Friday, November 22, 2024
Homeರಾಷ್ಟ್ರೀಯ | Nationalತಿಹಾರ್‌ ಜೈಲಿಗೆ ಮರಳಿದ ಕೇಜ್ರಿವಾಲ್‌

ತಿಹಾರ್‌ ಜೈಲಿಗೆ ಮರಳಿದ ಕೇಜ್ರಿವಾಲ್‌

ನವದೆಹಲಿ,ಜೂ.2- ದೆಹಲಿ ಅಬಕಾರಿ ನೀತಿ ಪರಿಷ್ಕರಣೆಯಲ್ಲಿ ಆರೋಪಿ ಸ್ಥಾನದಲ್ಲಿರುವ ಮುಖ್ಯಮಂತ್ರಿ ಅರವಿಂದ್‌ ಕೇಜ್ರಿವಾಲ್‌ ಅವರು ಸುಪ್ರೀಂಕೋರ್ಟ್‌ ನಿರ್ದೇಶನದಂತೆ ಇಂದು ಪುನಃ ತಿಹಾರ್‌ ಜೈಲಿಗೆ ಶರಣಾದರು.

ಆರೋಗ್ಯದ ದೃಷ್ಟಿಯಿಂದ ತಮಗೆ ಜಾಮೀನು ಅವಧಿಯನ್ನು ಒಂದು ವಾರ ಕಾಲ ವಿಸ್ತರಣೆ ಮಾಡಬೇಕೆಂದು ಅವರು ಸುಪ್ರೀಂಕೋರ್ಟ್‌ಗೆ ತುರ್ತು ಮೇಲನವಿ ಅರ್ಜಿ ಸಲ್ಲಿಸಿದ್ದರು. ಆದರೆ ನ್ಯಾಯಾಲಯ ಈ ಅರ್ಜಿ ವಿಚಾರಣೆ ನಡೆಸಲು ತಿರಸ್ಕರಿಸಿ ಕೆಳಹಂತದ ನ್ಯಾಯಾಲಯದಲ್ಲಿ ಅರ್ಜಿ ಹಾಕುವಂತೆ ಸೂಚನೆ ನೀಡಿತ್ತು.

ಈ ಅರ್ಜಿ ವಿಚಾರಣೆ ಇದೇ ತಿಂಗಳ 5ರಂದು ದೆಹಲಿ ಹೈಕೋರ್ಟ್‌ನಲ್ಲಿ ಬರಲಿದ್ದು, ಅಷ್ಟರೊಳಗೆ ಸುಪ್ರೀಂಕೋರ್ಟ್‌ ಸೂಚನೆಯಂತೆ ಕೇಜ್ರಿವಾಲ್‌ ಅವರು ಇಂದು ಜೈಲಿಗೆ ತೆರಳಿದ್ದಾರೆ. ಒಂದೆಡೆ ಲೋಕಸಭಾ ಚುನಾವಣೆಯೂ ಮುಕ್ತಾಯಗೊಂಡಿದೆ, ಮತ್ತೊಂದೆಡೆ ಅರವಿಂದ್‌ ಕೇಜ್ರಿವಾಲ್‌‍ ಅವರ ಜಾಮೀನು ಅವಧಿ ಕೂಡ ಅಂತ್ಯಗೊಂಡಿದ್ದು, ಇಂದು ತಿಹಾರ್‌ ಜೈಲಿಗೆ ಮರಳಿದ್ದಾರೆ.

ತಿಹಾರ್‌ ಜೈಲಿಗೆ ಮರಳುವ ಮುನ್ನ ರಾಜ್‌ಘಾಟ್‌ನಲ್ಲಿರುವ ಮಹಾತ ಗಾಂಧಿಯವರ ಸಾರಕ, ಡಿಡಿಯು ಮಾರ್ಗದಲ್ಲಿರುವ ಪಕ್ಷದ ಕಚೇರಿ ಮತ್ತು ದೇವಸ್ಥಾನಕ್ಕೆ ಕೇಜ್ರಿವಾಲ್‌ ಭೇಟಿ ನೀಡಿದರು.ಇದಕ್ಕೂ ಮುನ್ನ ತಮ ಪಕ್ಷದ ನಾಯಕರೊಂದಿಗೆ ಕೇಜ್ರಿವಾಲ್‌ ಚಿಂತನ-ಮಂಥನ ನಡೆಸಿದ್ದು, ನಂತರ ತಮ ಅನುಪಸ್ಥಿತಿಯಲ್ಲಿ ಪಕ್ಷದ ಒಗ್ಗಟ್ಟು ಕಾಪಾಡುವ ಅಗತ್ಯವನ್ನು ಒತ್ತಿ ಹೇಳಿದರು.

ಗಂಭೀರ ಅನಾರೋಗ್ಯದ ಶಂಕೆ ವ್ಯಕ್ತಪಡಿಸಿರುವ ಕೇಜ್ರಿವಾಲ್‌, ಜಾಮೀನು ಅವಧಿ ವಿಸ್ತರಿಸುವಂತೆ ಸುಪ್ರೀಂಕೋರ್ಟ್‌ ಮೊರೆ ಹೋಗಿದ್ದರು. ಆದರೆ ಸುಪ್ರೀಂಕೋರ್ಟ್‌ ತಿರಸ್ಕರಿಸಿತ್ತು. ಬಳಿಕ ಹೈಕೋರ್ಟ್‌ ಮೊರೆ ಹೋಗಿದ್ದರು, ಅರ್ಜಿ ಆದೇಶವನ್ನು ಕೋರ್ಟ್‌ ಜೂನ್‌ 5ಕ್ಕೆ ಮುಂದೂಡಿದೆ.

ಅರವಿಂದ್‌ ಕೇಜ್ರಿವಾಲ್‌ 55 ದಿನಗಳ ಕಾಲ ಜೈಲಿನಲ್ಲಿದ್ದ ಬಳಿಕ ಮೇ 10ರಂದು ಜಾಮೀನಿನ ಮೇಲೆ ಹೊರಬಂದಿದ್ದರು. ಅವರು 10 ದಿನಗಳ ಕಾಲ ಜಾರಿ ನಿರ್ದೇಶನಾಲಯದ ವಶದಲ್ಲಿದ್ದರು. ಏಪ್ರಿಲ್‌ 1ರಂದು ನ್ಯಾಯಾಲಯವು ಅವರನ್ನು ನ್ಯಾಯಾಂಗ ಬಂಧನದಲ್ಲಿ ತಿಹಾರ್‌ ಜೈಲಿಗೆ ಕಳುಹಿಸಿತು. ಅಲ್ಲಿ 39 ದಿನಗಳನ್ನು ಕಳೆದಿದ್ದಾರೆ.

ಈ ಪ್ರಕರಣದಲ್ಲಿ ಅರವಿಂದ್‌ ಕೇಜ್ರಿವಾಲ್‌ಗೆ ಜಾರಿನಿರ್ದೇಶನಾಲಯ 9 ಬಾರಿ ನೋಟಿಸ್‌‍ ಜಾರಿ ಮಾಡಿತ್ತು. ಬಳಿಕ ಮಾರ್ಚ್‌ 21ರಂದು ಅವರನ್ನು ಬಂಧಿಸಲಾಗಿತ್ತು. ಕೇಜ್ರಿವಾಲ್‌ ಅಪರಾಧಿ ಎಂದು ಘೋಷಿಸಲಾಗಿಲ್ಲ.

RELATED ARTICLES

Latest News