Thursday, December 5, 2024
Homeರಾಷ್ಟ್ರೀಯ | Nationalನಿಷೇಧಿತ ಸಂಘಟನೆಯ ಇಬ್ಬರು ಉಗ್ರರ ಬಂಧನ

ನಿಷೇಧಿತ ಸಂಘಟನೆಯ ಇಬ್ಬರು ಉಗ್ರರ ಬಂಧನ

Arrest of two Terrorists of banned organization

ಇಂಫಾಲ್, ಅ. 19 (ಪಿಟಿಐ) ಮಣಿಪುರದ ಇಂಫಾಲ್ ಪೂರ್ವ ಜಿಲ್ಲೆಯಲ್ಲಿ ಇಬ್ಬರು ಉಗ್ರರನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಬಂಧಿತರನ್ನು ನಿಷೇಧಿತ ಕಂಗ್ಲೇಪಕ್ ಕಮ್ಯುನಿಸ್ಟ್ ಪಕ್ಷದ (ಪೀಪಲ್ಸ್ ವಾರ್ ಗ್ರೂಪ್ ) ಮುತುಮ್ ಇನಾವೋ ಸಿಂಗ್ (31) ಮತ್ತು ಖ್ವೈರಕ್‌ಪಂ ರಾಜೇನ್ ಸಿಂಗ್ (25) ಎಂದು ಗುರುತಿಸಲಾಗಿದೆ.

ಸುಲಿಗೆ ಮತ್ತು ಇತರ ಪೂರ್ವಾಗ್ರಹ ಚಟುವಟಿಕೆಗಳ ಆರೋಪದ ಮೇಲೆ ಪುರಿರೊಂಬಾ ಖೊಂಗ್ನಾಖಾಂಗ್ ಪ್ರದೇಶದಿಂದ ಅವರನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಅವರಿಂದ ಒಂದು ದ್ವಿಚಕ್ರ ವಾಹನ, ಮೂರು ಮೊಬೈಲ್ ಫೋನ್, 7,600 ರೂ.ನಗದನ್ನು ವಶಪಡಿಸಿಕೊಳ್ಳಲಾಗಿದೆ. ಕಳೆದ ಹಲವಾರು ದಿನಗಳಿಂದ ಮಣಿಪುರ ಪೊಲೀಸರು ರಾಜ್ಯದಾದ್ಯಂತ ಕಾರ್ಯಚರಣೆ ನಡೆಸುತ್ತಿದ್ದು, ಇದುವರೆಗೂ ಹಲವಾರು ಉಗ್ರರನ್ನು ಬಂಧಿಸಿದ್ದಾರೆ.

RELATED ARTICLES

Latest News