Thursday, September 19, 2024
Homeರಾಷ್ಟ್ರೀಯ | Nationalಸ್ಪಷ್ಟ ಬಹುಮತದೊಂದಿಗೆ ಮತ್ತೆ ಅಧಿಕಾರಕ್ಕೆ ಬರುತ್ತೇವೆ, ನಮಗೆ ಯಾವ ಅನುಮಾನವೂ ಇಲ್ಲ : ಅಮಿತ್‌ ಷಾ

ಸ್ಪಷ್ಟ ಬಹುಮತದೊಂದಿಗೆ ಮತ್ತೆ ಅಧಿಕಾರಕ್ಕೆ ಬರುತ್ತೇವೆ, ನಮಗೆ ಯಾವ ಅನುಮಾನವೂ ಇಲ್ಲ : ಅಮಿತ್‌ ಷಾ

ನವದೆಹಲಿ,ಮೇ17- ನಮಗೆ ಆದರೆ.. ಹೋದರೆ… ಎಂಬ ಚಿಂತೆ ಇಲ್ಲ. ಏಕೆಂದರೆ ಈ ಪ್ರಶ್ನೆಯೇ ಉದ್ಭವಿಸದೆ ಬಿಜೆಪಿ ಲೋಕಸಭೆ ಚುನಾವಣೆಯಲ್ಲಿ ಸ್ಪಷ್ಟ ಬಹುಮತದೊಂದಿಗೆ ಅಧಿಕಾರಕ್ಕೆ ಬರಲಿದೆ ಎಂದು ಬಿಜೆಪಿ ಚುನಾವಣಾ ಚಾಣುಕ್ಯ ಅಮಿತ್‌ ಷಾ ಪುನರುಚ್ಚರಿಸಿದ್ದಾರೆ.

ಒಂದು ವೇಳೆ ಬಿಜೆಪಿಗೆ ಸರಳ ಬಹುಮತಕ್ಕೆ ಬೇಕಾದ 272ಕ್ಕಿಂತ ಕಡಿಮೆ ಸ್ಥಾನಗಳು ಬಂದರೆ ನಿಮ ಬಿ ಪ್ಲಾನ್‌ ಏನು ಎಂಬ ಪ್ರಶ್ನೆಗೆ ಉತ್ತರಿಸಿರುವ ಅವರು, ಅಂತಹ ಪ್ರಶ್ನೆಯೇ ಉದ್ಭವಿಸುವುದಿಲ್ಲ. ಏಕೆಂದರೆ ಬಿಜೆಪಿ ನನ್ನ ಪ್ರಕಾರ ಸ್ಪಷ್ಟ ಬಹುಮತ ಪಡೆದು ಅಧಿಕಾರಕ್ಕೆ ಬರಲಿದೆ. ನಮಗೆ ಬಿ ಪ್ಲಾನ್‌ಗಿಂತ ಎ ಪ್ಲಾನ್‌ನಲ್ಲೇ ಹೆಚ್ಚು ನಂಬಿಕೆ ಇದೆ ಎಂದು ಹೇಳಿದ್ದಾರೆ.

ಸುದ್ದಿ ಸಂಸ್ಥೆಗೆ ನೀಡಿರುವ ಸಂದರ್ಶನವೊಂದರಲ್ಲಿ ಮಾತನಾಡಿರುವ ಅಮಿತ್‌ ಷಾ, 60 ಕೋಟಿಯ ಫಲಾನುಭವಿಗಳ ಸುಭದ್ರವಾದ ಕೋಟೆ ಪ್ರಧಾನಿಗಳ ನರೇಂದ್ರಮೋದಿಯ ಅಧೀನದಲ್ಲಿದೆ. ಇವರೆಲ್ಲರೂ ಕೇಂದ್ರ ಸರ್ಕಾರ ಯೋಜನೆಗಳ ಫಲಾನುಭವಿಗಳಾಗಿದ್ದಾರೆ. ಇವರೆಲ್ಲರಿಗೂ ಪ್ರಧಾನಿ ನರೇಂದ್ರ ಮೋದಿ ಏನು ಮತ್ತು ಯಾಕೆ ಅವರಿಗೆ 400 ಸೀಟ್‌ಗಳನ್ನು ನೀಡಬೇಕು ಎಂಬುದರ ಬಗ್ಗೆ ಗೊತ್ತಿದೆ ಎಂದು ಹೇಳಿದರು.

