Sunday, April 28, 2024
Homeಆರೋಗ್ಯ / ಜೀವನಶೈಲಿಸರ್ವಿಕಲ್‌ ಕ್ಯಾನ್ಸರ್‌ ಅರಿವು ಮಾಸ : ವರದಾನವಾದ ಎಚ್‌ಪಿವಿ ಚುಚ್ಚುಮದ್ದು

ಸರ್ವಿಕಲ್‌ ಕ್ಯಾನ್ಸರ್‌ ಅರಿವು ಮಾಸ : ವರದಾನವಾದ ಎಚ್‌ಪಿವಿ ಚುಚ್ಚುಮದ್ದು

ಬೆಂಗಳೂರು, ಜ.30- ಕೋವಿಡ್‌ 19 ಸಾಂಕ್ರಾಮಿಕದಿಂದ ಜಗತ್ತು ನಿಧಾನವಾಗಿ ಹೊರಬರುತ್ತಿದೆ. ಈ ಹಂತದಲ್ಲಿ ಸರ್ವಿಕಲ್‌ ಕ್ಯಾನ್ಸರ್‌ ಅರಿವು ಮಾಸ ನಡೆಯುತ್ತಿದೆ. ಈ ಕ್ಯಾನ್ಸರ್‌ ಇಂದಿಗೂ ಆರೋಗ್ಯಸೇವಾ ಕ್ಷೇತ್ರದಲ್ಲಿ ಸವಾಲಾಗಿದೆ. ಎಚ್‌ಪಿವಿ ಚುಚ್ಚುಮದ್ದು ಎಲ್ಲರಿಗೂ ದೊರೆಯುವಂತೆ ಮಾಡಿ, ರೋಗ ಪತ್ತೆ ಪರೀಕ್ಷೆ, ಕ್ಯಾನ್ಸರ್‌ ಪೂರ್ವ ಚಿಕಿತ್ಸೆ ಮತ್ತು ಸರ್ವಿಕಲ್‌ ಕ್ಯಾನ್ಸರ್‌ ನಿರ್ವಹಣೆಯ ಮೂಲಕ ಇದನ್ನು ನಿಭಾಯಿಸಬಹುದು.

ಮನುಷ್ಯನ ಸಂತಾನೋತ್ಪತ್ತಿ ಪ್ರಕ್ರಿಯೆಯಲ್ಲಿ ಹ್ಯೂಮನ್‌ ಪಾಪಿಲೋಮಾವೈರಸ್‌ ಅಥವಾ ಎಚ್‌ಪಿವಿ ಹೆಚ್ಚು ಸಾಮಾನ್ಯವಾಗಿ ಕಾಣಿಸುವ ವೈರಸ್‌. ಎಚ್‌ಪಿವಿ ಸೋಂಕು ಯಾವುದೇ ಹಸ್ತಕ್ಷೇಪವಿಲ್ಲದೇ ಕೆಲವೇ ತಿಂಗಳಲ್ಲಿ ಕಣ್ಮರೆಯಾದರೂ ಕೆಲವೊಂದು ಪ್ರಕರಣಗಳಲ್ಲಿ ಎಚ್‌ಪಿವಿ ಸೋಂಕು ದೇಹದಲ್ಲಿಯೇ ಉಳಿದು ಸರ್ವಿಕಲ್‌ ಕ್ಯಾನ್ಸರ್‌ಗೆ ಕಾರಣವಾಗಬಹುದು. ಲೈಂಗಿಕ ಸಂಪರ್ಕದಿಂದ ಹರಡುವ ಕ್ಯಾನ್ಸರ್‌ ಇದಾಗಿದೆ.

ಇದನ್ನು ತಡೆಗಟ್ಟಬಹುದಾದರೂ ಅರಿವಿನ ಕೊರತೆಯಿಂದಾಗಿ ವಿಶ್ವಾದ್ಯಂತ ವಿಶೇಷವಾಗಿ ಬಡ ಮತ್ತು ಮಧ್ಯಮ ಆದಾಯದ ರಾಷ್ಟ್ರಗಳ ಸಾವಿರಾರು ಮಹಿಳೆಯರು ಇದರಿಂದ ತೊಂದರೆಗೊಳಗಾಗುತ್ತಿದ್ದಾರೆ. ಭಾರತ ಮತ್ತು ವಿದೇಶಗಳಲ್ಲಿ ಪ್ರತಿ ವರ್ಷ ಸುಮಾರು 12,000 ಮಹಿಳೆಯರಲ್ಲಿ ಸರ್ವಿಕಲ್‌ ಕ್ಯಾನ್ಸರ್ ಕಾಣಿಸಿಕೊಳ್ಳುತ್ತಿದೆ. ಚಿಕಿತ್ಸೆಯ ಬಳಿಕವೂ ಸುಮಾರು 4,000 ಮಹಿಳೆಯರು ಮರಣ ಹೊಂದುತ್ತಿದ್ದಾರೆ. ಅಂದಾಜು ಶೇ 80ರಷ್ಟು ಮಹಿಳೆಯರು ಒಂದಲ್ಲ ಒಂದು ಹಂತದಲ್ಲಿ ಎಚ್‌ಪಿವಿ ಸೋಂಕಿಗೆ ಒಳಗಾಗುತ್ತಿದ್ದಾರೆ. ಕೆಲವರಲ್ಲಿ ಕ್ಯಾನ್ಸರ್‌ ಬೆಳೆಯುತ್ತದೆ.

