Monday, December 2, 2024
Homeಬೆಂಗಳೂರುಶೀಲ ಶಂಕಿಸಿ ಕೋಳಿ ಕತ್ತರಿಸುವ ಮಚ್ಚಿನಲ್ಲಿ ಪತ್ನಿಯನ್ನು ಕೊಂದಿದ್ದ ಪತಿಯ ಸೆರೆ

ಶೀಲ ಶಂಕಿಸಿ ಕೋಳಿ ಕತ್ತರಿಸುವ ಮಚ್ಚಿನಲ್ಲಿ ಪತ್ನಿಯನ್ನು ಕೊಂದಿದ್ದ ಪತಿಯ ಸೆರೆ

Arrest of a husband who killed his wife with a machete under the suspicion of Sheela

ಬೆಂಗಳೂರು,ಅ.19- ಪತ್ನಿ ಶೀಲ ಶಂಕಿಸಿ ಕೋಳಿ ಕತ್ತರಿಸುವ ಮಚ್ಚಿನಿಂದ ಹಲ್ಲೆ ನಡೆಸಿ ಭೀಕರವಾಗಿ ಕೊಲೆ ಮಾಡಿ ಪರಾರಿಯಾಗಿದ್ದ ಪತ್ನಿಯನ್ನು ಬಾಗಲೂರು ಠಾಣೆ ಪೊಲೀಸರು ಬಂಧಿಸಿದ್ದಾರೆ. ಯಲಹಂಕ ತಾಲ್ಲೂಕು ಬೂದಿಗೆರೆ ಹೋಬಳಿ ಸಿಂಗಹಳ್ಳಿ ಗ್ರಾಮದಲ್ಲಿ ಚಿಕನ್‌ ಅಂಗಡಿ ಇಟ್ಟುಕೊಂಡು ಜೀವನ ಮಾಡಿಕೊಂಡಿದ್ದ ಆರೋಪಿ ಪತಿ ಶ್ರೀನಿವಾಸ್‌‍ನನ್ನು (52) ಪೊಲೀಸರು ಬಂಧಿಸಿದ್ದಾರೆ.

ಬಾಗಲೂರಿನ ಸಿಂಗೇನಹಳ್ಳಿಯಲ್ಲಿ ಶ್ರೀನಿವಾಸ್‌‍ ಕುಟುಂಬ ವಾಸವಾಗಿದ್ದು, ಪ್ರತಿನಿತ್ಯ ನಾನಾ ಕಾರಣಗಳಿಗೆ ಪತ್ನಿ ಸುಧಾ (50) ಜೊತೆ ಜಗಳವಾಡುತ್ತಿದ್ದನು. ಹಲವು ವರ್ಷಗಳಿಂದ ಕೌಟುಂಬಿಕ ವಿಚಾರವಾಗಿ ದಂಪತಿ ಮಧ್ಯೆ ಮನಸ್ತಾಪವಿದ್ದುದರಿಂದ ಪತಿಯನ್ನು ತೊರೆದು ತನ್ನ ತವರು ಮನೆ ಹೊಸಕೋಟೆಗೆ ಸುಧಾ ಹೋಗಿದ್ದರು.

ಇವರ ಇಬ್ಬರು ಮಕ್ಕಳು ತಾಯಿಯನ್ನು ಸಮಾಧಾನಪಡಿಸಿ ಮನೆಗೆ ವಾಪಾಸ್‌‍ ಕರೆತಂದಿದ್ದರು. ಸ್ವಲ್ಪ ದಿನ ಇವರ ಮನೆಯಲ್ಲಿ ಶಾಂತಿ ನೆಲೆಸಿತ್ತು.ತದನಂತರದಲ್ಲಿ ಶ್ರೀನಿವಾಸ್‌‍ ಮತ್ತೆ ತನ್ನ ಹಳೇ ಚಾಳಿ ಮುಂದುವರೆಸಿ ಪತ್ನಿ ಶೀಲ ಶಂಕಿಸಿ ಜಗಳವಾಡಿದ್ದಾನೆ.

ನಿನ್ನ ಬೆಳಿಗ್ಗೆ ಸುಧಾ ಅವರ ಪುತ್ರ ಅರ್ಜುನ್‌ ಸಿಂಗಹಳ್ಳಿಯಲ್ಲಿರುವ ಹಾಲಿನ ಡೈರಿ ಬಳಿಗೆ ಲಾರಿಗೆ ಹಾಲು ತುಂಬಿಸಲು ಹೋಗಿದ್ದಾರೆ.ಆ ವೇಳೆ ಸುಧಾ ಅವರು ಮನೆ ಹಿಂಬದಿ ಹಿತ್ತಲಿನಲ್ಲಿ ಕೆಲಸದಲ್ಲಿ ನಿರತರಾಗಿದ್ದಾಗ, ಕ್ಷುಲ್ಲಕ ವಿಚಾರಕ್ಕೆ ಪತ್ನಿ ಜೊತೆ ಜಗಳವಾಡಿ ಕೋಳಿ ಕತ್ತರಿಸುವ ಮಚ್ಚಿನಿಂದ ಮನಬಂದಂತೆ ಹಲ್ಲೆ ನಡೆಸಿದ್ದರಿಂದ ಕೈ ಬೆರಳು ತುಂಡಾಗಿದ್ದಲ್ಲದೆ ಕತ್ತಿಗೆ ಬಲವಾದ ಪೆಟ್ಟು ಬಿದ್ದು ಸಹಾಯಕ್ಕಾಗಿ ಕೂಗಿಕೊಂಡರಾದರೂ ತೀವ್ರ ರಕ್ತಸ್ರಾವದಿಂದ ಕೊನೆಯುಸಿರೆಳೆದಿದ್ದಾರೆ.

ಸ್ಥಳೀಯರು ಸ್ಥಳಕ್ಕೆ ಬರುತ್ತಿದ್ದಂತೆ ಆರೋಪಿ ಶ್ರೀನಿವಾಸ್‌‍ ಪರಾರಿಯಾಗಿದ್ದನು. ಈ ಬಗ್ಗೆ ಮಗ ನೀಡಿದ ದೂರು ದಾಖಲಿಸಿಕೊಂಡು ಪೊಲೀಸರು ಕೆಲವೇ ಗಂಟೆಗಳಲ್ಲಿ ಆರೋಪಿ ಶ್ರೀನಿವಾಸನನ್ನು ಬಂಧಿಸಿ ಮುಂದಿನ ಕ್ರಮ ಕೈಗೊಂಡಿದ್ದಾರೆ.

RELATED ARTICLES

Latest News