Saturday, August 9, 2025
Homeರಾಷ್ಟ್ರೀಯ | Nationalಎರಡನೇ ದಿನವೂ ಪ್ರತಿಕೂಲ ಹವಾಮಾನದಿಂದಾಗಿ ಅಮರನಾಥ ಯಾತ್ರೆ ಸ್ಥಗಿತ

ಎರಡನೇ ದಿನವೂ ಪ್ರತಿಕೂಲ ಹವಾಮಾನದಿಂದಾಗಿ ಅಮರನಾಥ ಯಾತ್ರೆ ಸ್ಥಗಿತ

Amarnath Yatra suspended for second day due to inclement weather

ಜಮ್ಮು,ಆ.1- ಪ್ರತಿಕೂಲ ಹವಾಮಾನದಿಂದಾಗಿ ಜಮುವಿನಿಂದ ಅಮರನಾಥ ಯಾತ್ರೆಯನ್ನು ಸತತ ಎರಡನೇ ದಿನವಾದ ಇಂದು ಕೂಡ ಸ್ಥಗಿತಗೊಳಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.ದಕ್ಷಿಣ ಕಾಶೀರ ಹಿಮಾಲಯದಲ್ಲಿರುವ ಅಮರನಾಥ ಗುಹಾ ದೇವಾಲಯಕ್ಕೆ ಹೊಸ ಯಾತ್ರಿಕರಿಗೆ ಅವಕಾಶ ನೀಡಲಾಗಿಲ್ಲ ಎಂದು ಅವರು ತಿಳಿಸಿದ್ದಾರೆ.

ಹವಾಮಾನ ಪರಿಸ್ಥಿತಿ ಸುಧಾರಿಸದ ಕಾರಣ ಪಹಲ್ಗಾಮ್‌ ಮತ್ತು ಬಾಲ್ಟಾಲ್‌ನ ಅವಳಿ ಮೂಲ ಶಿಬಿರಗಳಿಂದ ಹೆಚ್ಚಿನ ಭದ್ರತೆಯ ಭಗವತಿ ನಗರ ಮೂಲ ಶಿಬಿರದಲ್ಲಿ ಯಾತ್ರಾರ್ಥಿಗಳನ್ನು ಇರಿಸಲಾಗಿದೆ.

ಜುಲೈ 3 ರಂದು ಕಣಿವೆಯಿಂದ 38 ದಿನಗಳ ತೀರ್ಥಯಾತ್ರೆ ಪ್ರಾರಂಭವಾದಾಗಿನಿಂದ 4 ಲಕ್ಷಕ್ಕೂ ಹೆಚ್ಚು ಯಾತ್ರಿಕರು 3,880 ಮೀಟರ್‌ ಎತ್ತರದ ಗುಹಾ ದೇವಾಲಯದಲ್ಲಿ ಶಿವನ ಹಿಮಲಿಂಗಕ್ಕೆ ಪೂಜೆ ಸಲ್ಲಿಸಿದ್ದಾರೆ.

ಜಮ್ಮುವಿನಿಂದ ಗುಹಾ ದೇವಾಲಯಕ್ಕೆ ಯಾತ್ರೆಯನ್ನು ಇಂದು ಸ್ಥಗಿತಗೊಳಿಸಲಾಗಿದೆ. ಪ್ರತಿಕೂಲ ಹವಾಮಾನದ ಜೊತೆಗೆ ಮುನ್ನೆಚ್ಚರಿಕೆ ಕ್ರಮಗಳನ್ನು ಗಮನದಲ್ಲಿಟ್ಟುಕೊಂಡು ಇದನ್ನು ಮಾಡಲಾಗಿದೆ. ಜಮುವಿನಿಂದ ಯಾತ್ರೆಯನ್ನು ಸ್ಥಗಿತಗೊಳಿಸಲಾಗುತ್ತಿರುವುದು ಇದು ಎರಡನೇ ಬಾರಿ. ಜುಲೈ 2 ರಂದು ಲೆಫ್ಟಿನೆಂಟ್‌ ಗವರ್ನರ್‌ ಮನೋಜ್‌ ಸಿನ್ಹಾ ಮೊದಲ ಬ್ಯಾಚ್‌ಗೆ ಚಾಲನೆ ನೀಡಿದ ನಂತರ ಸದ್ಯ ಒಟ್ಟು 1,44,124 ಯಾತ್ರಿಕರು ಜಮ್ಮು ಮೂಲ ಶಿಬಿರದಿಂದ ಕಣಿವೆಗೆ ತೆರಳಿದ್ದಾರೆ.

RELATED ARTICLES

Latest News