ಪುಣೆ, ಅ. 22- ಮಹಾರಾಷ್ಟ್ರದ ಪುಣೆ ಜಿಲ್ಲೆಯ ಹಳ್ಳಿಯೊಂದರ ಬಳಿ ಖಾಸಗಿ ವಿಮಾನಯಾನ ಅಕಾಡೆಮಿಗೆ ಸೇರಿದ ತರಬೇತಿ ವಿಮಾನ ಇಂದು ಬೆಳಗ್ಗೆ ಪತನಗೊಂಡಿದ್ದು ಇದರಲ್ಲಿದ್ದ ತರಬೇತಿ ಪೈಲಟ್ ಮತ್ತು ಬೋಧಕ ಗಾಯಗೊಂಡಿದ್ದಾರೆ. ಬಾರಾಮತಿ ತಾಲೂಕಿನ ಗೋಜುಬಾವಿ ಗ್ರಾಮದ ಬಳಿ ಬೆಳಗ್ಗೆ 8 ಗಂಟೆ ಸುಮಾರಿಗೆ ಈ ಘಟನೆ ನಡೆದಿದೆ.
ರೆಡ್‍ಬರ್ಡ್ ಫ್ಲೈಟ್ ಟ್ರೈನಿಂಗ್ ಅಕಾಡೆಮಿಗೆ ಸೇರಿದ ತರಬೇತಿ ವಿಮಾನವು ಗೊಜುಬಾವಿ ಗ್ರಾಮದ ಬಳಿ ಪತನದ ನಂತರ ಗಾಯಗೊಂಡಿದ್ದ ಇಬ್ಬರನ್ನು ಇಬ್ಬರನ್ನೂ ಸ್ಥಳೀಯರ ನೆರವಿನೊಂದಿದೆ ಹತ್ತಿರದ ಆಸ್ಪತ್ರೆಗೆ ಸಾಗಿಸಲಾಗಿದೆ ಎಂದು ಬಾರಾಮತಿ ಪೊಲೀಸ್ ಠಾಣೆಯ ಇನ್‍ಸ್ಪೆಕ್ಟರ್ ಪ್ರಭಾಕರ್ ಮೋರೆ ತಿಳಿಸಿದ್ದಾರೆ.
ಬ್ರೇಕಿಂಗ್ : ಮೈಸೂರು ದಸರಾ ಮೇಲೆ ಉಗ್ರರ ಕಣ್ಣು, ಹೈಅಲರ್ಟ್ ಘೋಷಣೆ..!
ಅಪಘಾತಕ್ಕೆ ಕಾರಣ ಇನ್ನೂ ತಿಳಿದುಬಂದಿಲ್ಲ, ನಾವು ಘಟನೆಯ ಬಗ್ಗೆ ತನಿಖೆ ನಡೆಸುತ್ತಿದ್ದೇವೆ ಎಂದು ಅವರು ಹೇಳಿದರು.ವಿಮಾನ ಬೆಂಕಿ ಹೊತ್ತಿಕೊಂಡಿಲ್ಲ ಹಾಗಾಗಿ ಜೀವಹಾನಿ ಸಂಭವಿಸಿಲ್ಲ.ಪ್ರಸ್ತುತ ಗಾಯಾಳುಗಳಿಗೆ ಚಿಕಿತ್ಸೆ ನೀಡಲಾಗಿದ್ದು ಹೆಚ್ಚಿನ ಚಿಕಿತ್ಸೆಗಾಗಿ ಮುಂಬೈಗೆ ಏರ್ ಲಿಪ್ಟ್ ಮಾಡುವ ಸಾಧ್ಯತೆ ಇದೆ.
ಕಳೆದ ಗುರುವಾರ ಸಂಜೆ,ಖಾಸಗಿ ತರಬೇತಿ ವಿಮಾನವು ಬಾರಾಮತಿ ತಾಲೂಕಿನ ಕಫ್ತಾಲ್ ಗ್ರಾಮದ ಬಳಿ ಪತನಗೊಂಡಿತ್ತು ಅದರಲ್ಲಿ ಪೈಲಟ್ ಗಾಯಗೊಂಡಿದ್ದರು.