Friday, November 22, 2024
Homeರಾಷ್ಟ್ರೀಯ | Nationalಚುನಾವಣೆಯಲ್ಲಿ ಮುಸ್ಲಿಮರ ಮತ ಕೇಳ್ತಾರೆ, ಆದರೆ ಟಿಕೆಟ್ ಕೊಡಲ್ಲ : ಓವೈಸಿ ರೋಧನೆ

ಚುನಾವಣೆಯಲ್ಲಿ ಮುಸ್ಲಿಮರ ಮತ ಕೇಳ್ತಾರೆ, ಆದರೆ ಟಿಕೆಟ್ ಕೊಡಲ್ಲ : ಓವೈಸಿ ರೋಧನೆ

ಛತ್ರಪತಿ ಸಂಭಾಜಿನಗರ, ಮೇ 7 (ಪಿಟಿಐ) ಲೋಕಸಭೆ ಚುನಾವಣೆಯಲ್ಲಿ ಮಹಾರಾಷ್ಟ್ರದ ಎಲ್ಲಾ ಪಕ್ಷಗಳು ಮುಸ್ಲಿಂ ಮತಗಳನ್ನು ಬಯಸುತ್ತವೆ ಆದರೆ ಸಮುದಾಯದ ಅಭ್ಯರ್ಥಿಗಳನ್ನು ಯಾರು ನಿಲ್ಲಿಸಿಲ್ಲ ಎಂದು ಆಲ್‌ ಇಂಡಿಯಾ ಮಜ್ಲಿಸ್‌‍-ಎ-ಇತ್ತೆಹಾದುಲ್‌ ಮುಸ್ಲಿಮೀನ್‌ ಮುಖ್ಯಸ್ಥ ಅಸಾದುದ್ದೀನ್‌ ಓವೈಸಿ ಹೇಳಿದ್ದಾರೆ.

ಇಲ್ಲಿನ ಅವ್ಖಾಸ್‌‍ ಮೈದಾನದಲ್ಲಿ ರ್ಯಾಲಿಯನ್ನು ಉದ್ದೇಶಿಸಿ ಮಾತನಾಡಿದ ಓವೈಸಿ, ತಮ್ಮ ಔರಂಗಾಬಾದ್‌ ಸಂಸದ ಇಮ್ತಿಯಾಜ್‌ ಜಲೀಲ್‌ ಅವರ ಸೋಲನ್ನು ಖಚಿತಪಡಿಸಿಕೊಳ್ಳಲು ವಿವಿಧ ಪಕ್ಷಗಳು ಒಗ್ಗೂಡಿವೆ ಎಂದು ಹೇಳಿದ್ದಾರೆ.

ರಾಜಕೀಯ ಪಕ್ಷಗಳು ಮುಸ್ಲಿಮರ ಮತಗಳನ್ನು ಕೇಳುತ್ತಿವೆ ಆದರೆ ಮಹಾರಾಷ್ಟ್ರದ 48 ಸ್ಥಾನಗಳಲ್ಲಿ ನಮ್ಮ ಸಮುದಾಯದ ಒಬ್ಬನೆ ಒಬ್ಬ ಅಭ್ಯರ್ಥಿಗಳನ್ನು ಹುಡುಕಲು ಸಾಧ್ಯವಾಗಲಿಲ್ಲ. ಅವರು ಬೇರೆಡೆ ಫಲಿತಾಂಶಗಳ ಬಗ್ಗೆ ತಲೆಕೆಡಿಸಿಕೊಂಡಿಲ್ಲ ಆದರೆ ಎರಡು ಶಿವಸೇನೆ, ಎರಡು ಎನ್‌ಸಿಪಿ ಮತ್ತು ಅರ್ಧ ಕಾಂಗ್ರೆಸ್‌‍ ಜಲೀಲ್‌ ಅವರನ್ನು ಸೋಲಿಸಲು ಇಲ್ಲಿವೆ ಎಂದು ಅವರು ಹೇಳಿಕೊಂಡಿದ್ದಾರೆ.

ಶಿವಸೇನಾ (ಯುಬಿಟಿ) ಅಭ್ಯರ್ಥಿ ಚಂದ್ರಕಾಂತ್‌ ಖೈರೆ ಅವರನ್ನು ಟೀಕಿಸಿದ ಎಐಎಂಐಎಂ ಮುಖ್ಯಸ್ಥರು, ಅವರು ತಮನ್ನು ಹಿಂದುತ್ವದ ನಾಯಕ ಎಂದು ಕರೆದುಕೊಳ್ಳುತ್ತಿದ್ದರು ಆದರೆ (ಮುಸ್ಲಿಂ) ಮತದಾರರ ಪ್ರಾಮುಖ್ಯತೆಯನ್ನು ಅರಿತುಕೊಂಡ ನಂತರ ಇಲ್ಲಿನ ಈದ್ಗಾಕ್ಕೆ ಆಗಮಿಸಿದರು ಎಂದು ಹೇಳಿದರು.

ಈ ಹಿಂದೆ ಖಾನ್‌ ಯಾ ಬಾನ್‌ (ಮುಸ್ಲಿಮರು ಮತ್ತು ಹಿಂದೂಗಳು) ಆಧರಿಸಿದ ರಾಜಕೀಯದವರು ಈಗ ನಮಾಜ್‌ ಬಗ್ಗೆ ಮಾತನಾಡುತ್ತಿದ್ದಾರೆ, ಎಂದು ಅವರು ಹೇಳಿದರು.ಶಿವಸೇನೆ (ಯುಬಿಟಿ) ಮುಖ್ಯಸ್ಥ ಉದ್ಧವ್‌ ಠಾಕ್ರೆ ಅವರನ್ನು ಹೊಸ ಜಾತ್ಯತೀತ ಎಂದು ಬಣ್ಣಿಸಿದ ಓವೈಸಿ, ಮಾಜಿ ಮುಖ್ಯಮಂತ್ರಿ ಬಾಬರಿ ಮಸೀದಿ ಧ್ವಂಸದ ಬಗ್ಗೆ ತಮ ನಿಲುವನ್ನು ಸ್ಪಷ್ಟಪಡಿಸಬೇಕು ಮತ್ತು ಅದು ಪಾಪವೇ ಅಥವಾ ಅಲ್ಲವೇ ಎಂದು ಹೇಳಬೇಕು ಎಂದು ಒತ್ತಾಯಿಸಿದ್ದಾರೆ.

RELATED ARTICLES

Latest News