Saturday, July 27, 2024
Homeರಾಜ್ಯದೂರು ಕೊಟ್ಟಾಗಲೇ ರಕ್ಷಣೆ ಕೊಟ್ಟಿದ್ದರೆ ನಮ್ಮಕ್ಕ ಕೊಲೆ ಆಗ್ತಿರ್ಲಿಲ್ಲ : ಅಂಜಲಿ ಸಹೋದರಿ ಆಕ್ರೋಶ

ದೂರು ಕೊಟ್ಟಾಗಲೇ ರಕ್ಷಣೆ ಕೊಟ್ಟಿದ್ದರೆ ನಮ್ಮಕ್ಕ ಕೊಲೆ ಆಗ್ತಿರ್ಲಿಲ್ಲ : ಅಂಜಲಿ ಸಹೋದರಿ ಆಕ್ರೋಶ

ಹುಬ್ಬಳ್ಳಿ,ಮೇ 16- ಪೊಲೀಸ್‌‍ನವರು ಹಣ ಕೊಟ್ಟವರನ್ನು ನೋಡುತ್ತಾರೆ, ಹತ್ತು, ಇಪ್ಪತ್ತು ಸಾವಿರ ಕೊಟ್ಟರೆ ಬಿಟ್ಟು ಬಿಡುತ್ತಾರೆ, ಹೆಣ್ಣಿಗೆ ನ್ಯಾಯ ಎಲ್ಲಿದೆ? ಎಂದು ಹುಬ್ಬಳ್ಳಿಯಲ್ಲಿ ಕೊಲೆಯಾದ ಅಂಜಲಿ ಅವರ ಸಹೋದರಿ ಯಶೋಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನನಮ್ಮ ಅಕ್ಕನ ಸಾವಿಗೆ ನ್ಯಾಯ ಸಿಗಬೇಕು, ಕೊಲೆ ಆರೋಪಿಯನ್ನು ಬಂಧಿಸಿ ಹುಬ್ಬಳ್ಳಿಯ ಚನ್ನಮ್ಮನ ವೃತ್ತದಲ್ಲಿಯೇ ಹೊಡೆದು ಹಾಕಬೇಕು. ಪೊಲೀಸರಿಗೆ ಸಾಧ್ಯವಾಗದೇ ಇದ್ದರೆ ನಮ ಕೈಗೆ ಕೊಡಿ. ನಾವೇ ಕ್ರಮ ತೆಗೆದುಕೊಳ್ಳುತ್ತೇವೆ. ಅನಂತರ ಕೇಸು ಹಾಕಿ ನಮ್ಮನ್ನೂ ಜೈಲಿಗೆ ಕಳುಹಿಸಿ, ಜೀವನ ಹಾಳಾದರೂ ಚಿಂತೆಯಿಲ್ಲ ಎಂದು ಕಿಡಿಕಾರಿದ್ದಾರೆ.

ನಮ್ಮ ಅಕ್ಕನಿಗೆ ತೊಂದರೆಯಾಗುತ್ತಿದೆ ಎಂದು ದೂರು ಕೊಟ್ಟಾಗ ಅದನ್ನು ಮೂಢನಂಬಿಕೆ ಎಂದು ತಳ್ಳಿ ಹಾಕಿದ್ದರು. ಈಗ ನಮ ಅಕ್ಕನ ಕೊಲೆಯಾಗಿದೆ. ಈಗ ಯಾರ್ಯಾರೋ ಬರುತ್ತಿದ್ದಾರೆ, ಒಂದು ಲಕ್ಷ, ಎರಡು ಲಕ್ಷ ಹಣ ಕೊಡುತ್ತಿದ್ದಾರೆ, ನಮ್ಮಕ್ಕ ಬಂಗಾರ. ಆಕೆಯನ್ನೇ ಕಳೆದುಕೊಂಡಿದ್ದೇವೆ, ಇವರ ಹಣ ತೆಗೆದುಕೊಂಡು ನಾವು ಏನು ಮಾಡೋಣ? ನಾವು ದುಡಿದು ತಿನ್ನುತ್ತೇವೆ. ನಿಮ ಹಣ ಬೇಡ. ನಮ್ಮಕ್ಕನ ಸಾವಿಗೆ ನ್ಯಾಯ ಕೊಡಿ ಎಂದು ಮನವಿ ಮಾಡಿದರು.

ಒಂದು ವೇಳೆ ನಮಕ್ಕನ ಸಾವಿಗೆ ನ್ಯಾಯ ದೊರೆಯದೇ ಇದ್ದರೆ ನಮ್ಮ ಮನೆಯ ನಾಲ್ಕೂ ಮಂದಿ ವಿಷ ಸೇವಿಸಿ ಆತಹತ್ಯೆ ಮಾಡಿಕೊಳ್ಳುತ್ತೇವೆ. ಆಗಲಾದರೂ ಪ್ರಕರಣವನ್ನು ಗಂಭೀರವಾಗಿ ತೆಗೆದುಕೊಳ್ಳುತ್ತಾರಾ? ನೋಡಬೇಕು ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಈಗ ಮನೆಯಲ್ಲಿ ಕೊಲೆಯಾಗಿದೆ. ನಾಳೆ ರಸ್ತೆಯಲ್ಲಿ, ಹಾದಿಬೀದಿಯಲ್ಲಿ ಕೊಲೆಯಾಗುತ್ತದೆ. ಅಲ್ಲಿಯವರೆಗೂ ಕಾದು ನೋಡುತ್ತಿರುತ್ತಾರೆಯೇ? ಈಗಾಗಲೇ ಅಂಜಲಿ ಮತ್ತು ನೇಹಾ ಎಂಬ ಇಬ್ಬರು ಸಹೋದರಿಯರನ್ನು ಕಳೆದುಕೊಂಡಿದ್ದೇವೆ. ಕೊಲೆ ಮಾಡಿದವರಿಗೆ ಅದೇ ರೀತಿಯ ಶಿಕ್ಷೆ ಕೊಡಬೇಕು ಎಂದು ಒತ್ತಾಯಿಸಿದರು.

ನಮ್ಮಕ್ಕನ ರಕ್ಷಣೆಗಾಗಿ ದೂರು ಕೊಟ್ಟಾಗಲೇ ಕ್ರಮ ಕೈಗೊಂಡಿದ್ದರೆ ಕೊಲೆಯಾಗುತ್ತಿರಲಿಲ್ಲ. ಮೂಢನಂಬಿಕೆಯೆಂದು ದೂರನ್ನು ತಳ್ಳಿ ಹಾಕಿದವರ ಮನೆಯಲ್ಲಿ ಹೆಣ್ಣು ಮಕ್ಕಳಿಲ್ಲವೇ? ಈಗ ನಮ ಅಕ್ಕನನ್ನು ಇವರು ವಾಪಸ್‌‍ ತಂದುಕೊಡುತ್ತಾರೆಯೇ? ಎಂದು ಯಶೋಧ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.ಅಂಜಲಿ ಕೊಲೆಯನ್ನು ಸಹೋದರಿ ಖುದ್ದು ತನ್ನ ಕಣ್ಣಾರೆ ನೋಡಿದ್ದಾಗಿ ಹೇಳುತ್ತಿದ್ದಾರೆ.

RELATED ARTICLES

Latest News