Tuesday, December 3, 2024
Homeರಾಜ್ಯಶ್ರೀ ರಾಘವೇಂದ್ರ ಸ್ವಾಮಿಗಳ ಪೂರ್ವಾರಾಧನೆ ವೈಭವ

ಶ್ರೀ ರಾಘವೇಂದ್ರ ಸ್ವಾಮಿಗಳ ಪೂರ್ವಾರಾಧನೆ ವೈಭವ

ಬೆಂಗಳೂರು,ಆ.20- ಶ್ರೀ ರಾಘವೇಂದ್ರ ಸ್ವಾಮಿಗಳ ಪೂರ್ವಾರಾಧನೆ ಪ್ರಯುಕ್ತ ಬೆಂಗಳೂರಿನ ಜಯನಗರದ ಐದನೇ ಬಡಾವಣೆಯ ಶ್ರೀ ರಾಘವೇಂದ್ರ ಸ್ವಾಮಿಗಳ ಮಠದಲ್ಲಿ ಬೆಳಗಿನ ಜಾವ ಸುಪ್ರಭಾತ ನಾದಸ್ವರ ವಾದ್ಯದೊಂದಿಗೆ ಪ್ರಾರಂಭವಾಯಿತು.
ಶ್ರೀ ರಾಘವೇಂದ್ರ ಸ್ವಾಮಿಗಳ ಬೃಂದಾವನಕ್ಕೆ ಅರ್ಚಕರಿಂದ ವಿಶೇಷವಾಗಿ ಹಾಲು (ಮೊಸರು) ಮಜ್ಜಿಗೆ, ತುಪ್ಪ, ಜೇನುತುಪ್ಪ, ಸಕ್ಕರೆ ಎಳೆನೀರು, ಇತ್ಯಾದಿ ನಾನಾ ಬಗೆಯ ಫಲಗಳಿಂದ ಫಲ ಪಂಚಾಮೃತ ಅಭಿಷೇಕವನ್ನು ಶ್ರೀ ರಾಘವೇಂದ್ರ ಸ್ವಾಮಿಗಳ ಅಷ್ಟೋತ್ತರ ಪಾರಾಯಣದೊಂದಿಗೆ ನೆರವೇರಿಸಲಾಯಿತು.

ನಂತರ ಶ್ರೀ ಮಠದ ವತಿಯಿಂದ ಆರ್.ಕೆ. ವಾದಿಂದ್ರಾಚಾರ್ಯರು, ಜಿ.ಕೆ. ಆಚಾರ್ಯರು ಮತ್ತು ಶ್ರೀ ನಂದಕಿಶೋರಾಚಾರ್ಯರು ಲೋಕ-ಕಲ್ಯಾಣಕ್ಕಾಗಿ ಗುರು ರಾಯರಲ್ಲಿ ಪ್ರಾರ್ಥನೆಯನ್ನು ಸಲ್ಲಿಸಿ ಸ್ವರ್ಣ ಸಿಂಹಾಸನದಲ್ಲಿ ಶ್ರೀ ರಾಯರಿಗೆ ಪಾದಪೂಜೆ ನೆರವೇರಿಸಿದರು.
ಭಕ್ತರು ಕೂಡ ಸಾಮೂಹಿಕವಾಗಿ ಶ್ರೀ ಗುರು ರಾಘವೇಂದ್ರ ಸ್ವಾಮಿಗಳ ಪಾದಕ್ಕೆ ಪಾದಪೂಜೆ ಫಲ ಸಮರ್ಪಣೆ ಸಮರ್ಪಿಸಿದರು, ಈ ಸಂದರ್ಭದಲ್ಲಿ ಶ್ರೀ ರಾಘವೇಂದ್ರ ಸ್ವಾಮಿಗಳ ಬೃಂದಾವನಕ್ಕೆ ಸುಗಂಧ ದ್ರವ್ಯ ನಾನಾ ವಿಧವಾದ ಪುಷ್ಪಗಳಿಂದ ಅಲಂಕರಿಸಲಾಯಿತು.

ಶ್ರೀ ಮಠಕ್ಕೆ ಆಗಮಿಸುವ ಸಹಸ್ರಾರು ಭಕ್ತರಿಗೆ ಅನ್ನಸಂತರ್ಪಣೆಯು ನೆರವೇರಿತು. ಗುರು ರಾಯರ ದರ್ಶನಕ್ಕೆ ಆಗಮಿಸುವ ಭಕ್ತರಿಗಾಗಿ ಅಚ್ಚುಕಟ್ಟಾದ ಕ್ಯೂ ವ್ಯವಸ್ಥೆ, ಪ್ರಸಾದಕ್ಕೂ ಕ್ಯೂ ವ್ಯವಸ್ಥೆ, ಹಿರಿಯ ನಾಗರಿಕ ವಯೋವೃದ್ಧರಿಗೂ ಪ್ರತ್ಯೇಕ ಕ್ಯೂ ವ್ಯವಸ್ಥೆಯನ್ನು ಮಾಡಲಾಗಿತ್ತು.

ಈ ದಿನ ಸಂಜೆ ಪ್ರವಚನ ವಿಶೇಷವಾಗಿ ರಜತ – ಸ್ವರ್ಣ -ಲೇಪಿತ ಗಜವಾಹನ ಉತ್ಸವದೊಂದಿಗೆ ಸಂಜೆ 7 ಕ್ಕೆ ದಾಸ-ಲಹರಿ ವಿದ್ವಾನ್- ಪ್ರಾದೇಶಾಚಾರ್ಯ ವೃಂದದಿಂದ ಗಾಯನ ಕಾರ್ಯಕ್ರಮವು ಜರುಗಲಿದೆ. ಈ ಎ¯್ಲÁ ಕಾರ್ಯಕ್ರಮಗಳು ರಾಯರ ಅನುಗ್ರಹ ಮತ್ತು ಭಕ್ತರ, ಸ್ವಯಂ ಸೇವಕರ ಸಿಬ್ಬಂದಿಗಳ, ಸಹಕಾರ ಹಾಗೂ ಮಂತ್ರಾಲಯ ಶ್ರೀಗಳ ಆಶೀರ್ವಾದದಿಂದ, ಆರ್.ಕೆ.ವಾದಿಂದ್ರಾಚಾರ್ಯರ ನೇತೃತ್ವದಲ್ಲಿ ನೆರವೇರುತ್ತಿದೆ.

RELATED ARTICLES

Latest News