Friday, September 20, 2024
Homeರಾಷ್ಟ್ರೀಯ | National370ನೇ ವಿಧಿ ರದ್ದಿಗೆ 5 ವರ್ಷ, ಅಮರನಾಥ ಯಾತ್ರೆಗೆ ತಾತ್ಕಾಲಿಕ ಬ್ರೇಕ್‌

370ನೇ ವಿಧಿ ರದ್ದಿಗೆ 5 ವರ್ಷ, ಅಮರನಾಥ ಯಾತ್ರೆಗೆ ತಾತ್ಕಾಲಿಕ ಬ್ರೇಕ್‌

ಜಮ್ಮು, ಆ. 5 (ಪಿಟಿಐ) ಕಣಿವೆಯಲ್ಲಿ 370 ನೇ ವಿಧಿಯನ್ನು ರದ್ದುಗೊಳಿಸಿದ ಐದನೇ ವಾರ್ಷಿಕೋತ್ಸವದ ಹಿನ್ನೆಲೆಯಲ್ಲಿ ಮುಂಜಾಗ್ರತಾ ಕ್ರಮವಾಗಿ ಯಾವುದೇ ಹೊಸ ಅಮರನಾಥ ಯಾತ್ರ ಯಾತ್ರಿಗಳಿಗೆ ಇಲ್ಲಿನ ಭಗವತಿ ನಗರ ಮೂಲ ಶಿಬಿರದಿಂದ ಕಾಶೀರಕ್ಕೆ ತೆರಳಲು ಅನುಮತಿ ನೀಡಲಾಗಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಈ ವರ್ಷ ಇದುವರೆಗೆ 3,880 ಮೀಟರ್‌ ಎತ್ತರದ ಗುಹಾ ದೇಗುಲದಲ್ಲಿ 4.90 ಲಕ್ಷಕ್ಕೂ ಹೆಚ್ಚು ಯಾತ್ರಾರ್ಥಿಗಳು ಪೂಜೆ ಸಲ್ಲಿಸಿದ್ದಾರೆ. ಮುಂಜಾಗ್ರತಾ ಕ್ರಮವಾಗಿ ದಿನದ ಮಟ್ಟಿಗೆ ಯಾತ್ರೆಯನ್ನು ಸ್ಥಗಿತಗೊಳಿಸಲಾಗಿದೆ. ಇಂದು ಜಮುವಿನಿಂದ ಕಾಶೀರಕ್ಕೆ ಯಾವುದೇ ಹೊಸ ಬ್ಯಾಚ್‌ ಅನ್ನು ಅನುಮತಿಸಲಾಗಿಲ್ಲ ಎಂದು ಅಧಿಕಾರಿಯೊಬ್ಬರು ಪಿಟಿಐಗೆ ತಿಳಿಸಿದ್ದಾರೆ.

370 ನೇ ವಿಧಿಯನ್ನು ರದ್ದುಗೊಳಿಸಿದ ಐದನೇ ವಾರ್ಷಿಕೋತ್ಸವದ ಹಿನ್ನೆಲೆಯಲ್ಲಿ ಆಡಳಿತವು ಈ ಕ್ರಮವನ್ನು ತೆಗೆದುಕೊಂಡಿದೆ. ನಗರದಲ್ಲಿ ಭದ್ರತೆಯನ್ನು ಹೆಚ್ಚಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

2019 ರಂದು, ಕೇಂದ್ರವು ಸಂವಿಧಾನದ 370 ನೇ ವಿಧಿಯನ್ನು ರದ್ದುಗೊಳಿಸಿತು, ಇದು ಹಿಂದಿನ ಜಮು ಮತ್ತು ಕಾಶೀರ ರಾಜ್ಯಕ್ಕೆ ವಿಶೇಷ ಸ್ಥಾನಮಾನವನ್ನು ನೀಡಿತ್ತು ಮತ್ತು ಅದನ್ನು ಎರಡು ಕೇಂದ್ರಾಡಳಿತ ಪ್ರದೇಶಗಳಾಗಿ ವಿಂಗಡಿಸಿತು – ಜಮು ಮತ್ತು ಕಾಶೀರ ಮತ್ತು ಲಡಾಖ್‌ ಎಂದು ನಾಮಕರಣ ಮಾಡಲಾಗಿತ್ತು.

RELATED ARTICLES

Latest News