Saturday, July 20, 2024
Homeರಾಷ್ಟ್ರೀಯಐವತ್ತು ಪಾರಿವಾಳಗಳೊಂದಿಗೆ ಶವವಾಗಿ ಪತ್ತೆಯಾದ ವೃದ್ಧ ದಂಪತಿ

ಐವತ್ತು ಪಾರಿವಾಳಗಳೊಂದಿಗೆ ಶವವಾಗಿ ಪತ್ತೆಯಾದ ವೃದ್ಧ ದಂಪತಿ

ಬುಲಂದ್‌ಶಹರ್‌,ಜೂ.21- ಉತ್ತರ ಪ್ರದೇಶದ ಬುಲಂದ್‌ಶಹರ್‌ನ ದಿಬಾಯ್‌ನಲ್ಲಿ ವದ್ಧ ದಂಪತಿ ಐವತ್ತು ಪಾರಿವಾಳಗಳೊಂದಿಗೆ ಸಾವನ್ನಪ್ಪಿರುವ ವಿಲಕ್ಷಣ ಘಟನೆ ವರದಿಯಾಗಿದೆ.ಮೃತಪಟ್ಟ ವೃದ್ದ ದಂಪತಿಯನ್ನು ಲಕ್ಷ್ಮಣ್‌ ಸಿಂಗ್‌ (68) ಮತ್ತು ಶ್ಯಾಮವತಿ (66) ಎಂದು ಗುರುತಿಸಲಾಗಿದೆ.

ಐವತ್ತು ಪಾರಿವಾಳಗಳನ್ನು ಸಾಕಿದ್ದ ಈ ವೃದ್ಧ ದಂಪತಿ ಎಲ್ಲ ಪಾರಿವಾಳಗಳೊಂದಿಗೆ ಮನೆಯಲ್ಲಿ ಶವವಾಗಿ ಪತ್ತೆಯಾಗಿದ್ದಾರೆ.
ದಂಪತಿ ಸ್ವಂತವಾಗಿ ವಾಸಿಸುತ್ತಿದ್ದರು ಮತ್ತು ದೆಹಲಿಯಲ್ಲಿಯೇ ಇರುವ ಮಗನನ್ನು ಹೊಂದಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ. ಅಕ್ಕಪಕ್ಕದ ಮನೆಯವರು ದುರ್ವಾಸನೆ ಕಂಡು ಪೊಲೀಸರಿಗೆ ಮಾಹಿತಿ ನೀಡಿ ಬಾಗಿಲು ಒಡೆದ ಬಳಿಕ ಅವರ ಶವ ಪತ್ತೆಯಾಗಿದೆ.

ಅವರ ದೇಹಗಳು ಕೊಳೆಯುತ್ತಿವೆ, ಅವರು ಒಂದೆರಡು ದಿನಗಳ ಹಿಂದೆ ಸಾವನ್ನಪ್ಪಿರಬಹುದು ಎಂದು ಅಂದಾಜಿಸಲಾಗಿದೆ. ಸ್ಥಳದಲ್ಲೇ ಯಾವುದೇ ಗೋಚರ ಗಾಯದ ಗುರುತುಗಳಿಲ್ಲ. ಶವಪರೀಕ್ಷೆಯಿಂದ ಸಾವಿಗೆ ಕಾರಣ ತಿಳಿದುಬರಲಿದೆ ಎಂದು ದಿಬಾಯಿಯ ಸರ್ಕಲ್‌ ಆಫೀಸರ್‌ ರಾಮ್‌ ಕರಣ್‌ ಹೇಳಿದ್ದಾರೆ.

ಪ್ರಾಥಮಿಕ ತನಿಖೆಯ ಪ್ರಕಾರ ಪುರುಷ ದೀರ್ಘಕಾಲದ ಅನಾರೋಗ್ಯದಿಂದ ಸಾವನ್ನಪ್ಪಿದ್ದಾರೆ ಮತ್ತು ಮಹಿಳೆ ಬಹುಶಃ ಆಘಾತದಿಂದ ಸಾವನ್ನಪ್ಪಿರಬಹುದು ಎಂದು ರಾಮ್‌ ಕರಣ್‌ ಹೇಳಿದ್ದಾರೆ.ವಿವರವಾದ ತನಿಖೆ ನಡೆಯುತ್ತಿದೆ. ದಂಪತಿಯ ಮಗನಿಗೆ ಅವರ ಸಾವಿನ ಬಗ್ಗೆ ತಿಳಿಸಲಾಗಿದೆ ಎಂದು ಹಿರಿಯ ಅಧಿಕಾರಿ ಹೇಳಿದರು.

RELATED ARTICLES

Latest News