ಸಾಂಗ್ಲಿ (ಮಹಾರಾಷ್ಟ್ರ), ಮೇ 5-ಭಾರತೀಯ ಸೇನೆಯ ಅಧ್ಯದುನಿಕ ಲಘು ಹೆಲಿಕಾಪ್ಟರ್ ಇಂಜಿನ್‌ನಲ್ಲಿ ತಾಂತ್ರಿಕ ದೋಷದಿಂದಾಗಿ ಮಹಾರಾಷ್ಟ್ರದ ಸಾಂಗ್ಲಿ ಜಿಲ್ಲೆಯ ಜಮೀನೊಂದರಲ್ಲಿ ಮುನ್ನೆಚ್ಚರಿಕೆಯಿಂದ ತುರ್ತ ಲ್ಯಾಂಡಿಂಗ್ ಮಾಡಿದೆ.
ಮೂವರು ಸೇನಾ ಸಿಬ್ಬಂದಿ ಇಬ್ಬರು ಪೈಲಟ್‌ಗಳು ಮತ್ತು ತಂತ್ರಜ್ಞರು ವಿಮಾನದಲ್ಲಿದ್ದರು, ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.
ಆರ್ಮಿ ಏವಿಯೇಷನ್ ಕಾರ್ಫ್ಸ್ ಗೆ ಸೇರಿದ ಹೆಲಿಕಾಪ್ಟರ್ ಮಹಾರಾಷ್ಟ್ರದ ನಾಸಿಕ್‌ನಿಂದ ಬೆಂಗಳೂರಿಗೆ ಹೋಗುತ್ತಿತ್ತು ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.ತಾಂತ್ರಿಕ ಸಮಸ್ಯೆಯಿಂದಾಗಿ ಸಾಂಗ್ಲಿ ಜಿಲ್ಲೆಯ ಮೀರಜ್ ತಹಸಿಲ್‌ನ ಎರಂಡೋಲಿ ಗ್ರಾಮದ ಬಳಿಯ ಜಮೀನಿನಲ್ಲಿ ಮುಂಜಾಗ್ರತಾ ಕ್ರಮವಾಗಿ ಲ್ಯಾಂಡಿಂಗ್ ಮಾಡಲಾಗಿದೆ ಎಂದು ಅವರು ಹೇಳಿದರು.
ಒಂದೆರಡು ಗಂಟೆಗಳ ನಂತರ, ಮತ್ತೊಂದು ಹೆಲಿಕಾಪ್ಟರ್ ತಾಂತ್ರಿಕ ಸಹಾಯದಿಂದ ಬಂದಿತು. ನಂತರ ಸಮಸ್ಯೆಯನ್ನು ಸರಿಪಡಿಸಲಾಯಿತು ಮತ್ತು ಎರಡೂ ಹೆಲಿಕಾಪ್ಟರ್‌ಗಳು ನಂತರ ಟೇಕಾಫ್ ಆದವು ಎಂದು ಅಧಿಕಾರಿ ತಿಳಿಸಿದ್ದಾರೆ.