಳವಡಿಕೆಯೊಂದಿಗೆ ಪ್ರಯಾಣಿಕರಿಗೆ ಮತ್ತಷ್ಟು ಉತ್ತಮ ಸೇವೆ ನೀಡಲಾಗುವುದು ಎಂದರು.

ಬಸ್ಸಿನ ವಿಶೇಷತೆ:
ಶಕ್ತಿಶಾಲಿ ಹ್ಯಾಲೊಜಿನ್ ಹೆಡ್ಲೈಟ್ಗಳು ಮತ್ತು ಡೇ ರನ್ನಿಂಗ್ ಲೈಟ್ಗಳೊಂದಿಗೆ ಡಿಆರ್ಎಲ್ ಹೊಸ -ಫ್ರೆಶ್ ಇಂಟೀರಿಯರ್ಸ್ ಮತ್ತು ಬಾಹ್ಯ ಸ್ಕ್ಯಾಂಡಿನೇವಿಯರ್ ವಿನ್ಯಾಸ ಹೊಂದಿರುವುದರಿಂದ ಕಣ್ಮನ ಸೆಳೆಯಲಿದೆ. ಏರೋಡೈನಾಮಿಕ್ ವಿನ್ಯಾಸದಿಂದ ಉತ್ತಮ ಇಂಧನ ದಕ್ಷತೆ, ನವೀನ ತಂತ್ರಜ್ಞಾನ, ತಾಂತ್ರಿಕತೆಯಿಂದ ಸುಧಾರಿತ ಇಂಜಿನ್ ಹೊಂದಿದ್ದು, ಅತ್ಯುತ್ತಮ ಕಾರ್ಯಕ್ಷಮತೆ ಹಾಗೂ ಸುಧಾರಿತ ಇಂಜಿನ್ ಕೆಎಂಪಿಎಲ್ ನೀಡುತ್ತದೆ.

ಒಟ್ಟಾರೆ ಬಸ್ನ ಉದ್ದದಲ್ಲಿ 3.5% ಹೆಚ್ಚಳ ಇರುವುದರಿಂದ ಸಲೂನ್ನಲ್ಲಿ ಪ್ರಯಾಣಿಕರ ಆಸನಗಳ ನಡುವಿನ ಅಂತರ ಹೆಚ್ಚಾಗಿದೆ. ವಿಶಾಲ ಲಗೇಜ್ ಸ್ಥಳಾವಕಾಶವಿದ್ದು, ಹಿಂದಿನ ಬಸ್ಗಳಿಗೆ ಹೋಲಿಸಿದ್ದಲ್ಲಿ ಶೇ.20ರಷ್ಟು ಹೆಚ್ಚಿನ ಲಗೇಜ್ ಇಡುವ ಸೌಲಭ್ಯವಿರುತ್ತದೆ.

ಇದು ಅತ್ಯಂತ ಲಗೇಜ್ ಸ್ಥಳಾವಕಾಶವಿರುವ ಮೊದಲ ಬಸ್ ಆಗಿದೆ. ನಿಗಮದ ಉಪಾಧ್ಯಕ್ಷ ಮಹಮ್ಮದ್ ರಿಜ್ವಾನ್ ನವಾಬ್, ವ್ಯವಸ್ಥಾಪಕ ನಿರ್ದೇಶಕ ವಿ.ಅನೂಪ್ಕುಮಾರ್, ನಿರ್ದೇಶಕರಾದ (ಸಿಬ್ಬಂದಿ ಭದ್ರತಾ) ಡಾ.ಕೆ.ನಂದಿನಿದೇವಿ, ನಿಗಮದ ಹಿರಿಯ ಅಽಕಾರಿಗಳು, ವೋಲ್ವೋ ಕಂಪನಿಯ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.

RELATED ARTICLES

Latest News