Tuesday, July 16, 2024
Homeರಾಷ್ಟ್ರೀಯ22 ವರ್ಷಗಳ ನಂತರ ಪತ್ತೆಯಾಯ್ತು ಪರ್ವತರೋಹಿ ಪಾರ್ಥಿವ ಶರೀರ

22 ವರ್ಷಗಳ ನಂತರ ಪತ್ತೆಯಾಯ್ತು ಪರ್ವತರೋಹಿ ಪಾರ್ಥಿವ ಶರೀರ

ಲಿಮಾ, ಜು.9- ಪೆರುವಿನಲ್ಲಿ ಹಿಮಭರಿತ ಶಿಖರವನ್ನು ಏರುತ್ತಿದ್ದಾಗ ಕಣರೆಯಾಗಿದ್ದ ಅಮೆರಿಕದ ಪರ್ವತಾರೋಹಿಯ ದೇಹ 22 ವರ್ಷಗಳ ನಂತರ ಪತ್ತೆಯಾಗಿದೆ. ಹೀಮದ ಪರಿಣಾಮ ಅವರ ದೇಹ ಕೊಳೆಯದೆ ಮಾಮೂಲಿನಂತೆ ಪತ್ತೆಯಾಗಿರುವುದನ್ನು ಪೆರು ಪೊಲೀಸರು ಖಚಿತಪಡಿಸಿದ್ದಾರೆ.

ವಿಲಿಯಂ ಸ್ಟ್ಯಾಂಪ್‌ ಫ್ಲ್ ಅವರು ಕಳೆದ 2002 ರಲ್ಲಿ 59 ನೇ ವಯಸ್ಸಿನಲ್ಲಿ ಪರ್ವತಾರೋಹಣ ಮಾಡುತ್ತಿದ್ದಾಗ ಹಿಮ ಕುಸಿತದಿಂದಾಗಿ ಸಾವನ್ನಪ್ಪಿದ್ದರು.6,700 ಮೀಟರ್‌ (22,000 ಅಡಿ) ಗಿಂತ ಹೆಚ್ಚು ಎತ್ತರವಿರುವ ಹುವಾಸ್ಕಾರನ್‌ ಪರ್ವತದ ಮೇಲೆ ಅವರು ಸಾವನ್ನಪ್ಪಿದ್ದರಿಂದ ಅವರ ದೇಹವನ್ನು ಪತ್ತೆ ಮಾಡಲು ಇದುವರೆಗೂ ಸಾಧ್ಯವಾಗಿರಲಿಲ್ಲ.

ಇದೀಗ ಅವರ ಅವಶೇಷಗಳು ಆಂಡಿಸ್‌‍ನ ಕಾರ್ಡಿಲ್ಲೆರಾ ಬ್ಲಾಂಕಾ ಶ್ರೇಣಿಯಲ್ಲಿ ಪತ್ತೆಯಾಗಿದೆ ಎಂದು ಪೆರುವಿಯನ್‌ ಪೊಲೀಸರು ಹೇಳಿದ್ದಾರೆ.ಸ್ಟಾಂಪ್‌ ಫ್ಲ್ ಅವರ ದೇಹ, ಹಾಗೆಯೇ ಅವರ ಬಟ್ಟೆ, ಸರಂಜಾಮು ಮತ್ತು ಬೂಟುಗಳನ್ನು ಉತ್ತಮ ರೀತಿಯಲ್ಲಿ ಪತ್ತೆಯಾಗಿರುವುದು ಅಚ್ಚರಿಗೆ ಕಾರಣವಾಗಿದೆ.

ಆತನ ಪಾಸ್‌‍ಪೋರ್ಟ್‌ ಆತನ ಅಸ್ತಿಯಲ್ಲಿ ಪತ್ತೆಯಾಗಿದ್ದು, ಮತದೇಹವನ್ನು ಗುರುತಿಸಲು ಪೊಲೀಸರಿಗೆ ಅವಕಾಶ ಕಲ್ಪಿಸಿದೆ.ಈಶಾನ್ಯ ಪೆರುವಿನ ಪರ್ವತಗಳು, ಹುವಾಸ್ಕರಾನ್‌ ಮತ್ತು ಕ್ಯಾಶನ್‌ನಂತಹ ಹಿಮಭರಿತ ಶಿಖರಗಳಿಗೆ ನೆಲೆಯಾಗಿದೆ, ಇದು ಪ್ರಪಂಚದಾದ್ಯಂತದ ಪರ್ವತಾರೋಹಿಗಳಿಗೆ ನೆಚ್ಚಿನ ತಾಣವಾಗಿದೆ.

RELATED ARTICLES

Latest News