ಬೊಂಗಾವ್,ಮೇ.15- ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ಮಾ, ಮಾತಿ, ಮನುಷ್ ಭರವಸೆಯ ಮೇಲೆ ಅಧಿಕಾರಕ್ಕೆ ಬಂದು ಇದೀಗ ಮುಲ್ಲಾ, ಮದರಸಾ ಮತ್ತು ಮಾಫಿಯಾ ಗಳನ್ನು ಪೋಷಿಸುತ್ತಿದ್ದಾರೆ ಎಂದು ಕೇಂದ್ರ ಗೃಹಸಚಿವ ಅಮಿತ್ ಶಾ ವಾಗ್ದಾಳಿ ನಡೆಸಿದ್ದಾರೆ.
ಬೊಂಗಾವ್‌ನಲ್ಲಿ ರ್ಯಾಲಿಯನ್ನುದ್ದೇಶಿಸಿ ಮಾತನಾಡಿದ ಕೇಂದ್ರ ಗಹ ಸಚಿವರು, ಟಿಎಂಸಿ ಸರ್ಕಾರವು ಇಮಾಮ್‌ಗಳಿಗೆ ಮಾಸಿಕ ಗೌರವಧನವನ್ನು ನೀಡಿದೆ ಆದರೆ ಅರ್ಚಕರು ಮತ್ತು ದೇವಾಲಯಗಳ ಪಾಲಕರಿಗೆ ಒಂದು ಪೈಸೆಯನ್ನೂ ನೀಡಿಲ್ಲ ಎಂದು ಹೇಳಿದರು.
ಮಾ, ಮತಿ, ಮಾನುಷ್ ಘೋಷಣೆಯ ಮೇಲೆ ಟಿಎಂಸಿ ಅಧಿಕಾರಕ್ಕೆ ಬಂದಿತು. ಆದರೆ, ಅವರ ಗಮನ ಈಗ ಮುಲ್ಲಾ, ಮದರಸ, ಮಾಫಿಯಾದತ್ತ ನೆಟ್ಟಿದೆ. ಇಲ್ಲಿನ ಇಮಾಮ್‌ಗಳಿಗೆ ಗೌರವಧನ ನೀಡಲಾಗುತ್ತದೆ ಆದರೆ ದೇವಾಲಯದ ಅರ್ಚಕರು ಮತ್ತು ಸೇವಕರುಗಳಿಗೆ ಏನೂ ಸಿಗುವುದಿಲ್ಲ. ತಾಜಿಯಾಸ್ (ಮುಹರಂನಲ್ಲಿ ಮುಸ್ಲಿಂ ಶೋಕಾಚರಣೆಯ ಮೆರವಣಿಗೆ) ಗೆ ಯಾವುದೇ ಅಡೆತಡೆಗಳಿಲ್ಲದಿದ್ದರೂ, ದುರ್ಗಾ ಪೂಜೆ ಮತ್ತು ಕಾಳಿ ಪೂಜೆಯಂದು ನಿಮಜ್ಜನ ಮೆರವಣಿಗೆಗಳನ್ನು ಕೈಗೊಳ್ಳಲು ನಿಯಮಿತವಾದ ರಸ್ತೆ ತಡೆಗಳಿವೆ ಶಾ ಹೇಳಿದರು.
ಅಯೋಧ್ಯೆಯಲ್ಲಿ ರಾಮ್ ಲಲ್ಲಾ ಅವರ ಪ್ರಾಣ ಪ್ರತಿಷ್ಠಾಕ್ಕೆ ಆಹ್ವಾನವನ್ನು ತಿರಸ್ಕರಿಸಿದ್ದಕ್ಕಾಗಿ ಮಮತಾ ಬ್ಯಾನರ್ಜಿಯನ್ನು ಕಟುವಾಗಿ ಟೀಕಿಸಿದರು ಮತ್ತು ಔಪಚಾರಿಕ ಆಹ್ವಾನವನ್ನು ಸ್ವೀಕರಿಸಿದರೂ, ಅವರು ಒಂದು ನಿರ್ದಿಷ್ಟ ಮತ ಬ್ಯಾಂಕ್ ಅನ್ನು ಸಮಾಧಾನಪಡಿಸಲು (ರಾಮ ಮಂದಿರದಲ್ಲಿ) ಉದ್ಘಾಟನಾ ಸಮಾರಂಭಕ್ಕೆ ಹಾಜರಾಗಲಿಲ್ಲ. ನೀವು (ಜನರು) ಆಕೆಯ ವೋಟ್ ಬ್ಯಾಂಕ್ ಅಲ್ಲ ಎನ್ನುವುದನ್ನು ಮರೆಯಬಾರದು ಎಂದು ಕರೆ ನೀಡಿದರು.