ಕಾಶೀರದಲ್ಲಿ ಆರ್ಟಿಕಲ್‌ 370 ರದ್ದುಗೊಳಿಸಿದ ಬಳಿಕ ಕಾಶೀರದಲ್ಲಿ ಶೇ.40ರಷ್ಟು ಮತದಾನ ಆಗಿದೆ. ಇದಕ್ಕಿಂತ ಯಶಸ್ಸು ಮತ್ತೇನು ಬೇಕು ಎಂದು ಪ್ರಶ್ನಿಸಿದರು.ಎಲ್ಲಾ ಮೂಲಭೂತವಾದಿಗಳ ಗುಂಪು ಇದೀಗ ಪ್ರಜಾಪ್ರಭುತ್ವದ ಭಾಗಿಯಾಗಿದ್ದಾರೆ. ಇವರೆಲ್ಲರೂ ಬಂದು ಮತದಾನ ಮಾಡಿದ್ದಾರೆ. ಈ ಹಿಂದೆ ಕಾಶೀರದಲ್ಲಿ ಚುನಾವಣೆಗಳನ್ನು ಬಹಿಷ್ಕಾರ ಮಾಡಲಾಗುತ್ತಿತ್ತು. ಆದರೆ ಈಗ ಕಾಶೀರದಲ್ಲಿ ಶಾಂತಿಯುತವಾಗಿ ಮತದಾನ ನಡೆದಿದೆ ಎಂದರು.

ಇದೇ ವೇಳೆ ಇಂಡಿ ಮೈತ್ರಿಕೂಟದ ವಿರುದ್ಧ ವಾಗ್ದಾಳಿ ನಡೆಸಿದ ಶಾ, ಇದರಲ್ಲಿರುವ ಎಲ್ಲರೂ ವಂಶಾಡಳಿತ ರಾಜಕಾರಣದಿಂದ ಬಂದಿದ್ದಾರೆ. ಇವರು ಆರ್ಟಿಕಲ್‌ 370 ಮರುಸ್ಥಾಪನೆಯ ಬಗ್ಗೆ ಮಾತನಾಡುತ್ತಿದ್ದಾರೆ. ತ್ರಿಬಲ್‌ ತಲಾಖ್‌ ನಿಷೇಧ ಕಾನೂನು ರದ್ದು ಮಾಡುತ್ತಾರಂತೆ. ಈ ಒಕ್ಕೂಟದಲ್ಲಿರುವ ನಾಯಕರು ಸಿಎಎ ವಿರೋಧಿಸುತ್ತಾರೆ. ಇಂಡಿಯಾ ಮೈತ್ರಿಕೂಟ ಹಂಚಿಕೆಯ ಸಂಸ್ಕೃತಿಯನ್ನು ಹೊಂದಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಲೋಕಸಭಾ ಚುನಾವಣೆಯ ನಾಲ್ಕು ಹಂತ ಮುಕ್ತಾಯವಾಗಿವೆ. ಈ ಬಾರಿಯೂ ಎನ್‌ಡಿಎ ಮೈತ್ರಿಕೂಟವೇ ದೇಶದಲ್ಲಿ ಅಧಿಕಾರಕ್ಕೆ ಬರಲಿದೆ ಎಂದು ಬಿಜೆಪಿ ಹೇಳುತ್ತಿದೆ. ಇತ್ತ ಇಂಡಿ ಕೂಟ ಜೂನ್‌ 4ರಂದು ದೇಶದಲ್ಲಿ ಬಿಜೆಪಿ ಆಡಳಿತ ಅಂತ್ಯವಾಗಲಿದೆ ಎಂದು ಹೇಳುತ್ತಿದೆ.
ಸದ್ಯ ಬಾಕಿ ಉಳಿದಿರುವ ಮೂರು ಹಂತಗಳ ಚುನಾವಣೆ ಮೇಲೆ ಎಲ್ಲಾ ಪಕ್ಷಗಳು ಕೆಲಸ ಮಾಡುತ್ತಿವೆ.

ಚುನಾವಣಾ ರ್ಯಾಲಿಯೊಂದರಲ್ಲಿ ಮಾತನಾಡಿದ ಅಮಿತ್‌ ಶಾ, ಬಿಜೆಪಿ ಎಂದಿಗೂ ಪ್ರತಿಪಕ್ಷಗಳ ರೀತಿ ಮತಬ್ಯಾಂಕ್‌ ರಾಜಕಾರಣ ಮಾಡುವುದಿಲ್ಲ. ಅಯೋಧ್ಯೆಯಲ್ಲಿ ರಾಮಮಂದಿರದ ರೀತಿ ಸೀತಾಮಢಿಯಲ್ಲೂ ಸೀತಾ ಮಾತೆಯ ಮಂದಿರ ನಿರ್ಮಿಸಲಾಗುವುದು ಎಂದು ಅವರ ತಿಳಿಸಿದ್ದಾರೆ.

RELATED ARTICLES

Latest News