Saturday, February 24, 2024
Homeರಾಜ್ಯಉಮಾಶ್ರೀ ನಟನೆಯ ಬಗ್ಗೆ ಪರಿಷತ್‌ನಲ್ಲಿ ಮೆಚ್ಚುಗೆ

ಉಮಾಶ್ರೀ ನಟನೆಯ ಬಗ್ಗೆ ಪರಿಷತ್‌ನಲ್ಲಿ ಮೆಚ್ಚುಗೆ

ಬೆಂಗಳೂರು,ಡಿ.15- ಮೇಲ್ಮನೆ ಸದಸ್ಯರೂ ಆದ ಕನ್ನಡ ಚಿತ್ರರಂಗದ ಖ್ಯಾತ ನಟಿ ಉಮಾಶ್ರೀ ಅವರ ನಟನೆಯನ್ನು ವಿಧಾನಪರಿಷತ್ನಲ್ಲಿ ಸದಸ್ಯರು ಪ್ರಶಂಸಿಸಿದರು. ಶಾಸನ ರಚನಾ ಕಲಾಪದಲ್ಲಿ ವಿಧೇಯಕದ ಮೇಲೆ ಚರ್ಚೆ ನಡೆಯುವಾಗ ಪರಿಷತ್ ಸದಸ್ಯ ವಿಶ್ವನಾಥ್ ಅವರು ಉಮಾಶ್ರೀ ಅವರ ಹೆಸರು ಹೇಳುವಾಗ ಬಾಯ್ತಪ್ಪಿ ಮಾಲಾಶ್ರೀ ಎಂದು ಹೇಳಿದ್ದು ಸ್ವಾರಸ್ಯಕರ ಚರ್ಚೆಗೆ ಎಡೆ ಮಾಡಿಕೊಟ್ಟಿತು.

ಆಗ ಸಭಾಪತಿ ಬಸವರಾಜ ಹೊರಟ್ಟಿಯವರು ಮಾಲಾಶ್ರೀಯವರ ನೆನಪು ಈಗೇಕೆ ನಿಮಗೆ ಬಂತು ಎಂದು ಹಾಸ್ಯ ಮಾಡಿದರು. ಈ ವೇಳೆ ಮಧ್ಯಪ್ರವೇಶಿಸಿದ ತೇಜಸ್ವಿನಿಗೌಡ ಅವರು ಮಾತನಾಡಿ, ಭಾರತದಲ್ಲಿ ಹೇಮಮಾಲಿನಿ ಹೇಗೆ ಕನಸಿನ ಕನ್ಯೆ ಎಂದು ಹೆಸರು ಪಡೆದಿದ್ದರೋ, ಕನ್ನಡ ಚಿತ್ರರಂಗದಲ್ಲಿ ಮಾಲಾಶ್ರೀ ನಟನೆಯಿಂದ ಹೆಸರು ಮಾಡಿದ್ದಾರೆ.

ನಾಯಕಿಯಾಗಲು ಸೌಂದರ್ಯದ ಮಾನದಂಡದ ಬದಲು ನಟನೆಯ ಮಾನದಂಡದ ಮೇಲೆ ಆಯ್ಕೆ ಮಾಡುವ ಹಾಗಿದ್ದರೆ ಉಮಾಶ್ರೀಯವರು ನಾಯಕಿಯಾಗಿ ಹಲವು ಚಿತ್ರಗಳಲ್ಲಿ ನಟಿಸಬಹುದಿತ್ತು ಎಂದರು. ಆಗ ಎದ್ದು ನಿಂತ ಉಮಾಶ್ರೀಯವರು ಮಾತನಾಡಿ, ನನ್ನ ನಟನೆಯ ಬಗ್ಗೆ ಮಾತನಾಡಿದ್ದಕ್ಕೆ ಧನ್ಯವಾದ. ನಾನು ರಂಗಭೂಮಿಯಿಂದ ಬಂದವಳು, ರಂಗಭೂಮಿಯಲ್ಲಿ ನಾಯಕಿ, ಪೊಷಕನಟಿ, ಹಾಸ್ಯನಟಿ ಎಂಬ ವರ್ಗಗಳಲ್ಲಿಲ್ಲ. ಆದರೆ ಸಿನಿಮಾದಲ್ಲಿದೆ.

ಡಿಕೆಶಿ ಸಿಬಿಐ ತನಿಖೆ ವಾಪಸ್ : ಉಭಯ ಸದನಗಳಲ್ಲಿ ಗದ್ದಲ, ವಾಕ್ಸಮರ

ನಿರ್ದೇಶಕರಾದ ಗಿರೀಶ್ ಕಾಸರವಳ್ಳಿಯವರು ನನಗೆ ಗುಲಾಬಿ ಚಿತ್ರದಲ್ಲಿ ನಾಯಕಿ ನಟಿಯ ಅವಕಾಶ ನೀಡಿದರು. ಅದರಿಂದ ರಾಜ್ಯ, ರಾಷ್ಟ್ರೀಯ, ಅಂತಾರಾಷ್ಟ್ರೀಯ ಪ್ರಶಸ್ತಿ ನನಗೆ ಬಂತು. ಈ ನಾಡಿನ ಜನತೆ ಕಲಾವಿದೆಯಾದ ನನಗೆ ಸಾಕಷ್ಟು ಬೆಂಬಲ ನೀಡಿದ್ದಾರೆ ಎಂದು ಧನ್ಯವಾದ ತಿಳಿಸಿದರು.

ಈ ವೇಳೆ ಕಾನೂನು ಸಚಿವ ಎಚ್.ಕೆ.ಪಾಟೀಲ್ ಮಾತನಾಡಿ, ಉಮಾಶ್ರೀಯವರ ಒಡಲಾಳ ನಾಟಕ ನೋಡಿದರೆ ಎಂತಹ ಅದ್ಬುತ ಕಲಾವಿದೆ ಎಂದು ಗೊತ್ತಾಗಲಿದೆ. ಈ ಒಡಲಾಳ ನಾಟಕವನ್ನು ಸೋನಿಯಾ ಗಾಂಯವರಿಗೆ ತೋರಿಸಿದ್ದೇವೆ.ಆ ನಂತರ ಉಮಾಶ್ರೀಯವರನ್ನು ಭೇಟಿ ಮಾಡಿಸಿದಾಗ ಆ ನಾಟಕದಲ್ಲಿ ಪಾತ್ರ ಮಾಡಿರುವವರು ಇವರೇನಾ ಎಂದು ಮೂರು ಬಾರಿ ಕೇಳಿದರು ಎಂದು ಹೇಳಿದರು. ಬಳಿಕ ಈ ವಿಚಾರದ ಚರ್ಚೆಗೆ ತೆರೆ ಬಿದ್ದಿತು.

RELATED ARTICLES

Latest News