Thursday, July 4, 2024
Homeರಾಷ್ಟ್ರೀಯಜಾಮೀನು ಸಿಕ್ಕ ಖುಷಿಯಲ್ಲಿದ್ದ ಕೇಜ್ರಿವಾಲ್‌ಗೆ ನಿರಾಸೆ, ಜೈಲಿನಿಂದ ಬಿಡುಗಡೆಗೆ ತಡೆಯಾಜ್ಞೆ

ಜಾಮೀನು ಸಿಕ್ಕ ಖುಷಿಯಲ್ಲಿದ್ದ ಕೇಜ್ರಿವಾಲ್‌ಗೆ ನಿರಾಸೆ, ಜೈಲಿನಿಂದ ಬಿಡುಗಡೆಗೆ ತಡೆಯಾಜ್ಞೆ

ನವದೆಹಲಿ,ಜೂ.21- ಅಬಕಾರಿ ನೀತಿ ಹಗರಣದ ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಕೆಳ ನ್ಯಾಯಾಲಯದಿಂದ ಜಾಮೀನು ಪಡೆದ ಖುಷಿಯಲ್ಲಿದ್ದ ಸಿಎಂ ಅರವಿಂದ್‌ ಕೇಜ್ರಿವಾಲ್‌ ಅವರಿಗೆ ಮತ್ತೆ ಹಿನ್ನಡೆಯಾಗಿದೆ.ಬಿಡುಗಡೆ ಮಾಡುವ ಆದೇಶಕ್ಕೆ ದೆಹಲಿ ಹೈಕೋರ್ಟ್‌ ತಡೆಯಾಜ್ಞೆ ನೀಡಿದೆ. ತಿಹಾರ್‌ ಜೈಲಿನಲ್ಲಿರುವ ಕೇಜ್ರಿವಾಲ್‌ ಅವರು ಬಿಡುಗಡೆಯಾಗಲು ಅಣಿಯಾಗುತ್ತಿರುವ ವೇಳೆಯೇ ದೆಹಲಿ ಹೈಕೋರ್ಟ್‌ ಈ ಆದೇಶ ನೀಡಿದೆ.

ಅಕ್ರಮ ಹಣ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಚಾರಣಾ ನ್ಯಾಯಾಲಯವು ದಿಲ್ಲಿ ಮುಖ್ಯಮಂತ್ರಿ ಅರವಿಂದ್‌ ಕೇಜ್ರಿವಾಲ್‌ ಅವರಿಗೆ ಮಂಜೂರು ಮಾಡಿರುವಜಾಮೀನನ್ನು ಪ್ರಶ್ನಿಸಿ ಜಾರಿ ನಿರ್ದೇಶನಾಲಯವು ಸಲ್ಲಿಸಿರುವ ತುರ್ತು ಅರ್ಜಿ ಆಲಿಸಿದ ದೆಹಲಿ ಹೈಕೋರ್ಟ್‌, ಅರವಿಂದ್‌ ಕೇಜ್ರಿವಾಲ್‌ರ ಬಿಡುಗಡೆಗೆ ತಡೆ ನೀಡಿದೆ.

ಅಬಕಾರಿ ನೀತಿ ಹಗರಣಕ್ಕೆ ಸಂಬಂಧಿಸಿದ ಹಣ ಅಕ್ರಮ ವರ್ಗಾವಣೆ ಪ್ರಕರಣದಲ್ಲಿ ಅರವಿಂದ್‌ ಕೇಜ್ರಿವಾಲ್‌ ಅವರಿಗೆ 1 ಲಕ್ಷ ರೂ. ಬಾಂಡ್‌ ಮೇಲೆ ದೆಹಲಿಯ ಮೇಲೆ ದೆಹಲಿಯ ರೋಸ್‌‍ ಅವೆನ್ಯೂ ನ್ಯಾಯಾಲಯ ನಿನ್ನೆ ಜಾಮೀನು ನೀಡಿತ್ತು. ಇದನ್ನು ಪ್ರಶ್ನಿಸಿ ಈಡಿ ಹೈಕೋರ್ಟ್‌ ಮೆಟ್ಟಿಲೇರಿತ್ತು.

