Sunday, April 28, 2024
Homeರಾಷ್ಟ್ರೀಯನಾಗಪಟ್ಟಣಂನಲ್ಲಿ ಪಿಎಂ ಅವಾಸ್ ಯೋಜನೆ ಜಾರಿಯಾಗಿಲ್ಲ ; ರವಿ

ನಾಗಪಟ್ಟಣಂನಲ್ಲಿ ಪಿಎಂ ಅವಾಸ್ ಯೋಜನೆ ಜಾರಿಯಾಗಿಲ್ಲ ; ರವಿ

ಚೆನ್ನೈ, ಜ 30 (ಪಿಟಿಐ) ತಮಿಳುನಾಡು ರಾಜ್ಯಪಾಲ ಆರ್ ಎನ್ ರವಿ ಅವರು ಸರ್ಕಾರದ ನಿರಾಸಕ್ತಿಯಿಂದಾಗಿ ನಾಗಪಟ್ಟಣಂ ಜಿಲ್ಲೆಯ ಅರ್ಹ ಬಡ ಗ್ರಾಮಸ್ಥರು ಪ್ರಧಾನಮಂತ್ರಿ ಆವಾಸ್ ಯೋಜನೆಯ ಲಾಭ ಪಡೆಯಲು ಸಾಧ್ಯವಾಗದೇ ಇರುವುದು ದುರಂತ ಎಂದು ಆರೋಪಿಸಿದ್ದಾರೆ. ಜ.28 ರಂದು ರಾಜ್ಯದ ಕಾವೇರಿ ನದಿ ಮುಖಜ ಪ್ರದೇಶದಲ್ಲಿರುವ ನಾಗಪಟ್ಟಣಂ ಜಿಲ್ಲೆಗೆ ಭೇಟಿ ನೀಡಿದ್ದ ರವಿ ಅವರು ಎಕ್ಸ್‍ನಲ್ಲಿ ಈ ರೀತಿ ಪೋಸ್ಟ್ ಮಾಡಿದ್ದಾರೆ.

ನಾಗಪಟ್ಟಣಂ ಜಿಲ್ಲೆಯ ಅರ್ಹ ಬಡ ಗ್ರಾಮಸ್ಥರು ಪ್ರಧಾನ ಮಂತ್ರಿ ಆವಾಸ್ ಯೋಜನೆಯ ಪ್ರಯೋಜನವನ್ನು ಪಡೆಯಲು ಸಾಧ್ಯವಾಗದಿರುವುದು ದುರಂತ. ಆಡಳಿತಾತ್ಮಕ ನಿರಾಸಕ್ತಿ ಮತ್ತು ಆಪಾದಿತ ಭ್ರಷ್ಟಾಚಾರದಿಂದಾಗಿ ಇಂತಹ ಅವಘಡ ಸಂಭವಿಸಿದೆ ಎಂದು ಅವರು ದೂರಿದ್ದಾರೆ.

ರಾಜ್ಯಪಾಲರ ಆರೋಪಕ್ಕೆ ಪ್ರತಿಕ್ರಿಯಿಸಿದ ಗ್ರಾಮೀಣಾಭಿವೃದ್ಧಿ ಸಚಿವ ಐ ಪೆರಿಯಸಾಮಿ, ಪ್ರಧಾನಮಂತ್ರಿ ಆವಾಸ್ ಯೋಜನೆಯಡಿ 127 ಫಲಾನುಭವಿಗಳಿಗೆ ಮನೆ ನಿರ್ಮಿಸಿಕೊಳ್ಳಲು ಮಂಜೂರಾತಿ ನೀಡಲಾಗಿದೆ. ಇಲ್ಲಿಯವರೆಗೆ 75 ಫಲಾನುಭವಿಗಳು ವಸತಿಗಳನ್ನು ನಿರ್ಮಿಸಿದ್ದಾರೆ ಮತ್ತು ಉಳಿದ 52 ಪ್ರದೇಶಗಳಿಗೆ ಸಂಬಂಧಿಸಿದಂತೆ ನಾಗಪಟ್ಟಿಣಂ ಜಿಲ್ಲೆಯ ವೆಣ್ಮಣಿ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ನಿರ್ಮಾಣ ಕಾರ್ಯ ನಡೆಯುತ್ತಿದೆ.

ಧ್ವಜ ಸ್ತಂಭಕ್ಕೆ ಅನುಮತಿ ಕೊಟ್ಟ ಕೆರೆಗೋಡು ಪಿಡಿಒ ಅಮಾನತು

ಆ ಪ್ರದೇಶದಲ್ಲಿ 66 ಗುಡಿಸಲುಗಳನ್ನು ರಾಜ್ಯ ವಸತಿ ಯೋಜನೆಗೆ ಅರ್ಹವೆಂದು ಗುರುತಿಸಲಾಗಿದೆ ಮತ್ತು ಇವುಗಳನ್ನು ಕಾಂಕ್ರೀಟ್ ಮನೆಗಳಾಗಿ ಪರಿವರ್ತಿಸಲಾಗುವುದು.ಅರ್ಹ ಫಲಾನುಭವಿಗಳನ್ನು ಹೊಂದಿರದ ಸ್ಥಳಗಳಿಂದ ಹೆಚ್ಚು ಅರ್ಹ ಅರ್ಜಿದಾರರನ್ನು ಹೊಂದಿರುವ ಪ್ರದೇಶಗಳಿಗೆ ಮನೆಗಳನ್ನು (ಕೇಂದ್ರ ಪ್ರಧಾನ ಮಂತ್ರಿ ಆವಾಸ್ ಯೋಜನೆಯಡಿ ಫಲಾನುಭವಿಗಳಿಗೆ ಹಂಚಿಕೆ ಮಾಡಲು ಪ್ರಸ್ತಾಪಿಸಲಾಗಿದೆ) ವರ್ಗಾಯಿಸಲು ಕೇಂದ್ರ ಸರ್ಕಾರವು ತನ್ನ ಅನುಮತಿಯನ್ನು ನೀಡಿಲ್ಲ ಎಂದಿದ್ದಾರೆ.

ಇಂತಹ ತಾಂತ್ರಿಕ ಅಂಶಗಳ ಹಿನ್ನೆಲೆಯಲ್ಲಿ ವೆಣ್ಮಣಿ ಗ್ರಾಮ ಪಂಚಾಯಿತಿಯಂತಹ ಸ್ಥಳೀಯ ಸಂಸ್ಥೆಗಳಿಗೆ ಅಗತ್ಯಕ್ಕೆ ಅನುಗುಣವಾಗಿ ಮನೆಗಳನ್ನು ಹಂಚಿಕೆ ಮಾಡಲು ಸಾಧ್ಯವಿಲ್ಲ ಎಂದು ಸಚಿವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

RELATED ARTICLES

Latest News