ಬೆಂಗಳೂರು,ಜ.29– ಬಿಎಂಟಿಸಿ ಬಸ್ ಹತ್ತಲು ಮುಂದಾಗುತ್ತಿದ್ದಂತೆ ನಿಯಂತ್ರಣ ತಪ್ಪಿ ಕೆಳಗೆ ಬಿದ್ದ ಯುವತಿ ಮೇಲೆ ಬಸ್ ಹರಿದ ಪರಿಣಾಮ ಮೃತಪಟ್ಟಿರುವ ಘಟನೆ ಬನಶಂಕರಿ ಸಂಚಾರಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಇಂದು ಬೆಳಗ್ಗೆ ನಡೆದಿದೆ.
ಮೂಲತ ಆಂದ್ರಪ್ರದೇಶದ ಅನಂತಪುರ ನಿವಾಸಿ ಮೋನಿಕಾ(20) ಮೃತಪಟ್ಟ ಯುವತಿ. ನಗರದ ಕತ್ರಿಗುಪ್ಪೆಯಲ್ಲಿ ಮೋನಿಕಾ ವಾಸವಾಗಿದ್ದುಕೊಂಡು ಬೊಮನಹಳ್ಳಿಯ ಖಾಸಗಿ ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಿದ್ದರು.
ಇಂದು ಬೆಳಗ್ಗೆ 8ಗಂಟೆ ಸುಮಾರಿನಲ್ಲಿ ದೇವೇಗೌಡ ಪೆಟ್ರೋಲ್ಬಂಕ್, ಚಿನ್ನಮ ಜಂಕ್ಷನ್ ಸಮೀಪ ಮೋನಿಕಾ ಅವರು ಬಿಎಂಟಿಸಿ ಬಸ್ ಹತ್ತಲು ಹೋದಾಗ ನಿಯಂತ್ರಣ ತಪ್ಪಿ ಕೆಳಗೆ ಬಿದ್ದಿದ್ದಾರೆ. ಆವೇಳೆ ಮೋನಿಕಾ ಮೇಲೆ ಬಸ್ ಹರಿದ ಪರಿಣಾಮ ಸ್ಥಳದಲ್ಲಿ ಮೃತಪಟ್ಟಿದ್ದಾಳೆ.
ಸುದ್ದಿ ತಿಳಿದು ಬನಶಂಕರಿ ಸಂಚಾರಿ ಠಾಣೆ ಪೊಲೀಸರು ಸ್ಥಳಕ್ಕೆ ಆಗಮಿಸಿ ಪರಿಶೀಲಿಸಿ ಮೃತದೇಹವನ್ನು ಕೆಂಪೇಗೌಡ ಆಸ್ಪತ್ರೆಗೆ ರವಾನಿಸಿ ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ.