Sunday, May 19, 2024
Homeರಾಜ್ಯಪೆನ್‌ಡ್ರೈವ್‌ ಪ್ರಕರಣದಲ್ಲಿ ವಿರೋಧ ಪಕ್ಷಗಳ ಹತಾಶೆ ಕಾಣುತ್ತಿದೆ : ಸಚಿವ ಮಧು ಬಂಗಾರಪ್ಪ

ಪೆನ್‌ಡ್ರೈವ್‌ ಪ್ರಕರಣದಲ್ಲಿ ವಿರೋಧ ಪಕ್ಷಗಳ ಹತಾಶೆ ಕಾಣುತ್ತಿದೆ : ಸಚಿವ ಮಧು ಬಂಗಾರಪ್ಪ

ಶಿವಮೊಗ್ಗ, ಮೇ 7- ಹಾಸನದ ಪೆನ್‌ಡ್ರೈವ್‌ ಪ್ರಕರಣದಲ್ಲಿ ವಿರೋಧ ಪಕ್ಷಗಳಲ್ಲಿ ಹತಾಶೆ ಕಂಡು ಬರುತ್ತಿದೆ. ಆರೋಪದಿಂದ ತಪ್ಪಿಸಿಕೊಳ್ಳಲು ಅನಗತ್ಯವಾದ ಆರೋಪಗಳನ್ನು ಮಾಡಲಾಗುತ್ತಿದೆ ಎಂದು ಶಾಲಾ ಶಿಕ್ಷಣ ಹಾಗೂ ಸಾಕ್ಷರತಾ ಸಚಿವ ಮಧು ಬಂಗಾರಪ್ಪ ಹೇಳಿದರು.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಂತ್ರಸ್ಥರಿಗೆ ನಮ ಸರ್ಕಾರದಲ್ಲಿ ಖಂಡಿತಾ ನ್ಯಾಯ ಸಿಗಲಿದೆ. ಆ ಪ್ರಕರಣದಲ್ಲಿನ ಸತ್ಯಾಂಶಗಳನ್ನು ತಿರುಚುತ್ತಿರುವುದು ಖಂಡನೀಯ. ಯಾವುದೇ ಪ್ರಕರಣವಾದರೂ ಕಾನೂನು ಗೆಲ್ಲಬೇಕು, ನಮ ಸರ್ಕಾದಲ್ಲಿ ಕಾನೂನೇ ಗೆಲ್ಲಲಿದೆ. ಈ ಕುರಿತು ಅಭಿಪ್ರಾಯ ವ್ಯಕ್ತಪಡಿಸಲು ನನಗೂ ಆತುರ ಇದೆ. ಆದರೆ ಬಹಿರಂಗವಾಗಿ ಹೇಳುವುದಿಲ್ಲ, ನಮ್ಮ ಮುಖಂಡರ ಬಳಿ ಹಂಚಿಕೊಳ್ಳುತ್ತೇನೆ ಎಂದರು.

ದೇಶದಲ್ಲಿ ಸತ್ಯ ಮತ್ತು ಸುಳ್ಳಿನ ಮೇಲೆ ಚುನಾವಣೆ ನಡೆಯುತ್ತಿದೆ. ನಮ ಗ್ಯಾರಂಟಿಗಳು ಗೆಲ್ಲುತ್ತವೆ. ಭಾವನಾತಕ ರಾಜಕಾರಣವನ್ನು ಜನ ತಿರಸ್ಕರಿಸಿದ್ದಾರೆ. ಅಭಿವೃದ್ಧಿಯನ್ನು ಮರೆತು ಸುಳ್ಳು ಹೇಳುವುದಕ್ಕೆ ತಕ್ಕ ಪಾಠ ಕಲಿಸುತ್ತಾರೆ ಎಂದರು.

ದೇಶ ಸುರಕ್ಷಿತವಾಗಿರಬೇಕಾದರೆ ಮೋದಿ ಬೇಕು ಎಂಬ ಭಾವನೆ ಬಿತ್ತಲಾಗಿದೆ. 70 ವರ್ಷ ಕಾಂಗ್ರೆಸ್‌‍ ಆಡಳಿತದಲ್ಲಿ ಸುರಕ್ಷೆ ಇರಲಿಲ್ಲವೇ ? ಇವರೇನು ಬದುಕಿರಲಿಲ್ಲವೇ ಎಂದು ಸಾಮಾನ್ಯರೇ ತಿರುಗಿ ಪ್ರಶ್ನಿಸುತ್ತಾರೆ. ಬಿಜೆಪಿಯ ಮತದಾರರು ಕೂಡ ಈ ಬಾರಿ ರಾಜ್ಯ ಸರ್ಕಾರದ ಗ್ಯಾರಂಟಿಗಳಿಗಾಗಿ ಕಾಂಗ್ರೆಸ್‌‍ಗೆ ಮತ ನೀಡುತ್ತಿದ್ದಾರೆ.

ಸಾಮಾನ್ಯ ಜನ ಸಹಕಾರ ಬಯಸುತ್ತಾರೆ. ಸಹಕಾರ ಪಡೆದುಕೊಂಡವರು ಅದಕ್ಕೆ ಪ್ರತಿಯಾಗಿ ಮತ ಹಾಕುತ್ತಾರೆ. ಈ ಹಿಂದೆ ನಂಬಿಕೆ, ವಿಶ್ವಾಸದ ಮೇಲೆಯೇ ವಿಧಾನಸಭೆಯಲ್ಲಿ ಕಾಂಗ್ರೆಸ್‌‍ಗೆ ಅವಕಾಶ ಕೊಟ್ಟಿದ್ದರು. ಗ್ಯಾರಂಟಿ ಜಾರಿಯ ಬಳಿಕ ಅದರ ಪರಿಣಾಮ ಮತ್ತಷ್ಟು ಹೆಚ್ಚಾಗಿದೆ ಎಂದರು.

ಶಿವಮೊಗ್ಗದಲ್ಲಿ ಕಾಂಗ್ರೆಸ್‌‍ ಅಭ್ಯರ್ಥಿ ಗೀತಾ ಶಿವಕುಮಾರ್‌ ಪರವಾಗಿ ಜಿಲ್ಲೆಯ ಎಲ್ಲಾ ಮುಖಂಡರು ಒಗ್ಗಟ್ಟಾಗಿ ಕೆಲಸ ಮಾಡಿದ್ದಾರೆ. ಉತ್ತಮ ಫಲಿತಾಂಶ ಬರುವ ನಿರೀಕ್ಷೆ ಇದೆ. ಎಲ್ಲಾ ಚುನಾವಣೆಯಲ್ಲೂ ವೈಯಕ್ತಿಕ ಆರೋಪಗಳು ಸಾಮಾನ್ಯ, ಆದರೆ ಅದಕ್ಕೆ ಇತಿಮಿತಿ ಅಗತ್ಯ ಎಂದು ಕುಮಾರ ಬಂಗಾರಪ್ಪ ಅವರ ಟೀಕೆಗೆ ಪ್ರತಿಕ್ರಿಯಿಸಿದರು.

RELATED ARTICLES

Latest News