ಪ್ರಯಾಗ್‍ರಾಜ್,ಜ.30- ಅಂತರ್ಧರ್ಮೀಯ ವಿವಾಹದ ನಂತರ ಭದ್ರತೆಗೆ ಆಗ್ರಹಿಸಿ ದಂಪತಿ ಸಲ್ಲಿಸಿದ್ದ ಅರ್ಜಿಗೆ ಪರಿಹಾರ ನೀಡಲು ಅಲಹಾಬಾದ್ ಹೈಕೋರ್ಟ್ ನಿರಾಕರಿಸಿದೆ. ಈ ಜೋಡಿಯ ವಿವಾಹವು ಉತ್ತರ ಪ್ರದೇಶದ ಧಾರ್ಮಿಕ ಮತಾಂತರ ನಿಷೇಧ ಕಾಯ್ದೆಯ ನಿಬಂಧನೆಗಳಿಗೆ ಬದ್ಧವಾಗಿಲ್ಲ ಎಂದು ನ್ಯಾಯಾಲಯ ಹೇಳಿದೆ. ನ್ಯಾಯಮೂರ್ತಿ ಸರಳ್ ಶ್ರೀವಾಸ್ತವ ಅವರು ಮೊರಾದಾಬಾದ್ ಮತ್ತು ಇತರ ಜಿಲ್ಲೆಗಳ ಅನೇಕ ಅರ್ಜಿದಾರರ ಪ್ರತ್ಯೇಕ ಅರ್ಜಿಗಳನ್ನು ತಿರಸ್ಕರಿಸಿ ಆದೇಶ ನೀಡಿದ್ದಾರೆ.
ದಂಪತಿಗಳು ತಮ್ಮ ವೈವಾಹಿಕ ಜೀವನದಲ್ಲಿ ಹಸ್ತಕ್ಷೇಪ ಮಾಡುವುದನ್ನು ನಿಲ್ಲಿಸುವಂತೆ ಕುಟುಂಬವನ್ನು ಕೇಳಬೇಕೆಂದು ನ್ಯಾಯಾಲಯವನ್ನು ಒತ್ತಾಯಿಸಿದರು ಮತ್ತು ತಮ್ಮ ಜೀವಕ್ಕೆ ಬೆದರಿಕೆಯನ್ನು ಉಲ್ಲೆಖಿಸಿ ತಮ್ಮ ಸುರಕ್ಷತೆಗೆ ಭದ್ರತೆಯನ್ನು ಕೋರಿದ್ದರು.
ಕಡಲ್ಗಳ್ಳರಿಂದ 19 ಪಾಕ್ ಸಿಬ್ಬಂದಿಗಳನ್ನು ರಕ್ಷಿಸಿದ ಭಾರತದ ಐಎನ್‍ಎಸ್ ಸುಮಿತ್ರಾ
ಇದು ವಿರುದ್ಧ ಧರ್ಮದ ಜೋಡಿಯ ವಿವಾಹ ಪ್ರಕರಣ ಎಂದು ನ್ಯಾಯಾಲಯ ಹೇಳಿದೆ. ವಿವಾಹದ ಮೊದಲು ಧಾರ್ಮಿಕ ಮತಾಂತರದ ಕಾನೂನು ಪ್ರಕ್ರಿಯೆಯನ್ನು ಅನುಸರಿಸಲಾಗಿಲ್ಲ. ಹಾಗಾಗಿ ಈ ಮದುವೆ ಕಾನೂನಿನಡಿ ಸಿಂಧುವಾಗಿಲ್ಲ ಎಂದಿರುವ ನ್ಯಾಯಾಲಯ ಈ ಮದುವೆಯಲ್ಲಿ ಮತಾಂತರ ತಡೆ ಕಾನೂನನ್ನು ಪಾಲಿಸಿಲ್ಲ ಎಂದು ಹೇಳಿದೆ.
ಆದಾಗ್ಯೂ, ಅರ್ಜಿದಾರರು ಕಾನೂನು ಪ್ರಕ್ರಿಯೆಗಳನ್ನು ಅನುಸರಿಸಿ ಮದುವೆಯಾದರೆ, ಅವರು ಹೊಸದಾಗಿ ರಕ್ಷಣೆ ಪಡೆಯಬಹುದು ಎಂದು ನ್ಯಾಯಾಲಯ ಹೇಳಿದೆ. 2021 ರಲ್ಲಿ ಅಂಗೀಕರಿಸಿದ ಮತಾಂತರ ವಿರೋ ಕಾನೂನು ತಪ್ಪು ನಿರೂಪಣೆ, ಬಲವಂತ, ವಂಚನೆ, ಅನಗತ್ಯ ಪ್ರಭಾವ, ಬಲವಂತ ಮತ್ತು ಪ್ರಚೋದನೆಯಿಂದ ಒಂದು ಧರ್ಮದಿಂದ ಮತ್ತೊಂದು ಧರ್ಮಕ್ಕೆ ಕಾನೂನುಬಾಹಿರವಾಗಿ ಮತಾಂತರವನ್ನು ನಿಷೇಧಿಸುತ್ತದೆ. ಒಟ್ಟು ಎಂಟು ಅರ್ಜಿಗಳ ಪೈಕಿ ಐವರು ಮುಸ್ಲಿಂ ಯುವಕರು ಹಿಂದೂ ಯುವತಿಯರನ್ನು ಮತ್ತು ಮೂವರು ಹಿಂದೂ ಯುವಕರು ಮುಸ್ಲಿಂ ಯುವತಿಯರನ್ನು ವಿವಾಹವಾಗಿದ್ದಾರೆ.
ಉತ್ತರ ಪ್ರದೇಶ, ಮಧ್ಯಪ್ರದೇಶ, ಗುಜರಾತ್, ಉತ್ತರಾಖಂಡ ಮತ್ತು ಹಿಮಾಚಲ ಪ್ರದೇಶ ರಾಜ್ಯಗಳ ಮತಾಂತರ ವಿರೋಧಿ ಕಾನೂನುಗಳ ಸಾಂವಿಧಾನಿಕ ಸಿಂಧುತ್ವವನ್ನು ಪ್ರಶ್ನಿಸುವ ಅರ್ಜಿಗಳು ಸುಪ್ರೀಂ ಕೋರ್ಟ್‍ನಲ್ಲಿ ಬಾಕಿ ಉಳಿದಿವೆ ಎಂದು ತಿಳಿದುಬಂದಿದೆ.