Sunday, September 15, 2024
Homeಕ್ರೀಡಾ ಸುದ್ದಿ | Sportsಚಿನ್ನದ ಹುಡುಗನಿಗೆ ಎಮ್ಮೆಯ ಉಡುಗೊರೆ

ಚಿನ್ನದ ಹುಡುಗನಿಗೆ ಎಮ್ಮೆಯ ಉಡುಗೊರೆ

ಕರಾಚಿ,ಆ.13- ಸಾಮಾನ್ಯವಾಗಿ ಕ್ರೀಡೆಯಲ್ಲಿ ಪ್ರಶಸ್ತಿ ಗೆದ್ದಾಗ ಈ ಕ್ರೀಡಾಪಟುವಿಗೆ ನಗದು ಬಹುಮಾನ, ಕಾರು, ಬೈಕ್‌ ಹೀಗೆ ಇತರ ಬೆಲೆ ಬಾಳುವ ವಸ್ತುಗಳನ್ನು ಉಡುಗೊರೆಯಾಗಿ ನೀಡಲಾಗುತ್ತದೆ. ಆದರೆ, ಪ್ಯಾರಿಸ್‌‍ ಒಲಿಂಪಿಕ್ಸ್ಸನಲ್ಲಿ ದಾಖಲೆಯೊಂದಿಗೆ ಚಿನ್ನದ ಪದಕ ಗೆದ್ದ ಪಾಕಿಸ್ತಾನದ ಜಾವೆಲಿನ್‌ ಎಸೆತಗಾರ ಅರ್ಷದ್‌ ನದೀಮ್‌ಗೆ ಉಡುಗೊರೆಯೊಂದು ದೊರಕಿದೆ. ಅದು ಕೂಡ ಅವರ ಮಾವನಿಂದ.

ಅರ್ಷದ್‌ಗೆ ಅವರ ಪತ್ನಿಯ ತಂದೆ(ಮಾವ) ಮಹಮದ್‌ ನವಾಜ್‌ ಅವರು ಎಮೆಯನ್ನು ಉಡುಗೊರೆಯಾಗಿ ನೀಡಿದ್ದಾರೆ. ಈ ಬಗ್ಗೆ ಮಾತನಾಡಿರುವ ಮಹಮದ್‌ ನವಾಜ್‌, ನಮ್ಮ ಗ್ರಾಮದಲ್ಲಿ ಎಮೆಯನ್ನು ಉಡುಗೊರೆಯಾಗಿ ನೀಡುವುದು ಶ್ರೇಷ್ಠ ಗೌರವವಾಗಿದೆ ಎಂದು ಹೇಳಿದ್ದಾರೆ.

ಚಿನ್ನ ಗೆದ್ದ ನದೀಮ್‌ಗೆ ಪಾಕಿಸ್ತಾನ ಪ್ರಾಂತ್ಯದ ಪಂಜಾಬ್‌ ಮುಖ್ಯಮಂತ್ರಿ ಮರ್ಯಮ್‌ ನವಾಜ್‌ 10 ಕೋಟಿ ರೂ., ಸಿಂಧ್‌ ಸರ್ಕಾರ ಐದು ಕೋಟಿ ರೂ., ವಿಶ್ವ ಅಥ್ಲೀಟ್‌ ಫೆಡರೇಶನ್‌ ಒಂದು ಕೋಟಿ 40 ಲಕ್ಷ ಬಹುಮಾನ ಘೋಷಿಸಿದ್ದು, ಸಿಂಧ್‌ ಗವರ್ನರ್‌ ಕಮ್ರಾನ್‌ ತೆಸ್ಸೋರಿ, ಕ್ರಿಕೆಟಿಗ ಅಹದ್‌ ಶೆಹಜಾದ್‌ ಮತ್ತು ಓರ್ಷ ಗಾಯಕ 30 ಲಕ್ಷಗಳನ್ನು ನೀಡಿದ್ದರು.

ಪಾಕಿಸ್ತಾನದ ಪಂಜಾಬ್‌ನಲ್ಲಿರುವ ಮಿಯಾನ್‌ ಚಾನುವಿನಲ್ಲಿನ ಬಡ ಪಂಜಾಬಿ ಕುಟುಂಬದಲ್ಲಿ ಜನಿಸಿದ ಅರ್ಷದ್‌ ನದೀಮ್‌‍, ಇಂದು ಜಾಗತಿಕ ಮಟ್ಟದಲ್ಲಿ ಸಾಧನೆ ಮಾಡಬೇಕಾದರೆ ಅವರು ಪಟ್ಟ ಕಷ್ಟ ಅಷ್ಟಿಷ್ಟಲ್ಲ. ತಂದೆ ಮುಹಮದ್‌ ಅಶ್ರ್‌‍ ಗಾರೆ ಮೇಸಿ ಆಗಿದ್ದ ಕಾರಣ, ಕುಟುಂಬಕ್ಕೆ ನೆರವಾಗುವ ನಿಟ್ಟಿನಲ್ಲಿ ಅರ್ಷದ್‌ ನದೀಮ್‌ ಕೂಡ ತಂದೆಯ ಜತೆ ಗಾರೆ ಕೆಲಸವನ್ನು ಮಾಡಿದ್ದರು. ಇದರೆ ಜತೆಗೆ ಕ್ರೀಡೆಯಲ್ಲೂ ತಮನ್ನು ತಾವು ತೊಡಗಿಸಿಕೊಂಡಿದ್ದರು.

ಅರ್ಷದ್‌ ಅವರು ರಾಷ್ಟ್ರೀಯ ಮಟ್ಟದಲ್ಲಿ ದೇಶಕ್ಕೆ ಹಲವು ಪದಕಗಳನ್ನು ಗೆದ್ದು ಕೊಟ್ಟರೂ ಕೂಡ ಪಾಕಿಸ್ತಾನ ಸರ್ಕಾರ ಅವರಿಗೆ ಕಿಂಚಿತ್ತೂ ಹಣಕಾಸಿಕ ನೆರವು ನೀಡಲೇ ಇಲ್ಲ. ಕಳೆದ ಟೋಕಿಯೋ ಒಲಿಂಪಿಕ್ಸ್ಸನಲ್ಲಿ, ಈ ಬಾರಿಯ ಪ್ಯಾರಿಸ್‌‍ ಒಲಿಂಪಿಕ್ಸ್ಸನಲ್ಲಿಯೂ ನದೀಮ್‌ ಪಾಲ್ಗೊಂಡಿದ್ದ ಸಂದರ್ಭದಲ್ಲಿ ಅವರಿಗೆ ಪಾಕ್‌ ಸರ್ಕಾರದಿಂದ ಯಾವುದೇ ಬೆಂಬಲ ಸಿಕ್ಕಿರಲಿಲ್ಲ. ಊರಿನ ಜನರಿಂದ ಸಿಕ್ಕ ಹಣಕಾಸಿಕ ನೆರವಿನಿಂದ ಟೋಕಿಯೋದಲ್ಲಿ ಪಾಲ್ಗೊಂಡಿದ್ದರು. ಅಲ್ಲಿ 5ನೇ ಸ್ಥಾನ ಪಡೆದಿದ್ದರು. ಈ ಬಾರಿ ಪ್ಯಾರಿಸ್‌‍ನಲ್ಲಿ ಚಿನ್ನದ ಪದಕ ಗೆದ್ದು ಸಂಭ್ರಮಿಸಿದರು.

RELATED ARTICLES

Latest News