ಜಾರಿ ನಿರ್ದೇಶನಾಲಯದ ಪರವಾಗಿ ಹೆಚ್ಚುವರಿ ಸಾಲಿಸಿಟರ್‌ ಜನರಲ್‌ ಎಸ್‌‍.ವಿ.ರಾಜು ಸಲ್ಲಿಸಿದ್ದ ತುರ್ತು ಅರ್ಜಿಯ ವಿಚಾರಣೆಯು ನ್ಯಾ. ಸುಧೀರ್‌ ಕುಮಾರ್‌ ಜೈನ್‌ ಹಾಗೂ ರವೀಂದರ್‌ ದುದೇಜ ಅವರನ್ನೊಳಗೊಂಡ ರಜಾಪೀಠದ ಮುಂದೆ ಬಂದಿತು. ಅರವಿಂದ್‌ ಕೇಜ್ರಿವಾಲ್‌ ಅವರಿಗೆ ವಿಚಾರಣಾ ನ್ಯಾಯಾಲಯವು ಮಂಜೂರು ಮಾಡಿರುವ ಜಾಮೀನಿಗೆ ತಡೆ ನೀಡಬೇಕು ಎಂದು ಹೆಚ್ಚುವರಿ ಸಾಲಿಸಿಟರ್‌ ಜನರಲ್‌ ಎಸ್‌‍.ವಿ.ರಾಜು ನ್ಯಾಯಾಲಯದ ಮುಂದೆ ವಾದ ಮಂಡಿಸಿದರು.

ಆದರೆ, ಈ ವಾದವನ್ನು ಅರವಿಂದ್‌ ಕೇಜ್ರಿವಾಲ್‌ ಪರ ಹಾಜರಿದ್ದ ಹಿರಿಯ ವಕೀಲ ಅಭಿಷೇಕ್‌ ಮನು ಸಿಂಘ್ವಿ ವಿರೋಧಿಸಿದರು. ಪ್ರಕರಣವನ್ನು ಹೈಕೋರ್ಟ್‌ ಕೈಗೆತ್ತಿಕೊಳ್ಳುವವರೆಗೆ ತಡೆಯಿರಿ. ದೆಹಲಿ ಹೈಕೋರ್ಟ್‌ ಪ್ರಕರಣವನ್ನು ಆಲಿಸುವವರೆಗೂ ವಿಚಾರಣಾ ನ್ಯಾಯಾಲಯದಲ್ಲಿ (ರೋಸ್‌‍ ಅವೆನ್ಯೂ) ಯಾವುದೇ ಪ್ರಕ್ರಿಯೆ ನಡೆಯಬಾರದು ಎಂದು ಪೀಠ ಸೂಚಿಸಿದೆ.ನಿನ್ನೆ ಕೇಜ್ರಿವಾಲ್‌ ಅವರ ಜಾಮೀನು ಅರ್ಜಿ ವಿಚಾರಣೆ ನಡೆಸಿದ್ದ ರೋಸ್‌‍ ಅವೆನ್ಯೂ ನ್ಯಾಯಾಲಯದ ನ್ಯಾಯಮೂರ್ತಿ ನ್ಯಾಯ ಬಿಂದು ಅವರ ರಜಾಕಾಲದ ಪೀಠವು, ದಿಲ್ಲಿ ಸಿಎಂಗೆ ಜಾಮೀನು ಮಂಜೂರು ಮಾಡಿತ್ತು.

ಅಲ್ಲದೆ, ಈ ಆದೇಶಕ್ಕೆ 48 ಗಂಟೆಗಳ ತಡೆ ನೀಡಬೇಕು ಎಂಬ ಜಾರಿ ನಿರ್ದೇಶನಾಲಯದ ಮನವಿಯನ್ನು ತಿರಸ್ಕರಿಸಿತ್ತು. 1 ಲಕ್ಷ ರೂ. ವೈಯಕ್ತಿಕ ಬಾಂಡ್‌ ಆಧಾರದಲ್ಲಿ ಕೇಜ್ರಿವಾಲ್‌ಗೆ ಜಾಮೀನು ನೀಡಲಾಗಿತ್ತು. ಜತೆಗೆ ತನಿಖೆಗೆ ಅಡ್ಡಿಪಡಿಸದಂತೆ ಅಥವಾ ಸಾಕ್ಷಿದಾರರ ಮೇಲೆ ಪ್ರಭಾವ ಬೀರಲು ಪ್ರಯತ್ನಿಸದಂತಹ ಹಲವು ಷರತ್ತುಗಳನ್ನು ನ್ಯಾಯಾಲಯ ವಿಧಿಸಿತ್ತು.

