ಬೆಂಗಳೂರು,ಜೂ.19- ಕನ್ನಡ ಭಾಷೆಗೆ ಎರಡು ಸಾವಿರ ವರ್ಷಕ್ಕೂ ಹೆಚ್ಚು ಇತಿಹಾಸವಿದ್ದು, ವಿಶ್ವದಾದ್ಯಂತ ಒಂದು ಶಾಸ್ತ್ರೀಯ ಭಾಷೆ ಎಂಬುದು ಮನೆ ಮಾತಾಗಿದೆ. ಸಾಹಿತ್ಯ, ಸಂಗೀತ, ಕಲೆ, ಇತ್ಯಾದಿ ಕ್ಷೇತ್ರಗಳಲ್ಲಿ ಕನ್ನಡ ನೀಡಿರುವ ಕೊಡುಗೆ ವಿಶ್ವ ಮಾನ್ಯವಾಗಿದ್ದರೂ ನಟ ಕಮಲ್ ಹಾಸನ್ ಹೇಳಿಕೆ ಖಂಡನೀಯ ಎಂದು ಅಮೆರಿಕ ಕನ್ನಡ ಒಕ್ಕೂಟ ಹೇಳಿದೆ.
ಇತ್ತೀಚಿನ ಅಮೆರಿಕದ ವಿವಿಧ ಕನ್ನಡ ಕೂಟಗಳು ಸಭೆ ನಡೆಸಿ ಕರ್ನಾಟಕದ ವಿದ್ಯಮಾನಗಳಿಗೆ ಪ್ರತಿಕ್ರಿಯಿಸಿ ಕನ್ನಡ ಮತ್ತು ತಮಿಳು ಸಹೋದರ ಭಾಷೆಗಳು. ಯಾವುದೇ ಕಾರಣಕ್ಕೂ ತಮಿಳು ಭಾಷೆ ಪುರಾತನವಾದ ಕನ್ನಡದ ತಾಯಿಯಾಗಲು ಸಾಧ್ಯವೇ ಇಲ್ಲ. ಈ ರೀತಿಯ ಬಾಲಿಶ ಹೇಳಿಕೆ ನೀಡಿರುವ ಕಲಾವಿದ
ಕಮಲ್ ಹಾಸನ್ ಅವರ ಉದ್ಧಟತನವನ್ನು ಕಟುವಾಗಿ ಅಮೇರಿಕಾ ಕನ್ನಡ ಸಂಸ್ಥೆ (ಅಕ್ಕ) ಖಂಡಿಸುತ್ತದೆ ಎಂದು ಅಕ್ಕ ಅಧ್ಯಕ್ಷರಾಗಿರುವ ಮಧು ರಂಗಯ್ಯ ಅವರು ತಿಳಿಸಿದ್ದಾರೆ. ಅಲ್ಲದೆ ಕಮಲ್ ಹಾಸನ್ ನಟಿಸಿರುವ ಚಿತ್ರಗಳ ಕನ್ನಡ ಅವತರಣಿಕೆಯನ್ನು ಬಹಿಷ್ಕರಿಸಲಾಗುವುದು ಎಂದು ತಿಳಿಸಿದ್ದಾರೆ.
- ಪಾಕ್ ಪ್ರವಾಹದಲ್ಲಿ 220 ಜನ ಬಲಿ
- ಇಂಡೋನೇಷ್ಯಾದ ಸುಲಾವೆಸಿ ದ್ವೀಪದಲ್ಲಿ 5.8 ತೀವ್ರತೆಯ ಭೂಕಂಪ
- ಪೀಣ್ಯ ಫ್ಲೈ ಓವರ್ ಮೇಲೆ ಅಪಘಾತ, ಗ್ಯಾಸ್ ಸಿಲಿಂಡರ್ ಡೆಲಿವರಿ ಬಾಯ್ ಸಾವು
- ಧರ್ಮಸ್ಥಳದ ಅಪಪ್ರಚಾರ ಪಿತೂರಿ ಮಾಡಿದವರ ವಿರುದ್ಧ ತನಿಖೆಗೆ ಬಿವೈವಿ ಆಗ್ರಹ
- ನಗರ್ತಪೇಟೆ ಅಗ್ನಿ ಅವಘಡ, ಇಬ್ಬರ ಬಂಧನ