ಹೊಸ ಕರೆನ್ಸಿ ಪರಿಚಯಿಸಲು ನಿರ್ಧರಿಸಿದ ಪಾಕ್

ಡಬ್ಲ್ಯುಎಚ್‌ಒದಂಥ ಸರಕಾರಿ ಸಂಸ್ಥೆಗಳು ಬಡತನ ನಿರ್ಮೂಲನಾ ಕಾರ್ಯಕ್ರಮದಲ್ಲಿ ಸರ್ವಿಕಲ್‌ ಕ್ಯಾನ್ಸರನ್ನು ಆದ್ಯತೆಯ ಒಬ್ಬರಿಂದ ಒಬ್ಬರಿಗೆ ಹರಡದ ಕಾಯಿಲೆಯಾಗಿ ಪರಿಗಣಿಸಬೇಕು. ಪರಿಣಾಮಕಾರಿ ತಪಾಸಣಾ ವಿಧಾನಗಳು ಮತ್ತು ಚುಚ್ಚುಮದ್ದುಗಳು ಇದಕ್ಕೆ ಲಭ್ಯವಿದೆ. ಅನೇಕ ರಾಷ್ಟ್ರಗಳಲ್ಲಿ ಚುಚ್ಚುಮದ್ದು ಬಳಕೆಯಿಂದಾಗಿ ಸರ್ವಿಕಲ್‌ ಕ್ಯಾನ್ಸರ್‌ ಮರಣಗಳು ಇಳಿಮುಖವಾಗಿವೆ. ಈ ಕ್ಯಾನ್ಸರ್‌ನ ನಿರ್ಮೂಲನೆಗಾಗಿ 2030ರ ಹೊತ್ತಿಗೆ ಎಲ್ಲರಿಗೂ ಚುಚ್ಚುಮದ್ದು, ತಪಾಸಣೆ ಮತ್ತು ಚಿಕಿತ್ಸೆ ದೊರೆಯುವಂತಾಗಬೇಕು ಎಂದು ಡಬ್ಲ್ಯುಎಚ್‌ಒ ನಿರ್ದೇಶನ ನೀಡಿದೆ.

ಭಾರತದಲ್ಲಿಯೂ ಪ್ರಸ್ತುತ ಮೂರು ಬಗೆಯ ಎಚ್‌ಪಿವಿ ಚುಚ್ಚುಮದ್ದುಗಳು ದೊರೆಯುತ್ತಿವೆ. ಇತ್ತೀಚೆಗೆ ಭಾರತೀಯ ಸರಕಾರ ಮತ್ತು ಸೀರಮ್‌ ಇನ್‌ಸ್ಟಿಟ್ಯೂಟ್‌ ಆಫ್‌ ಇಂಡಿಯಾದ ಸಹಯೋಗದಲ್ಲಿ ಸರ್ವಾವ್ಯಾಕ್‌ ಎಂಬ ಚುಚ್ಚುಮದ್ದುವನ್ನು ದೇಶೀಯವಾಗಿ ಅಭಿವೃದ್ಧಿಪಡಿಸಲಾಗಿದೆ. ಸರ್ವಿಕಲ್‌ ಕ್ಯಾನ್ಸರ್‌ಗೆ ಶೇ 70ರಷ್ಟು ಕಾರಣವಾಗುವ ಎಚ್‌ಪಿವಿ 16 ಮತ್ತು18 ಸೇರಿದಂತೆ ನಾಲ್ಕು ಬಗೆಯ ಎಚ್‌ಪಿವಿ ಮಾದರಿ ವೈರಸ್‌ ನಾಶಪಡಿಸುವ ಸಾಮರ್ಥ್ಯ ಸರ್ವಾವ್ಯಾಕ್‌ ಹೊಂದಿದೆ.

ಹೊಸ ಕರೆನ್ಸಿ ಪರಿಚಯಿಸಲು ನಿರ್ಧರಿಸಿದ ಪಾಕ್

ಸರ್ವಿಕಲ್‌ ಕ್ಯಾನ್ಸರ್‌ ತಡೆಗಟ್ಟಬಹುದು. ಇದಕ್ಕೆ ಸೂಕ್ತ ಚಿಕಿತ್ಸೆಯೂ ಇದೆ. ಗುಣಮಟ್ಟದ ಜೀವನಶೈಲಿ ಮತ್ತು ಸಕಾಲಿಕವಾಗಿ ತಪಾಸಣೆಯ ಮೂಲಕ ಇದನ್ನು ಪತ್ತೆ ಹಚ್ಚುವ ಮೂಲಕ ಇದನ್ನು ನಿಭಾಯಿಸಬಹುದು ಎಂದು ಸೀರಮ್ ಇನ್‌ಸ್ಟಿಟ್ಯೂಟ್ ಆಫ್ ಇಂಡಿಯಾ ತಿಳಿಸಿದೆ.

RELATED ARTICLES

Latest News