ಜಾರಿ ನಿರ್ದೇಶನಾಲಯದ ಪರ ಹಾಜರಾದ ಹೆಚ್ಚುವರಿ ಸಾಲಿಸಿಟರ್‌ ಜನರಲ್‌ ಎಸ್ವಿ ರಾಜು, ತನ್ನ ವಾದವನ್ನು ಮಂಡಿಸಲು ತನಿಖಾ ಸಂಸ್ಥೆಗೆ ಸೂಕ್ತ ಅವಕಾಶವನ್ನೇ ನೀಡಿಲ್ಲ ಎಂದುಹೈಕೋರ್ಟ್‌ ಗಮನಕ್ಕೆ ತಂದರು. ಆದೇಶವನ್ನು ಇನ್ನೂ ಅಪ್ಲೋಡ್‌ ಮಾಡಿಲ್ಲ. ಷರತ್ತುಗಳ ಬಗ್ಗೆ ತಿಳಿದುಬಂದಿಲ್ಲ. ನಮಗೆ ವಿರೋಧ ವ್ಯಕ್ತಪಡಿಸಲು ನ್ಯಾಯಸಮತ ಅವಕಾಶ ನೀಡಿಲ್ಲ ಎಂದು ಹೇಳಿದರು.

ಪ್ರಕರಣದಲ್ಲಿ ವಾದಿಸಲು ಅಥವಾ ಲಿಖಿತ ಅಹವಾಲುಗಳನ್ನು ಸಲ್ಲಿಸಲು ಸಾಕಷ್ಟು ಕಾಲಾವಕಾಶ ಕೊಟ್ಟಿಲ್ಲ. ಈ ಪ್ರಕ್ರಿಯೆ ನಡೆಯುತ್ತಿರುವ ರೀತಿ ಹತಾಶೆ ಮೂಡಿಸಿದೆ ಎಂದು ಆರೋಪಿಸಿದರು. ರಜಾಕಾಲದ ನ್ಯಾಯಾಧೀಶರ ಮುಂದಿನ ನನ್ನ ವಾದವನ್ನು ಕಡಿತಗೊಳಿಸಲಾಗಿದೆ. ಪ್ರತಿವಾದ ಮಂಡಿಸಲು ಸಹ ನಮಗೆ ಆಯ್ಕೆ ನೀಡಿಲ್ಲ. ಇದು ಖಂಡಿತ ನ್ಯಾಯಸಮತವಲ್ಲ ಎಂದು ಹೇಳಿದರು.

ದೆಹಲಿ ಸಿಎಂ ಅರವಿಂದ ಕೇಜ್ರಿವಾಲ್‌ ಅವರನ್ನು ಕಳೆದ ಮಾರ್ಚ್‌ 21ರಂದು ಇಡಿ ಬಂಧಿಸಿತ್ತು. ಲೋಕಸಭಾ ಚುನಾವಣಾ ಪ್ರಚಾರಕ್ಕಾಗಿ ಸುಪ್ರೀಂ ಕೋರ್ಟ್‌ ಜೂನ್‌ 1 ರವರೆಗೆ ಅವರಿಗೆ ಮಧ್ಯಂತರ ಜಾಮೀನು ನೀಡಿತ್ತು. ನಂತರ ಜೂನ್‌ 2 ರಂದು ಅವರು ಮತ್ತೆ ತಿಹಾರ್‌ ಜೈಲು ಅಧಿಕಾರಿಗಳ ಮುಂದೆ ಶರಣಾಗಿದ್ದರು.

ಲೋಕಸಭೆ ಚುನಾವಣೆ ಪ್ರಚಾರಕ್ಕಾಗಿ ಮೇ 10 ರಂದು ಅರವಿಂದ್‌ ಕೇಜ್ರಿವಾಲ್ಗೆ ಸುಪ್ರೀಂ ಕೋರ್ಟ್‌ ಮಧ್ಯಂತರ ಜಾಮೀನು ನೀಡಿತ್ತು. ಜೂನ್‌ 2 ರಂದು ಅವರು ಸುಪ್ರೀಂ ಕೋಟ್ರ್ಗೆ ಶರಣಾಗಿದ್ದರು. ಶರಣಾಗುವ ಮುನ್ನ ಅರವಿಂದ್‌ ಕೇಜ್ರಿವಾಲ್‌ ಒಮ್ಮೆ ಸುಪ್ರೀಂ ಕೋರ್ಟ್‌ ಮೆಟ್ಟಿಲೇರಿದ್ದರು. ಕೇಜ್ರಿವಾಲ್‌ ಅವರು ತಮ್ಮ ಮಧ್ಯಂತರ ಜಾಮೀನನ್ನು ಏಳು ದಿನಗಳ ಕಾಲ ವಿಸ್ತರಿಸುವಂತೆ ನ್ಯಾಯಾಲಯಕ್ಕೆ ಮನವಿ ಮಾಡಿದ್ದರು. ಆದರೆ ನ್ಯಾಯಾಲಯ ಕೇಜ್ರಿವಾಲ್‌ ಅವರ ಮನವಿಯನ್ನು ತಿರಸ್ಕರಿಸಿತ್ತು.

RELATED ARTICLES

Latest News