Friday, January 17, 2025
Homeರಾಷ್ಟ್ರೀಯ | Nationalಕೊಟ್ಟ ಮಾತಿನಂತೆ ಛಡಿಯೇಟು ಬಾರಿಸಿಕೊಂಡ ಅಣ್ಣಾಮಲೈ

ಕೊಟ್ಟ ಮಾತಿನಂತೆ ಛಡಿಯೇಟು ಬಾರಿಸಿಕೊಂಡ ಅಣ್ಣಾಮಲೈ

Anna University Rape Case: BJP’s Annamalai to whip himself 6 times

ಚೆನ್ನೈ,ಡಿ.27- ಕೊಟ್ಟ ಮಾತಿನಂತೆ ಇಂದು ತಮಿಳುನಾಡು ಬಿಜೆಪಿ ಘಟಕದ ಅಧ್ಯಕ್ಷ ಕೆ. ಅಣ್ಣಾಮಲೈ ಅವರು ಇಂದು ತಮ್ಮ ನಿವಾಸದ ಎದುರು ಛಡಿಏಟು ಬಾರಿಸಿಕೊಂಡಿದ್ದಾರೆ. ಹಸಿರು ಮುಂಡು ಧರಿಸಿ, ಶರ್ಟ್‌ ರಹಿತ ಅಣ್ಣಾಮಲೈ ಮಾಧ್ಯಮ ಪ್ರತಿನಿಧಿಗಳು ಮತ್ತು ಭಾರತೀಯ ಜನತಾ ಪಕ್ಷದ ಸದಸ್ಯರ ಸಮುಖದಲ್ಲಿ ಉದ್ದವಾದ, ಬಿಳಿ ಚಾವಟಿಯಿಂದ ಮಗೆ ತಾವೇ ಹೊಡೆದುಕೊಂಡಿದ್ದಾರೆ.

ಈ ಸಂದರ್ಭದಲ್ಲಿ ಕೆಲ ಬಿಜೆಪಿ ಕಾರ್ಯಕರ್ತರು ನಿಮಗೆ ನಾಚಿಕೆ ಇಲ್ಲವೇ ಸ್ಟಾಲಿನ್‌? , ಆರೋಪಿ ಜ್ಞಾನಶೇಖರನ್‌ ಅವರನ್ನು ಗಲ್ಲಿಗೇರಿಸಿ ಮತ್ತು ಶೇಮ್‌ ಆನ್‌ ಯೂ ಎಂಬ ಘೋಷಣೆಗಳ ಫಲಕಗಳನ್ನು ಬಿಜೆಪಿ ಬೆಂಬಲಿಗರು ಹಿಡಿದುಕೊಂಡಿದ್ದರು.ಅಣ್ಣಾಮಲೈ ಅವರನ್ನು ತಡೆಯಲು ಬೆಂಬಲಿಗರು ಧಾವಿಸುವ ಮುನ್ನವೇ ಅವರು ಸುಮಾರು ಎಂಟು ಬಾರಿ ಚಾಟಿ ಯಲ್ಲಿ ಹೊಡೆದುಕೊಂಡಿದ್ದರು.

ಸ್ವಯಂ ಚಾಟಿ ಬೀಸಿದ ಬಳಿಕ ಅವರು ಮಾಧ್ಯಮದವರನ್ನು ಉದ್ದೇಶಿಸಿ ಮಾತನಾಡಿದರು. ತಮಿಳು ಸಂಸ್ಕೃತಿಯನ್ನು ಅರ್ಥಮಾಡಿಕೊಳ್ಳುವ ಯಾರಿಗಾದರೂ ಈ ಆಚರಣೆಯ ಮಾರ್ಗಗಳು ಎಂದು ತಿಳಿಯುತ್ತದೆ ಎಂದು ಅವರು ಹೇಳಿದರು.

ನಮನ್ನು ನಾವೇ ಹೊಡೆದುಕೊಳ್ಳುವುದು, ನಮನ್ನು ನಾವೇ ಶಿಕ್ಷಿಸಿಕೊಳ್ಳುವುದು, ಅತ್ಯಂತ ಕಠಿಣವಾದ ಆಚರಣೆಗಳ ಮೂಲಕ ನಮನ್ನು ನಾವು ಹಾಕಿಕೊಳ್ಳುವುದು ಇತ್ಯಾದಿಗಳು ಈ ಸಂಸ್ಕೃತಿಯ ಭಾಗವಾಗಿದೆ. ಇದು ಯಾವುದೇ ವ್ಯಕ್ತಿಯ ವಿರುದ್ಧ ಅಲ್ಲ ಅಥವಾ ಯಾವುದರ ವಿರುದ್ಧವೂ ಅಲ್ಲ. ಇದು ರಾಜ್ಯದಲ್ಲಿ ಆಗುತ್ತಿರುವ ನಿರಂತರ ಅನ್ಯಾಯದ ವಿರುದ್ಧ. ಅಣ್ಣಾ ವಿಶ್ವವಿದ್ಯಾನಿಲಯದಲ್ಲಿ ನಡೆದಿರುವುದು ಒಂದು ಟಿಪ್ಪಿಂಗ್‌ ಪಾಯಿಂಟ್‌ ಮಾತ್ರ ಎಂದು ಅವರು ಹೇಳಿದ್ದಾರೆ.

ನನ್ನ ಅನೇಕ ಪೂರ್ವಜರು ಈ ಮಾರ್ಗದಲ್ಲಿ ನಡೆದರು ಮತ್ತು ನಾನು ಕೂಡ ಅದನ್ನು ಆರಿಸಿಕೊಂಡಿದ್ದೇನೆ. ಇದು ಉನ್ನತ ಶಕ್ತಿಗೆ ಶರಣಾಗುವ, ದೇವರಿಗೆ ಶರಣಾಗುವ ಪ್ರಕ್ರಿಯೆಯಾಗಿದೆ ಎಂದು ಬಿಜೆಪಿ ರಾಜ್ಯ ಮುಖ್ಯಸ್ಥರು ಸೇರಿಸಿದರು.ತಮಿಳುನಾಡಿನಲ್ಲಿರುವ ಡಿಎಂಕೆ ಸರ್ಕಾರದಿಂದ ಜನರಿಗೆ ಅನ್ಯಾಯ ಆಗುತ್ತಿದೆ ಎಂದು ಆರೋಪಿಸಿರುವ ಅವರು ಈ ಸರ್ಕಾರ ಹೋಗುವವರೆಗೆ ತಾವು ಕಾಲಿಗೆ ಚಪ್ಪಲಿ ತೊಡುವುದಿಲ್ಲ ಎಂದು ಅವರು ನಿನ್ನೆ ಘೋಷಿಸಿದ್ದರು.

RELATED ARTICLES

Latest News