ಪೌರತ್ವ ತಿದ್ದುಪಡಿ ಕಾಯ್ದೆ (ಸಿಎಎ) ಕುರಿತು ಮುಖ್ಯಮಂತ್ರಿ ಸುಳ್ಳು ಸುದ್ದಿಗಳನ್ನು ಹರಡುತ್ತಿದ್ದಾರೆ ಎಂದು ಆರೋಪಿಸಿರುವ ಅವರು, ಪಾಕಿಸ್ತಾನ, ಬಾಂಗ್ಲಾದೇಶ ಮತ್ತು ಅಫ್ಘಾನಿಸ್ತಾನದಿಂದ ವಲಸೆ ಬಂದ ಅಲ್ಪಸಂಖ್ಯಾತ ವಸಾಹತುಗಾರರಿಗೆ ಆಶ್ರಯ ಮತ್ತು ಖಾಯಂ ನಿವಾಸವನ್ನು ನೀಡುವ ಕೇಂದ್ರೀಯ ಶಾಸನದ ಕುರಿತು ಅವರು ಜನರನ್ನು ದಾರಿತಪ್ಪಿಸುತ್ತಿದ್ದಾರೆ ಎಂದು ಹೇಳಿದರು.
ಸಿಎಎ ಜನರಿಗೆ ತೊಂದರೆ ಉಂಟುಮಾಡಬಹುದು ಎಂದು ಮಮತಾ ಬ್ಯಾನರ್ಜಿ ಜನರನ್ನು ದಾರಿ ತಪ್ಪಿಸುತ್ತಿದ್ದಾರೆ. ಶಾಸನವು ಯಾರಿಗೂ ಯಾವುದೇ ಹಾನಿಯನ್ನುಂಟುಮಾಡುವ ಗುರಿಯನ್ನು ಹೊಂದಿಲ್ಲ ಎಂದು ನಾನು ನಿಮಗೆ ಭರವಸೆ ನೀಡಲು ಬಯಸುತ್ತೇನೆ. ಎಲ್ಲಾ ಪ್ರಾಮಾಣಿಕ ನಾಗರಿಕರು ಇಲ್ಲಿ ಗೌರವಯುತವಾಗಿ ತಮ ಜೀವನವನ್ನು ನಡೆಸಬಹುದು ಎಂದು ಅವರು ಹೇಳಿದರು.
ಪೌರತ್ವ ನೀಡುವ ಹಕ್ಕನ್ನು ಕೇಂದ್ರ ಸರ್ಕಾರವೇ ಹೊರತು ರಾಜ್ಯ ಸರ್ಕಾರಗಳಲ್ಲ ಎಂದು ಮಮತಾ ಬ್ಯಾನರ್ಜಿ ಅವರಿಗೆ ನೆನಪಿಸಲು ಬಯಸುತ್ತೇನೆ ಎಂದು ಅವರು ಹೇಳಿದರು.
ಬಂಗಾಳದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದರೆ ಬೊಂಗಾವ್ ಮತ್ತು ಉತ್ತರ 24 ಪರಗಣಗಳಲ್ಲಿ ವಾಸಿಸುವ ಮಾತುವಾ ಸಮುದಾಯವು ಸಿಎಎ ಅಡಿಯಲ್ಲಿ ಹಕ್ಕುಗಳನ್ನು ಪಡೆಯಲು ಸಾಧ್ಯವಾಗುತ್ತದೆ ಎಂದು ಅವರು ಇದೇ ಸಂದರ್ಭದಲ್ಲಿ ಭರವಸೆ ನೀಡಿದರು.