Saturday, July 27, 2024
Homeಕ್ರೀಡಾ ಸುದ್ದಿನಾರ್ವೆ ಚೆಸ್‌‍ ಟೂರ್ನಿ : ವಿಶ್ವದ 2ನೇ ಶ್ರೇಯಾಂಕಿತನನ್ನು ಮಣಿಸಿದ ಪ್ರಜ್ಞಾನಂದ

ನಾರ್ವೆ ಚೆಸ್‌‍ ಟೂರ್ನಿ : ವಿಶ್ವದ 2ನೇ ಶ್ರೇಯಾಂಕಿತನನ್ನು ಮಣಿಸಿದ ಪ್ರಜ್ಞಾನಂದ

ನಾರ್ವೇ, ಜೂ.2- ನಾರ್ವೆ ಚೆಸ್‌‍ ಸ್ಪರ್ಧೆಯಲ್ಲಿ ವಿಶ್ವದ ಎರಡನೇ ಶ್ರೇಯಾಂಕದ ಆಟಗಾರ ಫ್ಯಾಬಿಯಾನೋ ಕರುವಾನಾ ಅವರನ್ನು ಮಣಿಸುವಲ್ಲಿ ಭಾರತದ ಚೆಸ್‌‍ ಸೆನ್ಸೇಷನ್‌ ಆಟಗಾರ ಆರ್‌. ಪ್ರಜ್ಞ್ನಾನಂದ ಸಫಲರಾಗಿದ್ದು ಚೆಸ್‌‍ ಪಂಡಿತರನ್ನು ದಿಗ್ಬ್ರಮೆಗೊಳಿಸಿದ್ದಾರೆ.

ಅವರು ಮೊದಲ ಬಾರಿಗೆ ಕ್ಲಾಸಿಕ್‌ ಚೆಸ್‌‍ನಲ್ಲಿ ವಿಶ್ವದ ನಂಬರ್‌ ಒನ್‌ ಆಟಗಾರ ನಾರ್ವೆಯ ವ್ಯಾಗ್ನಸ್‌‍ ಕಾರ್ಲ್‌ಸೆನ್‌ ಮತ್ತು ಇದೀಗ ವಿಶ್ವದ ಎರಡನೇ ಶ್ರೇಯಾಂಕದ ಕರುವಾನಾ ಅವರನ್ನು ಮಣಿಸುವ ಮೂಲಕ ಅಂತರರಾಷ್ಟ್ರೀಯ ಚೆಸ್‌‍ ಫೆಡರೇಶನ್‌ನ ವಿಶ್ವ ಶ್ರೇಯಾಂಕಗಳ ಮೊದಲ ಹತ್ತರೊಳಗೆ ಸ್ಥಾನ ಪಡೆದುಕೊಂಡಿದ್ದಾರೆ.

ಪ್ರಏ್ಞಾನಂದ ಅವರು 5 ನೇ ಸುತ್ತಿನಲ್ಲಿ ವಿಶ್ವದ ನಂ.2 ಫ್ಯಾಬಿಯಾನೊ ಕರುವಾನಾ ಅವರನ್ನು ಸೋಲಿಸುವ ಮೂಲಕ ಚೆಸ್‌‍ ಜಗತ್ತನ್ನು ಮತ್ತೊಮೆ ದಿಗ್ಭಮೆಗೊಳಿಸಿದ್ದಾರೆ.3 ನೇ ಸುತ್ತಿನಲ್ಲಿ ವಿಶ್ವದ ನಂ.1 ವ್ಯಾಗ್ನಸ್‌‍ ಕಾರ್ಲ್‌ಸೆನ್‌ ಅವರನ್ನು ಮಣಿಸಿದ ನಂತರ, ಅವರು ಈಗ ಮೊದಲ ಬಾರಿಗೆ ಶಾಸ್ತ್ರೀಯ ಚೆಸ್‌‍ನಲ್ಲಿ ಅಗ್ರ ಎರಡು ಆಟಗಾರರನ್ನು ಸೋಲಿಸಿದ್ದಾರೆ.

18ರ ಹರೆಯದ ಅವರು ಮೂರನೇ ಸುತ್ತಿನಲ್ಲಿ ಕಾರ್ಲ್‌ಸನ್‌ರನ್ನು ಸೋಲಿಸಿದ್ದರು. ಬಿಳಿ ಕಾಯಿಗಳನ್ನು ಬಳಸಿ, ಕಳೆದ ವರ್ಷದ ಫೀಡೆ ಚೆಸ್‌‍ ವಿಶ್ವಕಪ್‌ನ ರನ್ನರ್‌ಅಪ್‌ ಆಗಿದ್ದ ಅವರು ತಮ ಗೆಲುವಿಗಾಗಿ ಕಾರ್ಲ್‌ಸೆನ್‌ ವಿರುದ್ಧ ಕೆಲವು ಬುದ್ಧಿವಂತ ಚಲನೆಗಳನ್ನು ನಡೆಸಿ ಗಮನ ಸೆಳೆದರು.

ಮತ್ತೊಂದೆಡೆ, ಪ್ರಏ್ಞಾನಂದ ಅವರ ಸಹೋದರಿ ವೈಶಾಲಿ ಅವರು ಚೆಸ್‌‍ ದಂತಕಥೆ ಪಿಯಾ ಕ್ರಾಮ್ಲಿಂಗ್‌ ಅವರನ್ನು ಸೋಲಿಸುವ ಮೂಲಕ ತಮ ಪ್ರಾಬಲ್ಯವನ್ನು ಮುಂದುವರೆಸಿದ್ದಾರೆ. ಭಾರತೀಯ ಮಹಿಳಾ ಚೆಸ್‌‍ ಗ್ರ್ಯಾಂಡ್‌ಮಾಸ್ಟರ್‌ ಹಂಪಿ ಅವರು ಅನ್ನಾ ಮುಝಿಚುಕ್‌ ವಿರುದ್ಧ ಶಾಸ್ತ್ರೀಯ ಆಟದಲ್ಲಿ 4 ನೇ ಸುತ್ತಿನಲ್ಲಿ ಸೋತರು.

ನಾರ್ವೆ ಚೆಸ್‌‍ ಮಹಿಳಾ ಪಂದ್ಯಾವಳಿಯ ಮತ್ತೊಂದು ರೋಚಕ ಆಟದಲ್ಲಿ, ಜು ವೆಂಜುನ್‌ ಪಂದ್ಯಾವಳಿಯ ನಾಲ್ಕನೇ ಆರ್ಮಗೆಡನ್‌ ಟೈಬ್ರೇಕ್‌ನಲ್ಲಿ ತನ್ನ ದೇಶಬಾಂಧವರಾದ ಲೀ ಟೆಂಗ್ಜಿ ವಿರುದ್ಧ ಜಯಗಳಿಸಿದರು.

RELATED ARTICLES

Latest News