Thursday, May 23, 2024
Homeರಾಷ್ಟ್ರೀಯಗಂಡನ ಸಾಲಕ್ಕೆ ಹೆಂಡತಿಯನ್ನು ಅಡ ಇಟ್ಟುಕೊಂಡ ಬ್ಯಾಂಕ್‌ ಅಧಿಕಾರಿಣಿ

ಗಂಡನ ಸಾಲಕ್ಕೆ ಹೆಂಡತಿಯನ್ನು ಅಡ ಇಟ್ಟುಕೊಂಡ ಬ್ಯಾಂಕ್‌ ಅಧಿಕಾರಿಣಿ

ಸೇಲಂ, ಮೇ 3 : ಇಲ್ಲಿನ ಖಾಸಗಿ ಬ್ಯಾಂಕ್‌ನ ಅಧಿಕಾರಿಗಳು ಗಂಡ ಸಾಲ ವಾಪಸ್‌‍ ತೀರಿಸಲು ವಿಳಂಬ ಮಾಡಿದ ಎಂದು ಆತನ ಪತ್ನಿಯನ್ನುಅಡ ಇಟ್ಟ ವಸ್ತುವಂತೆ ರಾತ್ರಿಯಾಗುವ ವರೆಗೂ ಇರಿಸಿಕೊಂಡ ಘಟನೆ ಭಾರಿ ವಿವಾದಕ್ಕೆ ಕಾರಣವಾಗಿದೆ.

ಸೇಲಂನ ವಳಪ್ಪಾಡಿ ಎಂಬಲ್ಲಿ ಈ ಘಟನೆ ನಡೆದಿದ್ದು ಭಾರಿ ಆಕ್ರೋಶಕ್ಕೆ ಕಾರಣವಾಗಿದೆ. ಖಾಸಗಿ ಬ್ಯಾಂಕ್‌ನಲ್ಲಿ ಸಾಲ ಪಡೆದಿದ್ದ ಕೂಲಿ ಕಾರ್ಮಿಕ ಸಾಲದ ಕಂತು ಕಟ್ಟಿರಲಿಲ್ಲ ಈ ಸಂದರ್ಭದಲ್ಲಿ ಬ್ಯಾಂಕ್‌ನ ಉದ್ಯೋಗಿಯೊಬ್ಬರು ಆತನ ಮನೆಗೆ ಹೋಗಿ ಆತನ ಹೆಂಡತಿಯನ್ನು ಬ್ಯಾಂಕ್‌ಗೆ ಕರೆತಂದಿದ್ದಾನೆ .

ವಳಪ್ಪಾಡಿ ಬಳಿಯ ತುಕ್ಕಿಯಂಪಾಳಯಂ ನಿವಾಸಿ ಪ್ರಶಾಂತ್‌ ಕಳೆದ ನಾಲ್ಕು ತಿಂಗಳ ಹಿಂದೆ ಖಾಸಗಿ ಬ್ಯಾಂಕ್‌ನಿಂದ 35,000 ರೂ ಸಾಲ ಪಡೆದುಕೊಂಡಿರುತ್ತಾನೆ. ವಾರಕ್ಕೆ 770 ರೂನಂತೆ 52 ತಿಂಗಳು ಕಂತುಗಳಲ್ಲಿ ಸಾಲ ಮರುಪಾವತಿಗೆ ಒಪ್ಪಂದ ಆಗಿರುತ್ತದೆ. ಇನ್ನು ಕೇವಲ 10 ವಾರದ ಕಂತು ಮಾತ್ರವೇ ಬಾಕಿ ಇತ್ತು ಎನ್ನಲಾಗಿದೆ.

ಬ್ಯಾಂಕ್‌ನವರು ಪತ್ನಿಯನ್ನು ಕರೆದುಕೊಂಡು ಹೋಗಿದ್ದಾರೆ ಎಂದು ತಿಳಿದ ಪ್ರಶಾಂತ್‌ ಸಂಜೆ 7:30ಕ್ಕೆ ಓಡಡಿ ಬಂದು ಹಣ ಕಟ್ಟಿದ್ದಾರೆ ಬಳಿಕವಷ್ಟೇ ಹೆಂಡತಿಯನ್ನು ಬ್ಯಾಂಕ್‌ನಿಂದ ಆಚೆಗೆ ಕಳುಹಿಸಲಾಗಿದೆ.

ವರದಿ ಪ್ರಕಾರ ಶುಭಾ ಎನ್ನುವ ಬ್ಯಾಂಕ್‌ ಉದ್ಯೋಗಿ ಏಪ್ರಿಲ್‌ 30ರಂದು ಸಾಲದ ವಿಚಾರವಾಗಿ ಪ್ರಶಾಂತ್‌ಗೆ ಫೋನ್‌ ಮಾಡಿದ್ದಾಳೆ. ಫೋನ್‌ ಎತ್ತದಾಗ ಆತನ ಮನೆಗೆ ಹೋಗಿದ್ದಾಳೆ. ಇಲ್ಲಿ ಪ್ರಶಾಂತ್‌ ಇರಲಿಲ್ಲ. ಆತನ ಹೆಂಡತಿ ಗೌರಿ ಶಂಕರಿಯನ್ನು ಬ್ಯಾಂಕ್‌ ಕಚೇರಿಗೆ ಕರೆ ತರುತ್ತಾಳೆ. ಪ್ರಶಾಂತ್‌ ಬಂದು ಸಾಲದ ಕಂತು ಕಟ್ಟುವವರೆಗೂ ಆಕೆಯನ್ನು ಕಚೇರಿಯಲ್ಲೇ ಇರಿಸಲಾಗುತ್ತದೆ.

ಪ್ರಶಾಂತ್‌ ಪೊಲೀಸ್‌‍ ಠಾಣೆಗೆ ಹೋಗಿ ದೂರು ಕೊಟ್ಟಿದ್ದಾರೆ. ಆರ್‌ಬಿಐ ನಿಯಮದ ಪ್ರಕಾರ ಸಂಜೆ 6 ಗಂಟೆಯ ಬಳಿಕ ಗ್ರಾಹಕರಿಗೆ ಸಾಲ ವಸೂಲಾತಿ ಹೆಸರಿನಲ್ಲಿ ಕಿರುಕುಳ ನೀಡಬಾರದು. ಆದರೆ ಇಲ್ಲಿನ ಬ್ಯಾಂಕ್‌ ಅಧಿಕಾರಿ ವಿರುದ್ದ ಪ್ರಕರಣ ದಾಖಲಾಗಿದೆ.

RELATED ARTICLES

Latest News